ಶಿರಸಿ: ಜೇನುಗೂಡಿನ ಹುಳಗಳ ಕಾರ್ಯ ವಿಧಾನ, ಮಕರಂದ-ಪರಾಗವನ್ನು ಸಂಗ್ರಹಿಸುವ ಬಗೆ, ಪೆಟ್ಟಿಗೆ ರಚನೆ ಇತ್ಯಾದಿ ವಿಷಯದ ಕುರಿತಾಗಿ ಮಕ್ಕಳಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡುವ ಅಪರೂಪದ ವಿಶೇಷ ಕಾರ್ಯಕ್ರಮ ಜೇನುಹಬ್ಬ ಪ್ರಕೃತಿ ಸಂಸ್ಥೆಯಲ್ಲಿ ನಡೆಯಿತು.
ಜೇನುಹುಳುಗಳಿಗೆ ಕಂಟಕ ಪ್ರಾಯವಾದ ಕಡುಜೀರಿಗೆಯಿಂದ ರಕ್ಷಣೆ, ಜೇನು ನಿರ್ವಹಣೆಯ ಮಾಹಿತಿ, ಹುಳುಗಳು ಜೇನುತುಪ್ಪವನ್ನು ಹೇಗೆ ಮಾಡುತ್ತದೆ, ಜೇನು ಹುಳುಗಳ ಸಂಸಾರ ನಿರ್ವಹಣೆ ಮತ್ತು ಹುಳುಗಳ ಕಾರ್ಯ ವೈಖರಿ ಸೇರಿದಂತೆ ಜೇನುಕೃಷಿಗೆ ಅತ್ಯಾವಶ್ಯಕ ಮಾಹಿತಿ ನೀಡಿದರು.
ಜೇನು ಸಾಕಾಣಿಕೆದಾರರಾದ ರಾಮಕೃಷ್ಣ ಹೆಗಡೆ ಸಬಕಾರ, ನರಸಿಂಹ ಹೆಗಡೆ ಹುಣಸೇಮಕ್ಕಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಉದಯ ಭಟ್ಟ ಶಿರಸಿ, ವಿಘ್ನೕಶ್ವರ ಹೆಗಡೆ ಹಳದಕೈ, ಅನಂತ ಭಟ್ಟ ಥಂಡಿಮನೆ, ಪ್ರಕೃತಿ ಸಂಸ್ಥೆಯ ಪಾಂಡುರಂಗ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Advertisement
ತಾಲೂಕಿನ ಸಾಲ್ಕಣಿ ಸಮೀಪದ ಶಶಿಮನೆಯ ಕೃಷಿಕ, ಸಾಮಾಜಿಕ ಕಾರ್ಯಕರ್ತ ಗಣಪತಿ ಹೆಗಡೆ ಮನೆಯಲ್ಲಿ ನಡೆದ ಎರಡನೇ ಜೇನುಹಬ್ಬಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ದಿನೇಶ ಹೆಗಡೆ ಶಶಿಮನೆ, ನಾಗರಾಜ ಹೆಗಡೆ ಹಿತ್ಲತೋಟ ಹಾಗೂ ಗಣೇಶ ಮುದ್ದಿನಪಾಲು ಭಾಗವಹಿಸಿದ್ದರು.