ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣ ಏರಿಕೆಯಾಗುತ್ತಿದೆ. ಕಳೆದೊಂದು ತಿಂಗಳಲ್ಲಿ ಡೆಂಗ್ಯೂ ಸಂಖ್ಯೆಯಲ್ಲಿ ದುಪ್ಪಟ್ಟು ಏರಿಕೆ ಕಂಡಿದೆ. ಇದುವರೆಗೆ 9 ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ.
2023ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಸೇರಿ ರಾಜ್ಯಾದ್ಯಂತ 6679 ಮಂದಿಯಲ್ಲಿ ಡೆಂಗ್ಯೂ ವರದಿಯಾಗಿದ್ದು, ಅ.10ರಂದು ಒಟ್ಟು 11,241ಕ್ಕೆ ಡೆಂಗ್ಯೂ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕಳೆದ 3-4 ತಿಂಗಳಿಂದ ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಆರೋಗ್ಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದರೂ, ಪ್ರಕರಣಗಳ ಸಂಖ್ಯೆ ಮಾತ್ರ ಏರುಗತಿಯಲ್ಲಿದೆ.
2405 ಗ್ರಾಮದಲ್ಲಿ ಡೆಂಗ್ಯೂ ಹಾವಳಿ: ರಾಜ್ಯದಲ್ಲಿನ 227 ತಾಲೂಕುಗಳ ಪೈಕಿ 163 ತಾಲೂಕುಗಳಲ್ಲಿನ 40 ಲಕ್ಷ ಜನಸಂಖ್ಯೆ ಹೊಂದಿರುವ ಒಟ್ಟು 2405 ಗ್ರಾಮಗಳು ಡೆಂಗ್ಯೂ ಹಾವಳಿಗೆ ಒಳಗಾಗಿದೆ. ಅತ್ಯಧಿಕ ಡೆಂಗ್ಯೂ ವರದಿಯಾದ ಜಿಲ್ಲಾವಾರು ವರದಿಯಲ್ಲಿ ಉಡುಪಿ, ಮೈಸೂರು, ದ.ಕ., ಶಿವಮೊಗ್ಗ, ವಿಜಯಪುರ ಜಿಲ್ಲೆಗಳು ಕ್ರಮವಾಗಿ ಮೊದಲ 5 ಸ್ಥಾನವನ್ನು ಪಡೆದುಕೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 6093 ಪಾಸಿಟಿವ್ ವರದಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4, ಉಡುಪಿ 2 ಹಾಗೂ ಹಾಸನ, ಕೊಡಗು, ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಡೆಂಗ್ಯೂ ಮರಣ ಪ್ರಕರಣ ವರದಿಯಾಗಿದೆ.
ಹವಾಮಾನ ವೈರಿತ್ಯ ಕಾರಣ: ಮಾನ್ಸೂನ್ ಪ್ರಾರಂಭದ ಬಳಿಕ ಡೆಂ à ಸಂಖ್ಯೆಯಲ್ಲಿ ಆರು ಪಟ್ಟು ಏರಿಕೆಯಾಗಿದೆ. ಪ್ರಸ್ತುತ ಹವಾಮಾನ ವೈಪರಿತ್ಯದಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದು ಗುಂಡಿಯಲ್ಲಿ ನೀರು ನಿಂತು ಡೆಂ à ಸೊಳ್ಳೆಗಳ ಉತ್ಪಾದನೆಯಾಗುತ್ತಿದೆ ಎನ್ನುವುದು ಆರೋಗ್ಯ ಇಲಾಖೆ ವಾದ.