Advertisement
ಎರಡು ಧ್ವಜಗಳನ್ನು ನುರಿತ ದರ್ಜಿಗಳು ಸಿದ್ಧಪಡಿಸಿದ್ದು, ಇದರ ರೋಲಿಂಗ್ ಕಾರ್ಯ ಹಂತಹಂತವಾಗಿ ವಿದ್ಯಾರ್ಥಿಗಳಿಂದ ನಡೆಯುತ್ತಿದೆ.ಮಾನವ ಸರಪಳಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರಕಾರಿ ನೌಕರರು ಸಹಿತ ಲಕ್ಷಾಂತರ ಮಂದಿ ಭಾಗವಹಿಸಲಿದ್ದು, ಕಿನ್ನಿಮೂಲ್ಕಿ ಸ್ವಾಗತ ಗೋಪುರದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಬಾವುಟ ಹಿಡಿದು ಸಂಭ್ರಮಿಸುವರು.
Related Articles
ರಾಷ್ಟ್ರ ಧ್ವಜ 500 ಮೀ. ಉದ್ದ 3 ಮೀ. ಅಗಲ ಹಾಗೂ ನಾಡ ಧ್ವಜ 500 ಮೀ. 2 ಮೀ. ಅಗಲ ಹೊಂದಿದೆ. ಇದಕ್ಕೆ 3 ಸಾವಿರ ಮೀ. ಬಟ್ಟೆ ಬಳಸಲಾಗಿದ್ದು, ಸಾನಿಧ್ಯ ಸಂಸ್ಥೆಯ ಟೈಲರ್ ಶ್ವೇತಾಶ್ರೀ ಮತ್ತು ತಂಡ 4 ದಿನಗಳಲ್ಲಿ ಧ್ವಜವನ್ನು ಸಿದ್ಧಪಡಿಸಿದೆ. ಬನ್ನಂಜೆ ಹಾಸ್ಟೆಲ್ ವಿದ್ಯಾರ್ಥಿಗಳು ಈ ಧ್ವಜವನ್ನು ಮಡಚಲು ಶ್ರಮಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು ತಿಳಿಸಿದ್ದಾರೆ.
Advertisement
ಹೆದ್ದಾರಿಯಲ್ಲಿ ಮಾನವ ಸರಪಳಿ: ಪರ್ಯಾಯ ಮಾರ್ಗ ಬಳಕೆಗೆ ಸೂಚನೆಮಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ.15ರಂದು ಬೆಳಗ್ಗೆ 7.30ರಿಂದ 11 ಗಂಟೆಯ ವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಮಾನವ ಸರಪಳಿ ನಡೆಯಲಿದೆ. ಇದಕ್ಕೆ ಶಾಲಾ ಮಕ್ಕಳ ಆಗಮನ, ನಿರ್ಗಮನ ಹಾಗೂ ಮಾನವ ಸರಪಳಿ ನಿರ್ಮಿಸುವ ಸಮಯದಲ್ಲಿ ಮಕ್ಕಳ ಮತ್ತು ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ಹೆಜಮಾಡಿ, ಬಪ್ಪನಾಡು, ಮೂಲ್ಕಿ, ಕಾರ್ನಾಡು, ಹಳೆಯಂಗಡಿ, ಪಾವಂಜೆ, ಮುಕ್ಕ, ಸುರತ್ಕಲ್, ಹೊಸಬೆಟ್ಟು, ಹೊನ್ನಕಟ್ಟೆ, ಬೈಕಂಪಾಡಿ, ಪಣಂಬೂರು, ಕೂಳೂರು, ಕೊಟ್ಟಾರಚೌಕಿ, ಪಡೀಲ್, ಕುಂಟಿಕಾನ, ಕೆಪಿಟಿ ವೃತ್ತ, ಪದವು ಜಂಕ್ಷನ್, ಕಣ್ಣೂರು, ಅಡ್ಯಾರ್, ಸಹ್ಯಾದ್ರಿ, ವಳಚ್ಚಿಲ್, ನಂತೂರು ವೃತ್ತ, ಅರ್ಕುಳ, ಬಿಕರ್ನಕಟ್ಟೆ , ಕೈಕಂಬ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಮತ್ತು 73ರಲ್ಲಿ ಸಂಚರಿಸುವ ವಾಹನಗಳ ಚಾಲಕರು / ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.