Advertisement

ಚೆನ್ನಾಗಿರುವುದನ್ನು ಕೆಡವಿ, ಹೊಸ ಡಿವೈಡರ್‌ ನಿರ್ಮಾಣ

12:43 PM May 05, 2022 | Team Udayavani |

ಉಡುಪಿ: ಅಂಬಾಗಿಲು- ಪೆರಂಪಳ್ಳಿ ಮೂಲಕ ಮಣಿಪಾಲ ಸಂಪರ್ಕಿಸುವ ಚತುಷ್ಪಥ ಕಾಮಗಾರಿ ಬಹುತೇಕ ಮುಗಿಯುವ ಹಂತ ದಲ್ಲಿದೆ. ರಸ್ತೆಯ ಮಧ್ಯದಲ್ಲಿ ಅಪಾಯ ಕಾರಿಯಾಗಿರುವ ಗೋಡೆಯನ್ನು ತೆರವುಗೊಳಿಸಲಾಗಿದೆ, ಚೆನ್ನಾಗಿದ್ದ ರಸ್ತೆ ವಿಭಾಜಕವನ್ನು ಅಭಿವೃದ್ಧಿ ಹೆಸರಿನಲ್ಲಿ ನೆಲಸಮ ಮಾಡಲಾಗಿದೆ.

Advertisement

ಒಂದಲ್ಲೊಂದು ಕಾರಣದಿಂದ ಈ ರಸ್ತೆ ಕಾಮಗಾರಿ ಸಾರ್ವಜನಿಕರ ಅಸಮಾ ಧಾನಕ್ಕೆ ಕಾರಣವಾಗುತ್ತಲೇ ಇದೆ. ಮಣಿಪಾಲದ ಕಾಯಿನ್‌ ವೃತ್ತದಿಂದ ಪೆರಂಪಳ್ಳಿ ಕಡೆಗೆ ಹೋಗುವ ಚತುಷ್ಪಥ ರಸ್ತೆಯು ಬಿವಿಟಿವರೆಗೂ ಡಿವೈಡರ್‌ ಸಹಿತ ಚೆನ್ನಾಗಿತ್ತು. ಆದರೆ, ಯಾವ ಕಾರಣಕ್ಕೆ ಡಿವೈಡ್‌ ತೆರವುಗೊಳಿಸಿ, ಮರು ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ರಸ್ತೆ ಕಾಮಗಾರಿ ನಡೆಸುತ್ತಿರುವ ಇಲಾಖೆಗಳ ಈ ಕ್ರಮಕ್ಕೆ ಸಾರ್ವಜನಿಕರು ಆಕ್ಷೇಪ, ಅಸಮಾಧಾನ ಹೊರ ಹಾಕಿದ್ದಾರೆ. ಜತೆಗೆ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ನಿಗಾಯನ್ನು 23 ಕೋ. ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ಟಿಡಿಆರ್‌ ಪ್ರಕ್ರಿಯೆ ಮೂಲಕ ಭೂಸ್ವಾಧೀನ, ಒಟ್ಟು 3.9 ಕಿ.ಮೀ. ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಪೂರಕ ಎಂಬಂತೆ ಹೊಟೇಲ್‌ ಕಂಟ್ರಿ ಇನ್‌ ಸಮೀಪದ ರಸ್ತೆ ವಿಭಾಜಕ ಹಳೆಯ ಮಾದರಿಯಲ್ಲಿ ಅವೈಜ್ಞಾನಿಕವಾಗಿ ರೂಪಿಸಲಾಗಿದೆ. ಹೊಸ ರಸ್ತೆಗೆ ಅನುಗುಣವಾಗಿ ನಿರ್ಮಾಣವಾಗಿಲ್ಲ ಎಂಬುದು ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ. ಹೀಗಾಗಿ ಅದನ್ನು ತೆರವುಗೊಳಿಸಿ ವ್ಯವಸ್ಥಿತವಾಗಿ ವಿಭಾಜಕ ರೂಪಿಸಲಾಗುತ್ತಿದೆ ಎನ್ನುತ್ತಿದ್ದಾರೆ.

