Advertisement

ಡೆಮಾಕ್ರಾಟ್‌ ಅಧ್ಯಕ್ಷೀಯ ಅಭ್ಯರ್ಥಿ ಬಿಡೆನ್ ಕನ್ನಡದಲ್ಲೂ ಪ್ರಚಾರ

03:19 AM Aug 01, 2020 | Hari Prasad |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಸ್ಥಾನಕ್ಕಾಗಿ ರಿಪಬ್ಲಿಕನ್‌ ಮತ್ತು ಡೆಮಾಕ್ರಾಟ್‌ ಪಕ್ಷಗಳ ನಡುವೆ ನಡೆಯುತ್ತಿರುವ ಚುನಾವಣ ಪ್ರಚಾರದಲ್ಲಿ ಈಗ ಕನ್ನಡದ ಕಂಪು ಮೂಡಿದೆ.

Advertisement

ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಭಾರತೀಯ- ಅಮೆರಿಕನ್‌ ಸಮುದಾಯವನ್ನು ಸೆಳೆಯಲು ಡೆಮಾಕ್ರಾಟ್‌ ಅಧ್ಯಕ್ಷೀಯ ಆಕಾಂಕ್ಷಿ ಜೋ ಬಿಡೆನ್‌ ಮುಂದಾಗಿದ್ದು, ಕನ್ನಡ ಸಹಿತ 14 ಭಾಷೆಗಳಲ್ಲಿ ಪ್ರಚಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಪ್ರಚಾರ ಸರಕುಗಳನ್ನು ಬಳಸಲು ಬಿಡೆನ್‌ ತಂಡ ಆರಂಭಿಸಿದೆ.

ಈ ಭಾಷೆಗಳಲ್ಲಿ ಕನ್ನಡವೂ ಸೇರಿದೆ.ಕನ್ನಡ, ಹಿಂದಿ, ಪಂಜಾಬಿ, ತಮಿಳು, ತೆಲುಗು, ಬಂಗಾಳಿ, ಉರ್ದು, ಮಲಯಾಳ, ಒರಿಯಾ, ಮರಾಠಿ ಹಾಗೂ ನೇಪಾಳಿ ಭಾಷೆಯ ಮೂಲಕ ಮತದಾರರೊಂದಿಗೆ ಬಿಡೆನ್‌ ನೇರ ಸಂಪರ್ಕ ಸಾಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next