Advertisement

101 ಜನರಿಗೆ ಡೆಂಘೀ: ಹೆಚ್ಚುತ್ತಿದೆ ರೋಗಿಗಳ ಸಂಖ್ಯೆ

09:46 AM Sep 22, 2019 | Team Udayavani |

ಬಾಗಲಕೋಟೆ: ಕಳೆದ ತಿಂಗಳ ಮೂರು ನದಿಗಳ ಪ್ರವಾಹದಿಂದ ತತ್ತರಿಸಿದ ಜಿಲ್ಲೆಯ ಜನರು ಈಗ ಡೆಂಘೀ ಜ್ವರ ಉಲ್ಬಣಗೊಂಡಿರುವುದರಿಂದ ಮತ್ತೇ ಆತಂಕಕ್ಕೆ ಒಳಗಾಗಿದ್ದಾರೆ.ಜಿಲ್ಲೆಯಲ್ಲಿ ಈಗಾಗಲೇ 830 ಜನರು ಡೆಂಘೀ ಜ್ವರದಿಂದ ಬಳುತ್ತಿರುವ ಸಂಶಯ ವ್ಯಕ್ತಪಡಿಸಲಾಗಿದ್ದು, ಅದರಲ್ಲಿ ಈಗ 101 ಜನರಲ್ಲಿ ಡೆಂಘೀ ಜ್ವರ ಇದೆ ಎಂದು ಖಚಿತಪಡಿಸಲಾಗಿದೆ.

Advertisement

ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಸೆಪ್ಟೆಂಬರ್‌ನಲ್ಲಿ 8 ರಿಂದ 10 ರೋಗಿಗಳು ಡೆಂಘೀ ಜ್ವರ ಸಂಶಯದ ಮೇಲೆ ದಾಖಲಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಜನರು ಚಿಕಿತ್ಸೆ ಪಡೆದಿದ್ದಾರೆ. ಆಲ್ಲದೇ ಮೂವರು ಕಲೆ ದಿನಗಳ ಹಿಂದೆ ಡೆಂಘೀ ಜ್ವರದ ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ. ಬಾಗಲಕೋಟೆ ತಾಲೂಕಿನ ಬೀಳಗಿ ಮತಕ್ಷೇತ್ರದ ಸಿಂದಗಿ ಪುನರ್‌ವಸತಿ ಕೇಂದ್ರದಲ್ಲಿ 10 ರಿಂದ 15 ಜನರಲ್ಲಿ ಡೆಂಘೀ ರೋಗ ಲಕ್ಷಣಗಳಿತ್ತು. ಈಗ ಈ ಗ್ರಾಮದ ಜನರು ಭಯಗೊಂಡಿದ್ದಾರೆ ಎನ್ನಲಾಗಿದೆ. ಒಂದು ತಿಂಗಳಲ್ಲಿ ಡೆಂಘೀ ಜ್ವರದಿಂದ ಬಳಲುವ ರೋಗಿಗಳ ಹೆಚ್ಚಾಗುತ್ತಿದ್ದಾರೆ ಎನ್ನಲಾಗಿದೆ.

ನಮ್ಮ ಮನೆಯಲ್ಲಿ 5 ಜನರಿಗೆ ಡೆಂಘೀ ಜ್ವರ ಬಂದಿತ್ತು. ಇಬ್ಬರನ್ನು ಸರಕಾರಿ ಆಸ್ಪತ್ರೆ ಮತ್ತು ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ 5 ದಿನಗಳ ನನ್ನ ಮಗ ಮತ್ತು ನಮ್ಮ ಚಿಕ್ಕಪ್ಪನ ಮಗಳನ್ನು ದಾಖಲು ಮಾಡಿದ್ದೇವು. ಆದರೆ ಸಮರ್ಪಕ ಚಿಕಿತ್ಸೆ ದೊರೆಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. –ಯಲ್ಲಪ್ಪ ಹಿರೇಮನಿ, ಸಿಂದಗಿ ಪುನರ್‌ವಸತಿ ಕೇಂದ್ರದ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next