Advertisement

Demonstration of divine worship: ಚರ್ಚೆ ಹುಟ್ಟುಹಾಕಿದ ದೈವಾರಾಧನೆಯ ಕಲ್ಜಿಗ ಸಿನೆಮಾ!

02:10 AM Sep 14, 2024 | Team Udayavani |

ಮಂಗಳೂರು: ಶುಕ್ರವಾರ ಬಿಡುಗಡೆಯಾದ “ಕಲ್ಜಿಗ’ ಸಿನೆಮಾದಲ್ಲಿ ದೈವಾರಾಧನೆಯ ದೃಶ್ಯ ಬಳಸಲಾಗಿದೆ ಎಂಬ ಆರೋಪ ಚರ್ಚೆಗೆ ಗ್ರಾಸವಾಗಿದೆ.

Advertisement

ತುಳುನಾಡಿನ ಕಾರಣಿಕ ಶಕ್ತಿ ಕೊರಗಜ್ಜ ಬಗ್ಗೆ ಸಿನೆಮಾದಲ್ಲಿ ದೃಶ್ಯ ಪ್ರದರ್ಶಿಸಿದ್ದು ತಪ್ಪು ಎಂದು ಮಂಗಳೂ ರಿನ ದೈವಾರಾಧನೆ ಸಂರಕ್ಷಣ ಟ್ರಸ್ಟ್‌ ಹಾಗೂ ಇತರ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಘಟನೆ ಪ್ರಮುಖರು ಶ್ರೀ ಕ್ಷೇತ್ರ ಕದ್ರಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ್ದಾರೆ. “ದೈವಾರಾಧನೆ ಪ್ರದರ್ಶನದ ವಸ್ತುವಲ್ಲ. ಭಕ್ತಿಯಿಂದ ಪೂಜಿಸುವ ಆಚರಣೆಯನ್ನು ಈ ರೀತಿ ಪ್ರದರ್ಶಿಸಬಾರದು’ ಎಂದವರು ಹೇಳಿದರು.

ಈ ಮಧ್ಯೆ, ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ನಡೆಸಿ ಸುದ್ದಿಗಾರರ ಜತೆಗೆ ಮಾತನಾಡಿದ ನಟ ಅರ್ಜುನ್‌ ಕಾಪಿಕಾಡ್‌ “ನಾವು ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದು, ಪ್ರೇಕ್ಷಕರು ಪ್ರೀತಿ ನೀಡುತ್ತಿದ್ದಾರೆ. ಅಜ್ಜನ ಕುರಿತು ಅಪಪ್ರಚಾರ ಮಾಡಿಲ್ಲ. ಯಾರಿಗಾದರೂ ಮನಸ್ಸಿಗೆ ಬೇಸರವಾಗಿದ್ದಲ್ಲಿ, ಅವರು ಯಾವ ಸ್ಥಳಕ್ಕೆ ಬರುತ್ತಾರೋ ಅಲ್ಲಿಗೆ ಮುಂಚಿತವಾಗಿ ತಾನೇ ಬಂದು ನಿಂತು ಮಾತನಾಡುವೆ. ಸಿನೆಮಾ ನೋಡದೆ ವಿವಾದ ಬೇಡ. ಇಡೀ ಚಿತ್ರತಂಡ ಅಜ್ಜನ ಭಕ್ತರಾಗಿರುವುದರಿಂದ ಅಜ್ಜನ ದಯೆ ಸದಾ ನಮ್ಮ ಬೆನ್ನಲ್ಲಿ ಇರುವಂತೆ ಪ್ರಾರ್ಥನೆ ಮಾಡಿದ್ದೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next