Advertisement
ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕ.ರಾ.ರ.ಸಾ.ಸಂ ಮಾಜಿ ಅಧ್ಯಕ್ಷ ಇಲಿಯಾಸ್ ಭಾಗವಾನ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪತ್ರಕರ್ತ ಸಂಘದ ಅಧ್ಯಕ್ಷ ರಘುವೀರ್‌ಸಿಂಗ್ ಠಾಕೂರ ಮಾತನಾಡಿದರು.
ಬಿಜೆಪಿ ಮುಖಂಡ ಗೋರಕನಾಥ ಶಾಖಾಪುರ, ಕಾ.ನಿ.ಪ.ಸಂ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಕಾ.ನಿ.ಪ.ಸಂ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಕಾ.ನಿ.ಪ.ಸಂ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಅವಂಟಿ, ತಹಶೀಲ್ದಾರ್ ಸುರೇಶ ವರ್ಮಾ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಷೀದ್ ಮಚಂìಟ್, ಕಾಂಗ್ರೆಸ್ ಮುಖಂಡ ಡಾ| ರವಿ ಚವ್ಹಾಣ, ನಗರ ಯೋಜನಾ ಪ್ರಾ ಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಜೆಡಿಎಸ್ ಅಧ್ಯಕ್ಷ ರಾಜ ಮಹಮ್ಮದ್, , ಅಡತ್ ಹಾಗೂ ದಾಲಮಿಲ್ ಸಂಘದ ಅಧ್ಯಕ್ಷ ಶಿವಕುಮಾರ ಇಂಗನಶೆಟ್ಟಿ, ಎಪಿಎಂಸಿ ಸದಸ್ಯ ವಿಶ್ವಾರಾಧ್ಯ ಬಿರಾಳ, ಚಿತ್ತಾಪುರ ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಅಫಜಲಪುರಕರ್, ನಗರಸಭೆ ಪೌರಾಯುಕ್ತ ಬಸವರಾಜ ಹೆಬ್ಟಾಳ, ತಾಪಂ ಇಒ ಡಾ| ಬಸಲಿಂಗಪ್ಪ ಡಿಗ್ಗಿ, ನಾಗರಾಜ ದಂಡಾವತಿ ಮತ್ತಿತರರಿದ್ದರು.
ರಾಜು ಕೋಬಾಳ ಮತ್ತು ದಶರಥ ಕೋಟನೂರ ನಾಡಗೀತೆ ಹಾಡಿದರು, ಲೋಹಿತ್ ಕಟ್ಟಿ ನಿರೂಪಿಸಿದರು, ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ಶಿವಕುಮಾರ ಕುಸಾಳೆ ವಂದಿಸಿದರು.
ಕ್ವಾಲಿಟಿ ಆಫ್ ಜರ್ನಲಿಸಂ ಕುರಿತಂತೆ ಮಾತನಾಡುವುದೇ ಬೇಡದಂತಾಗಿದೆ. ಮಾಧ್ಯಮಗಳು ಉದ್ಯಮಗಳಾಗಿ ಬದಲಾಗಿವೆ. ಜಾಹೀರಾತಿನ ಮೂಲಕ ಆರ್ಥಿಕತೆ ನಿರೀಕ್ಷೆ ಮಾಡುತ್ತಿರುವುದರಿಂದಾಗಿ ಕ್ವಾಲಿಟಿ ಕಡಿಮೆಯಾಗಿದೆ. ಇದರಲ್ಲಿ ಜನಪ್ರತಿನಿಧಿಗಳ ಪಾಲು ಇದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗವೂ ದಾರಿಯಲ್ಲಿ ನಡೆಯಬೇಕು. ಕಾರ್ಯಾಂಗ ಜೀ ಹೂಜೂರ್ ಕೆಲಸ ಮಾಡುತ್ತಿದೆ. ನ್ಯಾಯಾಂಗ ಕಾರ್ಯಾಂಗದ ಕೆಲಸ ಮಾಡುತ್ತಿದೆ. ಮಾಧ್ಯಮರಂಗ ನ್ಯಾಯಾಂಗದ ಕೆಲಸ ಮಾಡುತ್ತಿದೆ. ಇದರ ಬದಲು ಈ ಎಲ್ಲ ಅಂಗಗಳು ಪ್ರಭುದ್ದ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು. -ಪ್ರಿಯಾಂಕ್ ಖರ್ಗೆ, ಶಾಸಕ