ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ವಿಜೇತರಾದರೆ ಭಾರತೀಯ ಐಟಿ ವೃತ್ತಿಪರರಲ್ಲಿ ಹೆಚ್ಚು ಬೇಡಿಕೆಯಿರುವ ಎಚ್-1ಬಿ ವೀಸಾಗಳ ಮೇಲಿನ ತಾತ್ಕಾಲಿಕ ಅಮಾನತನ್ನು ತೆಗೆದು ಹಾಕುವುದಾಗಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಏಷ್ಯನ್ – ಅಮೆರಿಕನ್, ಪೆಸಿಫಿಕ್ ದ್ವೀಪವಾಸಿಗಳ ವಿಷಯಗಳ ಕುರಿತು ಟೌನ್‌ಹಾಲ್‌ನಲ್ಲಿ ‘ಎನ್‌ಬಿಸಿ ನ್ಯೂಸ್ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಆರ್ಥಿಕ ಉನ್ನತಿಯಲ್ಲಿ ವಿದೇಶಿ ಕುಶಲ ಕೆಲಸಗಾರರ ಕೊಡುಗೆಯನ್ನು ಶ್ಲಾಘಿಸಿದ ಅವರು, ಏಕೀಕರಣ ಮತ್ತು ವೈವಿಧ್ಯ ನಮ್ಮ ವಲಸೆ ವ್ಯವಸ್ಥೆಯ ಆಧಾರ ಸ್ತಂಭಗಳು.
ಟ್ರಂಪ್ ವಲಸೆ ನೀತಿಗಳು ಕ್ರೂರ, ಅಮಾನವೀಯ ಎಂದು ಆರೋಪಿಸಿದ ಬಿಡೆನ್, ತಾವು ಅಧ್ಯಕ್ಷರಾದರೆ ಕುಟುಂಬಗಳನ್ನು ಏಕೀಕರಿಸುವ ಮೂಲಕ ವಲಸೆ ವ್ಯವಸ್ಥೆಯನ್ನು ಆಧುನೀಕರಿಸುವುದಾಗಿ ತಿಳಿಸಿದರು.
ಅಲ್ಲದೆ, ಪೂರ್ವ ಮತ್ತು ದಕ್ಷಿಣ ಏಶ್ಯಾದ 1 ಲಕ್ಷಕ್ಕೂ ಹೆಚ್ಚು ಅರ್ಹ ಕುಶಲ ಕಾರ್ಮಿಕರ ಕನಸುಗಳನ್ನು ರಕ್ಷಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.