Advertisement
ಕೇಂದ್ರ ಸರಕಾರದ ನೋಟು ಅಮಾನ್ಯದಿಂದ ಜನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ವಿಜಯ ಬ್ಯಾಂಕ್‌ನ್ನು ಉಳಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಶುಕ್ರವಾರ ಮಾತನಾಡಿದರು.
ನೋಟು ಅಮಾನ್ಯ ಮಾಡಿದರೆ ಕಪ್ಪು ಹಣ ನಿಗ್ರಹವಾಗಿ ದೇಶದ ಆರ್ಥಿಕ ಶಕ್ತಿ ಉತ್ತಮವಾಗುತ್ತದೆ ಎಂದೆಲ್ಲ ಸುಳ್ಳು ಮಾಹಿತಿಗಳನ್ನು ಕೇಂದ್ರ ಸರಕಾರ ನೀಡಿತ್ತು. ಆದರೆ ನೋಟು ಅಮಾನ್ಯವಾಗಿ 2 ವರ್ಷ ಕಳೆದರೂ ಅದರ ಪರಿಣಾಮವನ್ನು ಜನ ಈಗಲೂ ಅನುಭವಿಸುತ್ತಿದ್ದಾರೆ. ಇದರಿಂದಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನ ತತ್ತರಿಸುವಂತಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅಧಃಪತನ ದತ್ತ ಸಾಗಿವೆ. ನೋಟು ಅಮಾನ್ಯದಿಂದಾಗಿ ದೇಶದ ಇಡೀ ವ್ಯವಸ್ಥೆಯೇ ಸಮತೋಲನ ತಪ್ಪಿದೆ ಎಂದವರು ವಿಷಾದಿಸಿದರು.
Related Articles
ಸುಳ್ಳು ಭರವಸೆ ಮತ್ತು ಪ್ರಚಾರದ ಉದ್ದೇಶವನ್ನಿಟ್ಟುಕೊಂಡು ಜನ ಸಾಮಾನ್ಯರನ್ನು ನಿರಂತರ ಮೋಸ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಎಲ್ಲಿ ಹೋದರೂ ಮೋದಿ ಮೋದಿ ಎಂದು ಹೇಳುವುದೇ ಅವರ ಕೆಲಸವಾಗಿದೆ. ಹಿಂದೆಲ್ಲ ಕೃಷ್ಣಾಷ್ಟಮಿ, ಗಣೇಶ ಚೌತಿ ಹಬ್ಬ ಹರಿದಿನಗಳಲ್ಲಿ ಕೃಷ್ಣ, ಗಣೇಶನ ಹೆಸರು ಹೇಳುತ್ತಿದ್ದರು. ಈಗ ಅಷ್ಟಮಿ, ಚೌತಿಯಲ್ಲಿ, ಮೆರವಣಿಗೆಗಳಲ್ಲಿಯೂ ಮೋದಿ ಜಿಂದಾಬಾದ್ ಎನ್ನಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
Advertisement
ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿ’ಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಬಿ.ಎ. ಮೊದಿನ್ ಬಾವ, ಮೇಯರ್ ಭಾಸ್ಕರ್ ಮೊಲಿ, ಕಾಂಗ್ರೆಸ್ ನಾಯಕರಾದ ಮೋಹನ್ ಪಿ.ವಿ., ಕಳ್ಳಿಗೆ ತಾರನಾಥ ಶೆಟ್ಟಿ, ಜಿ.ಎ. ಬಾವ, ಎಂ.ಎಸ್. ಮೊಹಮ್ಮದ್, ನವೀನ್ ಡಿ’ಸೋಜಾ, ಯು. ಕೆ. ಮೋನು, ಶಶಿಧರ್ ಹೆಗ್ಡೆ, ಬಲ್‌ರಾಜ್ ರೈ, ಸದಾಶಿವ ಉಳ್ಳಾಲ್, ಪುರುಷೋತ್ತಮ ಚಿತ್ರಾಪುರ, ಇಬ್ರಾಹಿಂ ಕೋಡಿಜಾಲ್, ವಿಶ್ವಾಸ್‌ದಾಸ್, ನೀರಜ್‌ಪಾಲ್, ಕವಿತಾ ಸನಿಲ್, ಪ್ರವೀಣ್ ಆಳ್ವ, ಟಿ.ಕೆ. ಸುಧೀರ್, ಖಾಲಿದ್ ಉಜಿರೆ, ನಜೀರ್ ಬಜಾಲ್, ಅಶೋಕ್ ಡಿ.ಕೆ., ದೀಪಕ್ ಪೂಜಾರಿ ಮತ್ತಿತರರಿದ್ದರು.
ವಿಜಯ ಬ್ಯಾಂಕ್ ಜಿಲ್ಲೆಯ ಸ್ವಾಭಿಮಾನದ ಸಂಕೇತ ಎ.ಬಿ. ಶೆಟ್ಟಿ ಅವರು ಆರಂಭಿಸಿದ, ಮೂಲ್ಕಿ ಸುಂದರರಾಮ ಶೆಟ್ಟಿ ಅವರ ದೂರದೃಷ್ಟಿಯ ಫಲವಾದ ವಿಜಯ ಬ್ಯಾಂಕ್ ನಮ್ಮ ಜಿಲ್ಲೆಯ ಗೌರವದ ಪ್ರತೀಕವಾಗಿದೆ. ಜಿಲ್ಲೆಯ ಸ್ವಾಭಿಮಾನದ ಸಂಕೇತ ಈ ಬ್ಯಾಂಕ್. ಲಾಭದಾಯಕವಾಗಿ ಮುನ್ನಡೆಯುತ್ತಿರುವ ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿರುವ ದೇನಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲು ಹೊರಟಿರುವುದು ಖಂಡನೀಯ ಎಂದು ರಮಾನಾಥ ರೈ ತಿಳಿಸಿದರು. ಜಿಲ್ಲೆಯ ಸಂಸದರು, ಶಾಸಕರು ವಿಜಯಾ ಬ್ಯಾಂಕ್‌ನ ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಬ್ಯಾಂಕ್ ವಿಲೀನಗೊಂಡಲ್ಲಿ ಸಂಸದರು ಮತ್ತು ಶಾಸಕರು ಇದ್ದೂ ಇಲ್ಲದಂತೆ ಎಂದರು.