ಬುದ್ಧಿಮಾಂದ್ಯ ಮಗುವಿನ ಹಿನ್ನಲೆಯಲ್ಲಿ ನಡೆಯುವ ಕಥಾಹಂದರವನ್ನು ಇಟ್ಟುಕೊಂಡು ಮಾಡಿರುವ ಚಿತ್ರ ಜ್ಞಾನಂ. ವರದರಾಜ್‌ವೆಂಕಟಸ್ವಾು ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರ ಹಲವಾರು ಫಿಲ್ಮ್ಫೆಸ್ಟಿವಲ್‌ಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದೆ. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ನಂಜುಂಡ ಕೃಷ್ಣ, ಪ್ರದೀಪ ವರ್ಮ ಮುಂತಾದ ನಿರ್ದೇಶಕರ ಬಳಿ ಕಲಿತಿರುವ ವರದರಾಜ್ ಪ್ರಯೋಗಾತ್ಮಕ ಚಿತ್ರಗಳನ್ನೇ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡವರು.
ತಮ್ಮ ಮನೆಯ ನೆರೆಹೊರೆಯವರ ಕುಟಂಬವೊಂದರಲ್ಲಿ ಜನಿಸಿದ ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ಅವರ ಪೋಷಕರು ಪಡುವ ನೋವು ಅವಮಾನಗಳನ್ನು ಕಣ್ಣಾರೆ ಕಂಡ ವರದರಾಜ್ ಇದೇ ಎಳೆಯನ್ನು ಆಧಾರವಾಗಿಟ್ಟುಕೊಂಡು ಸಮಾಜಕ್ಕೆ ಸಂದೇಶ ಕೊಡುವಂತ ಸಿನಿಮಾವೊಂದನ್ನು ಏಕೆ ಮಾಡಬಾರದು ಎನಿಸಿ ಈ ಚಿತ್ರ ಮಾಡಿದ್ದಾರೆ.
ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ದಿನ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಅಸಾಮಾನ್ಯ ಬುದ್ಧಿವಂತನಾಗಿದರೆ ಮತ್ತೂಬ್ಬ ಹೊರ ಜಗತ್ತಿನ ಅರಿವೇ ಇಲ್ಲದಂತೆ ವರ್ತಿಸುವ ಬುದ್ಧಿಮಾಂದ್ಯ ಮಗುವಾಗಿರುತ್ತದೆ. ಇವರಿಬ್ಬರ ಕಥೆಯನ್ನು ಸಮಾಜಕ್ಕೆ ಮೆಸೇಜ್ ಕೊಡುವ ರೀತಿ ನಿರ್ದೇಶಕ ವರದರಾಜ್ ನಿರೂಪಿಸಿದ್ದಾರಂತೆ. ಈಗಾಗಲೇ ಈ ಚಿತ್ರವು ಯು.ಎಸ್. ನ ಇಂಡಿ ಫೆಸ್ಟ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಭಾಗವಹಿಸಿ ಬೆಸ್ಟ್ ಫಿಲ್ಮ್ ಪ್ರಶಸ್ತಿ ಪಡೆದುಕೊಂಡಿದೆ.
ಬುದ್ಧಿಮಾಂದ್ಯ ಮಗುವಿನ ಪಾತ್ರವನ್ನು ಧ್ಯಾನ್ ಎಂಬ ಬಾಲಕ ನಿರ್ವಹಿಸಿದರೆ, ಬುದ್ಧಿವಂತ ಹುಡುಗನಾಗಿ ಲೋಹಿತ್ ಅಭಿನಯಿಸಿದ್ದಾರೆ. ಹಿರಿಯ ನಟಿ ಶೈಲಶ್ರೀ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಸಂತೋಷ್ ಕುಮಾರ್, ರಾಧಿಕ ಶೆಟ್ಟಿ, ಆಶಾ ಸುಜಯ್, ಜ್ಯೋತಿ ಮರೂರು ಅಭಿನುಸಿದ್ದಾರೆ. ಈ ಚಿತ್ರವನ್ನು ವಸಂತ ಸಿನಿ ಕ್ರಿಯೇಷನ್ ಮೂಲಕ ಸಿ. ವೇಣು ಭಾರಧ್ವಾಜ್, ರಾಜು ಭಾರಧ್ವಾಜ್ ನಿರ್ಮಿಸಿದ್ದಾರೆ. ನಿರ್ಮಾಪಕ ವೇಣು ಈ ಚಿತ್ರದಲ್ಲಿ ಬುದ್ಧಿಮಾಂದ್ಯ ಮಗುವಿನ ತಂದೆಯಾಗಿ ಅಭಿನಯಿಸಿದ್ದಾರೆ