Advertisement

ತ್ಯಾಜ್ಯ ವಿಲೇವಾರಿಯಿಂದ ಡೆಂಘೀ ನಿಯಂತ್ರಣ ಸಾಧ್ಯ

08:46 AM Jul 26, 2019 | Team Udayavani |

ಕಾರವಾರ: ಪ್ರತಿಯೊಬ್ಬರೂ ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದರೆ ಡೆಂಘೀಯಂತಹ ಸೊಳ್ಳೆಯಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಡಿಎಚ್ಒ ಡಾ| ಜಿ.ಎನ್‌ ಅಶೋಕಕುಮಾರ ತಿಳಿಸಿದರು.

Advertisement

ಡೆಂಘೀ ವಿರೋಧಿ ಮಾಸಾಚರಣೆ ಪ್ರಯುಕ್ತ ನಡೆದ ಜನ ಜಾಗೃತಿ ಜಾಥಾಕ್ಕೆ ಡಿಎಚ್ಒ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಡೆಂಘೀ, ಮಲೇರಿಯಾ, ಫೈಲೇರಿಯಾದಂತಹ ರೋಗಗಳಿಗೆ ಸೊಳ್ಳೆಯೇ ಮೂಲವಾಗಿದೆ. ಮನೆಯ ಸುತ್ತಮುತ್ತ ಸ್ವಚ್ಛವಾಗಿಡದೆ ಸೊಳ್ಳೆಗಳ ಸೃಷ್ಟಿಗೆ ನಾವೇ ಕಾರಣರಾಗಿದ್ದೇವೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛವಾಗಿಟ್ಟುಕೊಂಡರೆ ಸೊಳ್ಳೆ ಉತ್ಪತ್ತಿ ನಿಯಂತ್ರಿಸಬಹುದು. ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಡೆಂಘೀ ತಡೆಗಟ್ಟಬಹುದು ಎಂದು ಹೇಳಿದರು.

ಜನ ಜಾಗೃತಿ ಜಾಥಾ ಡಿಎಚ್ಒ ಆವರಣದಿಂದ ಹೊರಟು ಗ್ರೀನ್‌ ಸ್ಟ್ರೀಟ್ ಮೂಲಕ ಸಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಕ್ಯಾಪ್ಟನ್‌ ರಮೇಶ್‌ ರಾವ್‌ ಸೇರಿದಂತೆ ಡಿಎಚ್ಒ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ನರ್ಸಿಂಗ್‌ ಮತ್ತು ಸರಕಾರಿ ಪದವಿ ಕಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಿಪಂ, ಡಿಎಚ್ಒ ಇಲಾಖೆ, ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲಿ ಜಾಥಾ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next