ಅಪಾಯಕಾರಿ ಆವರಣ ಗೋಡೆಗಿಲ್ಲ ಮುಕ್ತಿ

ಪೆರಂಪಳ್ಳಿಯಲ್ಲಿರುವ ಕೇಂದ್ರ ಸರಕಾರದ ಆಹಾರ ನಿಗಮ ಡಿಪೋ ಆವರಣ ಗೋಡೆಯೊಂದು ಪ್ರಯಾಣಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದ್ದು, ಇದುವರೆಗೆ ಲೋಕೋಪಯೋಗಿ ಇಲಾಖೆಗೆ ಯಾವುದೆ ಸ್ಪಂದನೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆವರಣ ಗೋಡೆ ಮುಂದಿನ ದಿನಗಳಲ್ಲಿ ಗಂಭೀರ ಅಪಘಾತಕ್ಕೆ ಕಾರಣ ವಾಗುವುದರಿಂದ ಲೋಕೋಪಯೋಗಿ ಇಲಾಖೆ ಈ ಆವರಣಗೋಡೆ ಒಂದಿಷ್ಟು ಭಾಗವನ್ನು ತೆರವುಗಳಿಸಿ ನೇರವಾಗಿ ರಸ್ತೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು.

Advertisement

ಆಹಾರ ನಿಗಮದ ಕಚೇರಿಯ ಆವರಣಗೋಡೆ ತೀರ ಅಪಾಯಕಾರಿಯಾಗಿದ್ದು, ಈ ತಿರುವಿನಲ್ಲಿ ನಿಯಂತ್ರಣ ತಪ್ಪಿದರೆ ಗಂಭೀರ ಅಪಘಾತ ಸಂಭವಿಸಲಿದೆ. ಇಲ್ಲಿನ 40 ಮೀಟರ್‌ ಜಾಗವನ್ನು ರಸ್ತೆಗೆ ಕೊಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಕಾಮಗಾರಿ ಹೆಸರಲ್ಲಿ ಹಣ ಪೋಲು

ಚೆನ್ನಾಗಿಯೇ ಇದ್ದ ರಸ್ತೆ ವಿಭಾಜಕ ತೆರವುಗೊಳಿಸಿ ಮತ್ತೆ ಲಕ್ಷಾಂತರ ರೂ., ವ್ಯಯಿಸಿ ವಿಭಾಜಕ ನಿರ್ಮಿಸುತ್ತಿರುವುದು ಸರಿಯಾದ ಕ್ರಮವಲ್ಲ. ಸಾರ್ವಜನಿಕರ ತೆರಿಗೆಯ ಲಕ್ಷಾಂತರ ರೂ., ಹಣ ಪೋಲು ಮಾಡಲಾಗುತ್ತಿದೆ. ಚೆನ್ನಾಗಿದ್ದ ರಸ್ತೆ, ಚರಂಡಿಯನ್ನು ಮರು ಕಾಮಗಾರಿ, ಡಾಮರು ಹಾಕಿಸುವ ಹೆಸರಲ್ಲಿ ಕೋಟ್ಯಾಂತರ ರೂ.ಗಳನ್ನು ವ್ಯಯಿಸುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತ ವಿಶೇಷ ಎಚ್ಚರ ವಹಿಸುವ ತುರ್ತು ಅಗತ್ಯವಿದೆ.

ಹಳೆವಿಭಾಜಕ ತೆರವುಗೊಳಿಸಿ ವ್ಯವಸ್ಥಿತವಾಗಿ ನಿರ್ಮಾಣ

ಹೊಸ ರಸ್ತೆಗೆ ಅನುಗುಣವಾಗಿ ವಿಭಜಕ ನಿರ್ಮಾಣ ಮಾಡಬೇಕಿದ್ದು, 1 ಕಿ.ಮೀ ವ್ಯಾಪ್ತಿಯಲ್ಲಿ ಹಳೆ ವಿಭಾಜಕವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕಾಗಿ ವ್ಯವಸ್ಥಿತ ವಿಭಾಜಕ ನಿರ್ಮಿಸಲಾಗುತ್ತಿದೆ. -ಜಗದೀಶ್‌ ಭಟ್‌, ಎಇಇ, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next