Advertisement

ಡೆಂಗ್ಯೂ ಇಳಿಕೆ; ಇಲಿಜ್ವರ ಉಲ್ಬಣ

11:14 AM Sep 06, 2019 | sudhir |

ಮಂಗಳೂರು: ನಗರದಲ್ಲಿ ಜುಲೈಯಲ್ಲಿ ಇಲಿಜ್ವರದ 17 ಪ್ರಕರಣ ಗಳು ದಾಖಲಾಗಿವೆ. ಈ ಬಗ್ಗೆ ಜನತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ| ಪ್ರವೀಣ್‌ ಕುಮಾರ್‌ ತಿಳಿಸಿದರು.

Advertisement

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಡೆಂಗ್ಯೂ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ ಇಲಿ ಜ್ವರ (ಲೆಪ್ಟೋಸ್ಪೈರೋಸಿಸ್‌) ಕಾಡಲಾರಂಭಿಸಿದೆ. ಮಲೇರಿಯಾವು ಇದೆ. ಇಲಿಜ್ವರ ವ್ಯಾಪಕವಾಗಿ ಹರಡುತ್ತಿ ರುವುದರಿಂದ ಎಚ್ಚರಿಕೆ ಅಗತ್ಯ. ಇಲಿಜ್ವರ ಲೆಪ್ಟೋಸ್ಪೈರ ಎಂಬ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ರೋಗ. ಈ ರೋಗಾಣು ಪ್ರಾಣಿಗಳ ಮೂತ್ರದಲ್ಲಿದ್ದು, ಅವು ಮಾನವ ದೇಹವನ್ನು ಸೇರಿ ಕಾಯಿಲೆ ಹರಡುತ್ತದೆ ಎಂದರು.

ಕ್ರಮಬದ್ಧ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಹೃದಯ, ಶ್ವಾಸಕೋಶ, ಮೂತ್ರಪಿಂಡ ಸೋಂಕು ಬಹಳ ವಿರಳವಾಗಿದ್ದರೂ ಅವುಗಳಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ಚಿಕಿತ್ಸೆಗೆ ವಿಳಂಬಿಸುವುದು ಸರಿಯಲ್ಲ. ಇದು ರೋಗಿಯಿಂದ ಆರೋಗ್ಯವಂತ ವ್ಯಕ್ತಿಗಳಿಗೆ ಹರಡುವ ಕಾಯಿಲೆಯಾಗಿರದ ಕಾರಣ ರೋಗಿಯನ್ನು ಇತರರಿಂದ ಪ್ರತ್ಯೇಕಿಸುವ ಅಗತ್ಯವಿರುವುದಲ್ಲಿ.

ಎಚ್‌1ಎನ್‌1 ಭಯ ಬೇಡ
ಎಚ್‌1ಎನ್‌1 ಕೂಡ ಸದ್ಯ ಜನರನ್ನು ಬಾಧಿಸುತ್ತಿದೆ. ಆದರೆ ಇದರ ಬಗ್ಗೆ ಭಯ ಅನಗತ್ಯ; ಎಚ್ಚರ ಅಗತ್ಯ ಎಂದು ಡಾ| ಪ್ರವೀಣ್‌ ಕುಮಾರ್‌ ತಿಳಿಸಿದರು.

957 ಡೆಂಗ್ಯೂ ಖಚಿತ
ಐದು ದಿನಗಳಿಂದ ಡೆಂಗ್ಯೂ ಬಾಧಿತ ರಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ
ಇಳಿಯುತ್ತಿದೆ. 2019ರ ಜನವರಿಯಿಂದ ಆಗಸ್ಟ್‌ವರೆಗೆ ಒಟ್ಟು 957 ಡೆಂಗ್ಯೂ ಖಚಿತ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 1,341 ಮಲೇರಿಯಾ ಪ್ರಕರಣ ಗಳು ವರದಿಯಾಗಿವೆ ಎಂದು ಕೀಟಜನ್ಯ ರೋಗ ಜಿಲ್ಲಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌ ತಿಳಿಸಿದರು.

