Advertisement

“ಕೇರಳ ಸರಕಾರದಿಂದ ಪ್ರಜಾತಂತ್ರ ವ್ಯವಸ್ಥೆ  ಧ್ವಂಸ’ 

12:30 AM Jan 17, 2019 | Team Udayavani |

ಶಬರಿಮಲೆಯಲ್ಲಿ ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಆಚಾರಗಳನ್ನು ಉಲ್ಲಂಘಿಸಿ ಶಬರಿಮಲೆಯ ಪಾವಿತ್ರÂಕ್ಕೆ ಧಕ್ಕೆ ತರಬೇಕೆಂಬ ಉದ್ದೇಶದಿಂದ ಸರಕಾರ ಅತ್ಯಂತ ನೀಚ ರೀತಿಯಲ್ಲಿ ನಡೆದು ಕೊಂಡಿದೆ. ಸಂಸ್ಕೃತಿ, ಧಾರ್ಮಿಕ ವ್ಯವಸ್ಥೆ ಮತ್ತು ನಂಬುಗೆಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಶ್ರೀಶನ್‌ ಮಾಸ್ಟರ್‌ ಅವರು ಹೇಳಿದರು.

Advertisement

ಕಾಸರಗೋಡು: ಸಿಪಿಎಂ ನೇತೃತ್ವದ ಎಡರಂಗ ಸರಕಾರ ಕೇರಳದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು, ವ್ಯವಸ್ಥೆಗಳನ್ನು ಧ್ವಂಸ ಮಾಡುತ್ತಿದೆ ಎಂದು ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷ ಕೆ.ಪಿ. ಶ್ರೀಶನ್‌ ಮಾಸ್ಟರ್‌ ಆರೋಪಿಸಿದರು.
 
ಕೇರಳ ಸರಕಾರದ ಹಿಂಸಾ ಪ್ರವೃತ್ತಿ ಮತ್ತು ಪೊಲೀಸ್‌ ದೌರ್ಜನ್ಯವನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಜನಪರ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
“ಶರಣಂ’ ಘೋಷಣೆ ಮೊಳಗಿಸಿದ ಅಯ್ಯಪ್ಪ ಭಕ್ತರನ್ನು ಜೈಲಿಗಟ್ಟುತ್ತಿರುವ ಪೊಲೀಸರು ಹಿಂಸೆಯಲ್ಲಿ ನಿರತರಾದ ಸಿಪಿಎಂ ಕಾರ್ಯಕರ್ತರನ್ನು ಬಂಧಿಸದೆ ರಾಜಾರೋಷವಾಗಿ ರಸ್ತೆ ಯಲ್ಲಿ ತಿರುಗಾಡಲು ಬಿಡುತ್ತಿರುವ ಪೊಲೀಸರು ಎಡರಂಗದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಶಬರಿಮಲೆ ವಿಚಾರದಲ್ಲಿ ಕೇರಳ ಸರಕಾರ ನಡೆದುಕೊಂಡ ರೀತಿ ಅತ್ಯಂತ ನಿಂದನಾರ್ಹ ಎಂದ ಅವರು ಶಬರಿಮಲೆಯ ಹೆಸರಿನಲ್ಲಿ ಅಯ್ಯಪ್ಪ ಭಕ್ತರನ್ನು, ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಿದ ಮಾತ್ರಕ್ಕೆ ಸರಕಾರದ ವಿರುದ್ಧ ಹೋರಾಟ ನಿಲ್ಲದು.  ಪಿಣರಾಯಿ ವಿಜಯನ್‌ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ತನಕ ಹೋರಾಟ ನಡೆಸುವುದಾಗಿ ಅವರು ಹೇಳಿದರು.  ಪಿಣರಾಯಿ ವಿಜಯನ್‌ ಸಿಪಿಎಂನ ಕೊನೆಯ ಮುಖ್ಯಮಂತ್ರಿ ಎಂದ ಅವರು ಇನ್ನು ಎಂದೆಂದಿಗೂ ಎಡರಂಗ ಸರಕಾರ ಅಧಿಕಾರಕ್ಕೆ ಬರದು ಎಂದರು. 

ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಅಧ್ಯಕ್ಷತೆ ವಹಿಸಿದರು. ಜನಪರ ಧರಣಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ. ವೇಲಾ ಯುಧನ್‌, ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾೖಕ್‌, ಬಿಡಿಜೆಎಸ್‌ ಮುಖಂಡ ರಾದ ರವೀಂದ್ರನ್‌, ವಿಜಯನ್‌, ಬಿಜೆಪಿ, ಬಿಡಿಜೆಎಸ್‌ ನಾಯಕ ರಾದ ಕೋಳಾರ್‌ ಸತೀಶ್ಚಂದ್ರ ಭಂಡಾರಿ, ಸದಾನಂದ ರೈ, ಶ್ರೀಕೃಷ್ಣ ಭಟ್‌, ಎನ್‌. ಸತೀಶ್‌, ಸವಿತಾ ಟೀಚರ್‌, ಸಂಧ್ಯಾ ಶೆಟ್ಟಿ, ಶಂಕರ್‌ ಕೆ, ಜಿ. ಚಂದ್ರನ್‌, ಸತ್ಯಶಂಕರ ಭಟ್‌, ಎ.ಕೆ. ಕಯ್ನಾರು, ದಿವಾಕರ ಆಚಾರ್ಯ, ವೆಂಕಟ್ರ ಮಣ ಅಡಿಗ, ಶ್ರೀಧರ ಕೂಡ್ಲು, ಸರೋಜಾ ಆರ್‌. ಬಲ್ಲಾಳ್‌, ಮಾಲತಿ ಸುರೇಶ್‌, ಕೃಷ್ಣನ್‌ ಕಣ್ಣೋತ್‌ ಮೊದಲಾ ದವರು ನೇತೃತ್ವ ನೀಡಿದರು. ಬಿಡಿಜೆಎಸ್‌ ಮುಖಂಡ ಗಣೇಶ್‌ ಪಾರೆಕಟ್ಟೆ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next