Advertisement

Karnataka: ಜಾತಿಗಣತಿ ವರದಿ ಜಾರಿಗೆ ಶೋಷಿತರ ಶಕ್ತಿ ಪ್ರದರ್ಶನ

12:02 AM Jan 29, 2024 | Team Udayavani |

ಚಿತ್ರದುರ್ಗ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಎಚ್‌. ಕಾಂತರಾಜ್‌ ಅಧ್ಯಕ್ಷತೆಯಲ್ಲಿ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿ ವರದಿಯನ್ನು ರಾಜ್ಯ ಸರ ಕಾರ ಕೂಡಲೇ ಸ್ವೀಕರಿಸಬೇಕು ಎಂಬ ಹಕ್ಕೊತ್ತಾಯಕ್ಕೆ ಸ್ಪಂದಿಸಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ವರದಿಯನ್ನು ಸರಕಾರ ಸ್ವೀಕರಿಸಲಿದೆ ಎಂದು ಪ್ರಕಟಿಸಿದ್ದಾರೆ.

Advertisement

ನಗರದಲ್ಲಿ ರವಿವಾರ ನಡೆದ ಶೋಷಿತ ಸಮು ದಾಯಗಳ ಜಾಗೃತಿ ಸಮಾವೇಶದಲ್ಲಿ ಕೇಂದ್ರ ಸರಕಾರ ಕೂಡ ದೇಶವ್ಯಾಪಿ ಜಾತಿವಾರು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಲಾಯಿತು. ಜತೆಗೆ ಆರ್ಥಿಕ ಹಿಂದುಳಿದವರಿಗೆ ನೀಡಿರುವ ಶೇ. 10 ಮೀಸಲಾತಿ ರದ್ದುಪಡಿಸಬೇಕು, ಮಹಿಳಾ ಮೀಸಲು ಕಾಯ್ದೆ ಜಾರಿ ಮಾಡಬೇಕು ಎನ್ನುವುದರ ಸಹಿತ 12 ಬೇಡಿಕೆಗಳನ್ನು ಮಂಡಿಸಲಾಯಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಈ ಬೇಡಿಕೆಗಳಿಗೆ ನನ್ನ ಸಹಮತವಿದೆ. ಕಾಂತರಾಜ್‌ ಆಯೋಗದ ವರದಿಯನ್ನು ಖಂಡಿತ ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಸರ್ವಾಧಿ ಕಾರಿ ಅಲ್ಲ. ವರದಿ ಸ್ವೀಕರಿಸಿ ಸಚಿವ ಸಂಪುಟದಲ್ಲಿ ಮಂಡಿಸಿ ಚರ್ಚಿಸಿ ತೀರ್ಮಾನ ಮಾಡಬೇಕಿದೆ. ಅದರಲ್ಲಿ ಲೋಪದೋಷ ಗಳಿದ್ದರೆ ತಜ್ಞರ ಜತೆಗೆ ಮಾತನಾಡಿ ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದರು.

ನಿಮ್ಮ ಪರವಾಗಿರುವೆ
ರಾಜಕೀಯ ಅಧಿಕಾರ ಇರಲಿ, ಇಲ್ಲದಿ ರಲಿ; ಯಾವತ್ತೂ ನಿಮ್ಮ ಪರವಾಗಿರುತ್ತೇನೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಕಾಂತರಾಜ್‌ ಆಯೋಗಕ್ಕೆ 168 ಕೋಟಿ ರೂ. ಮಂಜೂರು ಮಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಲು ಹೇಳಿದ್ದೆ ಎಂದು ನೆನಪಿಸಿಕೊಂಡರು. ಆದರೆ ಸರಕಾರದ ಅವಧಿ ಮುಗಿಯುವಾಗ ವರದಿ ಪೂರ್ಣ ಆಗಿರಲಿಲ್ಲ. ಅನಂತರ ಅಧಿ ಕಾರಕ್ಕೆ ಬಂದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರಕಾರ ಅದನ್ನು ಸ್ವೀಕರಿಸಲಿಲ್ಲ ಎಂದು ಆರೋಪಿಸಿದರು. ಈಗ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್‌ ಹೆಗ್ಡೆ ಅವರಿಗೆ ವರದಿ ಕೊಡಲು ಸೂಚಿಸಲಾಗಿದೆ. ಹೈಕಮಾಂಡ್‌ ಕೂಡ ಈ ಬಗ್ಗೆ ಸಕಾರಾತ್ಮಕವಾಗಿದೆ. ನಾವು ಕೇಂದ್ರದಲ್ಲಿ ಅಧಿ ಕಾರಕ್ಕೆ ಬಂದರೆ ಎಲ್ಲ ರಾಜ್ಯ ಗಳಲ್ಲೂ ಜಾತಿಗಣತಿ ಮಾಡಿಸಲಾಗುವುದು ಎಂದು ರಾಹುಲ್‌ ಗಾಂಧಿಈಗಾಗಲೇ ಹೇಳಿದ್ದಾರೆ ಎಂದರು.

ಹಿಂದುಳಿದವರಿಗೆ, ಮಹಿಳೆಯರಿಗೆ ವಿಧಾನಸಭೆ- ಲೋಕಸಭೆಯಲ್ಲಿ ಮೀಸಲಾತಿ ಇರಬೇಕು. ಆದರೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಇದು ಬೇಕಾಗಿಲ್ಲ. ಈ ಕಾರಣಕ್ಕೆ ಸಂಸತ್‌ ಭವನದ ಉದ್ಘಾಟನೆ, ಅಯೋಧ್ಯೆ ಮಂದಿರದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ನಿಂದ ಎಲ್ಲ ವರ್ಗಕ್ಕೂ ರಕ್ಷಣೆ: ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ  ಎಲ್ಲ ಸಮುದಾಯ ಗಳಿಗೆ ನ್ಯಾಯ ಒದಗಿಸುವ ಆಶಯ ಹೊಂದಿದ್ದಾರೆ ಎಂದರು. ದೇಶದಲ್ಲಿ ಜಾತಿ ಗಣತಿ ಆಗಬೇಕು. ಎಲ್ಲ ವರ್ಗಗಳ ರಕ್ಷಣೆಗೆ ಕಾಂಗ್ರೆಸ್‌ ಸಿದ್ಧವಾಗಿದೆ ಎಂದು ಡಿಸಿಎಂ ಪ್ರತಿಪಾದಿಸಿದ್ದಾರೆ. ಕರ್ನಾಟಕದಲ್ಲಿ ಬದಲಾವಣೆಯ ಪರ್ವ ಕಾಣುತ್ತಿದೆ. ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ ಈ ದೇಶದ ಎಲ್ಲ ವರ್ಗದ ಜನರು ಅ ಧಿಕಾರಕ್ಕೆ ಬಂದಂತೆ. ಹಿಂದೆ ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ದಲಿತರ ಸಮಾವೇಶ ನಡೆಸಿ ಐದು ಗ್ಯಾರಂಟಿಯ ಭರವಸೆ ನೀಡಿದ್ದೆವು. ಈಗ ಆ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಐದು ಗ್ಯಾರಂಟಿಗಳಿಂದ ಕೈಗಟ್ಟಿಯಾಯಿತು. ಕಮಲ ಮುದುಡಿ ಹೋಯಿತು. ತೆನೆ ಹೊತ್ತ ಮಹಿಳೆ ತೆನೆಯನ್ನು ಎಸೆದು ಹೋದಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next