ಕಾರ್ಕಳ: ಜಿಲ್ಲಾಡಳಿತ ಉಡುಪಿ, ತಾಲೂಕು ಆಡಳಿತ ಕಾರ್ಕಳ ಇವುಗಳ ವತಿಯಿಂದ ಎ. 3ರಂದು ಕಾರ್ಕಳದ ಸ್ವರಾಜ್ ಮೈದಾನದಿಂದ ಗಾಂಧಿ ಮೈದಾನ ತನಕ ಮತದಾನ ಜಾಗೃತಿ ಜಾಥ ನಡೆಯಿತು.
ತಾ| ಸಹಾಯಕ ಚುನಾವಣಾ ಅಧಿಕಾರಿ ಸಂತೋಷ್ ಕುಮಾರ್ ಚಾಲನೆ ನೀಡಿದರು.
ಎಸ್.ವಿ.ಟಿ. ಮಹಿಳಾ ಕಾಲೇಜು, ಶ್ರೀ ಭುವನೇಂದ್ರ ಕಾಲೇಜು, ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹನುಮಾನ್ ಐಟಿಐ ಕಾರ್ಕಳ, ಮೈಟೆಕ್ ಐಟಿಐ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಸುಮಾರು 900 ಮಂದಿ ಜಾಥಾದಲ್ಲಿ ಪಾಲ್ಗೊಂಡರು. ಶ್ರೀ ಭುವನೇಂದ್ರ ಕಾಲೇಜಿನ ಬ್ಯಾಂಡ್ ಸೆಟ್, ನಾಸಿಕ್ ಬ್ಯಾಂಡ್ ಸೆಟ್ ಗಮನ ಸೆಳೆದವು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೆ. ಹರ್ಷ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಚುನಾವಣೆ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿರ್ಭೀತರಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕು. ಧರ್ಮ, ಜಾತಿ, ಮತ, ಭಾಷೆಗೆ ಪ್ರೇರೇಪಣೆಗೊಳ್ಳದೇ ಯುವ ಜನಾಂಗ ಮತ ಚಲಾಯಿಸಬೇಕೆಂದು ಹೇಳಿದರು.
ಶಿಕ್ಷಕ ಕೃಷ್ಣ ನಿರ್ವಹಿಸಿದರು.