Advertisement

ಅಮೆರಿಕ ಚುನಾವಣೆ: ಸೆನೆಟ್‌ನಲ್ಲಿ ಡೆಮಾಕ್ರಾಟಿಕ್‌ ಪಕ್ಷಕ್ಕೆ ಹಿಡಿತ

01:10 AM Nov 15, 2022 | Team Udayavani |

ವಾಷಿಂಗ್ಟನ್‌: ಅಮೆರಿಕ ಸಂಸತ್‌ನ ಮೇಲ್ಮನೆ ಸೆನೆಟ್‌ನಲ್ಲಿ ಆಡಳಿತಾರೂಡ ಡೆಮಾಕ್ರಾಟಿಕ್‌ ಪಾರ್ಟಿ ಹಿಡಿತ ಸಾಧಿಸಿದೆ. ಪ್ರಕಟವಾದ ಫ‌ಲಿತಾಂಶಗಳ ಪೈಕಿ 50 ಸ್ಥಾನಗಳನ್ನು ಪಡೆದುಕೊಂಡಿದೆ. ನಿರ್ಣಾಯಕವಾಗಿರುವ ಅರಿಜೋನಾ, ನೆವಾಡಾ, ಜಾರ್ಜಿಯಾದಲ್ಲಿನ ಮತ ಎಣಿಕೆ ಪೂರ್ತಿಯಾದ ಬಳಿಕ ಅಧ್ಯಕ್ಷ ಜೋ ಬೈಡೆನ್‌ ನೇತೃತ್ವದ ಆಡಳಿತ ಪಕ್ಷಕ್ಕೆ 50 ಸ್ಥಾನಗಳು ಪ್ರಾಪ್ತವಾಗಿವೆ. ಆದರೆ ಸಂಸತ್‌ನ ಕೆಳಮನೆ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಇನ್ನೂ ಬಹುಮತ ಯಾರಿಗೂ ಪ್ರಾಪ್ತವಾಗಿಲ್ಲ. ನ.15ರಂದು ಕೆಳಮನೆಯ ಪೂರ್ಣ ಪ್ರಮಾಣದ ಫ‌ಲಿತಾಂಶ ಲಭ್ಯವಾಗಲಿದೆ.

Advertisement

ಇಂದು ಟ್ರಂಪ್‌ ಘೋಷಣೆ?: ಅಮೆರಿಕ ಸಂಸತ್‌ನ ಮಧ್ಯಂತರ ಚುನಾವಣೆ ಫ‌ಲಿತಾಂಶ ರಿಪಬ್ಲಿಕನ್‌ ಪಾರ್ಟಿಯಲ್ಲಿ ಭಿನ್ನಮತದ ಗೆರೆಯನ್ನು ಮೂಡಿಸಿದೆ ಎಂದು ಹೇಳಲಾಗುತ್ತಿದೆ. ಅವರ ಪ್ರಚಾರ ವೈಖರಿ ಮತ್ತು ನಿರೀಕ್ಷಿತ ಫ‌ಲಿತಾಂಶ ಬಾರದೇ ಇರುವ ಹಿನ್ನೆಲೆಯಲ್ಲಿ ಫ್ಲಾರಿಡಾದ ಗವರ್ನರ್‌ ರಾನ್‌ ಡೆ ಸೈಂಟ್ಸ್‌ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗಿದೆ. ಅದಕ್ಕೆಲ್ಲ ಪೂರಕವಾಗಿ ಮಂಗಳವಾರ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 2024ರ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಅವರ ಆಪ್ತ ವಲಯ ಹೇಳಿಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next