Advertisement

Denghi: ಡೆಂಘಿಗೆ 4 ವರ್ಷದ ಬಾಲಕಿ ಸೇರಿ ಇಬ್ಬರು ಬಲಿ

10:04 PM Jun 13, 2024 | Suhan S |

ಧಾರವಾಡ/ಸಾಗರ: ಉತ್ತರ ಕರ್ನಾಟಕದಲ್ಲಿ ಡೆಂಘಿ ಜ್ವರದ ಹಾವಳಿ ಹೆಚ್ಚಾಗಿದ್ದು ಓರ್ವ ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಧಾರವಾಡ ತಾಲೂಕು ಮುಮ್ಮಿಗಟ್ಟಿ ಗ್ರಾಮದ ಸಮೃದ್ಧಿ ದೇಸಾಯಿ (4), ಸಾಗರ ಉಪವಿಭಾಗೀಯ ಆಸ್ಪತ್ರೆ ಡಯಾಲಿಸಿಸ್‌ ವಿಭಾಗದಲ್ಲಿ ಡಿ ಗ್ರೂಪ್‌ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್‌ (33) ಮೃತಪಟ್ಟಿದ್ದಾರೆ.

Advertisement

ತೀವ್ರ ಜ್ವರದಿಂದ ಬಳಲುತ್ತಿದ್ದ ಸಮೃದ್ಧಿ ದೇಸಾಯಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಿಸದೆ ಮಂಗಳವಾರ ಅಸುನೀಗಿದ್ದರೆ, ತಾಳಗುಪ್ಪ ನಿವಾಸಿ ನಾಗರಾಜ್‌ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next