Advertisement

Democracy: ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡದವರ ಉಪದೇಶ ಅಗತ್ಯವಿಲ್ಲ: ಪಾಕ್‌ಗೆ ಭಾರತ

08:46 PM Mar 25, 2024 | Team Udayavani |

ಜಿನೀವಾ: ಪ್ರಜಾಪ್ರಭುತ್ವ ಮೌಲ್ಯದ ಬಗ್ಗೆ ಕನಿಷ್ಠ ಬೆಲೆ ಕೊಡುವ ದೇಶಗಳು ನಮಗೆ ಉಪದೇಶ ನೀಡುವುದು ಹಾಸ್ಯಾಸ್ಪದ ಎಂದು ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.

Advertisement

ಸ್ವಿಜರ್ಲೆಂಡ್‌ನ‌ಲ್ಲಿ ನಡೆದ ಅಂತರ್‌ ಸಂಸತ್‌ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್‌, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಯಾವತ್ತಿದ್ದರೂ ಭಾರತದ ಅಂಗವಾಗಿಯೇ ಉಳಿಯಲಿದೆ ಎಂದು ಸ್ಪಷ್ಟವಾಗಿ ಸಾರಿದ್ದಾರೆ.

ಅದರ ವಿರುದ್ಧ ಪಾಕಿಸ್ತಾನ ಯಾವ ರೀತಿಯಲ್ಲಿ ಅಪಪ್ರಚಾರ ಮಾಡಿದರೂ, ಅದಕ್ಕೆ ಬೆಲೆ ಇರುವುದಿಲ್ಲ ಎಂದಿದ್ದಾರೆ. ಪಾಕಿಸ್ತಾನ ಸರ್ಕಾರ ಉಗ್ರರಿಗೆ ನೆರವು ನೀಡುವುದರ ಬದಲಾಗಿ ಅವುಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಒಳಿತು ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ವಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡದ ಮೇಲೆ ದಾಳಿ ನಡೆಸಿದ್ದ ಅಲ್‌ ಖೈದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್‌ ಲಾಡೆನ್‌ ಆಶ್ರಯ ಪಡೆದದ್ದು ಪಾಕಿಸ್ತಾನದಲ್ಲಿಯೇ ಎಂಬುದನ್ನು ಮರೆಯುವಂತಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next