Advertisement

ಮನಪಾ ವ್ಯಾಪ್ತಿಯಲ್ಲೇ ಅಧಿಕ ಡೆಂಗ್ಯೂ ಪ್ರಕರಣಗಳಲ್ಲಿ ಶೇ. 60ರಷ್ಟು
ಮನಪಾ ವ್ಯಾಪ್ತಿಯಲ್ಲಿ, ಮಲೇರಿಯಾ ಪ್ರಕರಣಗಳಲ್ಲಿ ಶೇ. 90ರಷ್ಟು ಮನಪಾ ವ್ಯಾಪ್ತಿಯಲ್ಲಿ ಕಂಡು ಬಂದಿವೆ. ರೆಫ್ರಿಜರೇಟರ್‌ನ ಟ್ರೇ, ಹೂಕುಂಡ, ಮೇಲ್ಛಾವಣಿ ಹಾಗೂ ವರಾಂಡಗಳಲ್ಲಿ, ಕಿಟಕಿ ಸಂದುಗಳಲ್ಲಿ ಡೆಂಗ್ಯೂ ಹರಡುವ ಈಡಿಸ್‌ ಸೊಳ್ಳೆಯ ಲಾರ್ವಾಗಳು ಪರಿಶೀಲನೆಯ ಸಂದರ್ಭ ಪತ್ತೆಯಾಗಿವೆ. ಜನರು ತಾವಾಗಿಯೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಮಲೇರಿಯಾವು ಮನೆಯ ಹೊರಗಡೆ ಶೇಖರವಾಗುವ ಸ್ವತ್ಛ ನೀರಿನಲ್ಲಿಯೇ ಸಂತಾನೋತ್ಪತ್ತಿ ಮಾಡುವ ಸೊಳ್ಳೆಗಳಿಂದ ಹರಡುತ್ತದೆ. ಮನಪಾ ವ್ಯಾಪ್ತಿಯ ಹಲವು ತೆರೆದ ಬಾವಿಗಳಲ್ಲಿ ಲಾರ್ವಾ ಪತ್ತೆಯಾಗಿದ್ದು, ಗಪ್ಪಿ ಮೀನು ಬಿಡುವ ಮೂಲಕ ಲಾರ್ವಾ ಗಳನ್ನು ತಡೆಯಬಹುದು ಎಂದರು.

ಇಲಿಜ್ವರದ ಬಗ್ಗೆ ಎಚ್ಚರವಿರಲಿ
ಮನೆಯ ಪರಿಸರದಲ್ಲಿರುವ ಇಲಿ, ಹೆಗ್ಗಣ, ಬೆಕ್ಕು, ನಾಯಿ, ದನ, ಆಡು ಮೊದಲಾದ ಸಾಕು ಪ್ರಾಣಿಗಳು ಹಾಗೂ ಕೆಲವು ಕಾಡು ಪ್ರಾಣಿಗಳ ದೇಹದಲ್ಲಿ ಈ ಸೂಕ್ಷ್ಮಾಣು ಇರುತ್ತದೆ. ಅಂತಹ ಪ್ರಾಣಿಗಳ ಮೂತ್ರವು ನೀರಿನಲ್ಲಿ ಸೇರಿ ರೋಗಾಣುಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ. ಇಂತಹ ಕಲುಷಿತ ನೀರು ಮನುಷ್ಯರ ದೇಹಕ್ಕೆ ತಾಗಿದಾಗ ಶರೀರದಲ್ಲಿ ಇರ ಬಹುದಾದ ಗಾಯಗಳ ಮೂಲಕ ರೋಗಾಣುಗಳು ದೇಹವನ್ನು ಪ್ರವೇಶಿಸುತ್ತವೆ. ಅಲ್ಲದೆ ಬಾಯಿ, ಮೂಗು ಮತ್ತು ಕಣ್ಣುಗಳ ಒಳ ಭಾಗದ ಮೂಲಕವೂ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದೆ. ರೋಗಾಣು ದೇಹ ಸೇರಿದ 4ರಿಂದ 19 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next