Advertisement

ಸಚಿವ ಮಾಧುಸ್ವಾಮಿ ವಜಾಗೆ ಆಗ್ರಹ

03:01 PM Jan 11, 2021 | Team Udayavani |

ಕೋಲಾರ: ತುಮಕೂರು ಜಿಪಂ ಕೆಡಿಪಿ  ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ಧ ಬಳಸಿ ಮಾತನಾಡಿರುವ ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೂಡಲೇ ಕೈಬಿಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.

Advertisement

ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುರುವಾರ ತುಮಕೂರು  ಜಿಪಂ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಸಚಿವರು, ಎಇಇ ವಿರುದ್ಧ “ರಾಸ್ಕಲ್‌ ಒದ್ದರೆ ಎಲ್ಲಿ ಹೋಗಿ ಬಿದ್ದಿರುತ್ತೀಯಾ ಗೊತ್ತಾ. ನಿನ್ನ ಹೆಂಡ್ತಿ ಸೀರೆ ತೊಳೆ ಯುವುದಕ್ಕೆ ಯಾವ ಸೋಪು ತೆಗೆದು ಕೊಂಡು ಹೋಗಿದ್ದೆ. ಈ ನನ್ಮಕ್ಕಳನ್ನು ಸಸ್ಪೆಂಡ್‌ ಮಾಡಿ’ ಎಂದು ಅವಾಚ್ಯ ಶಬ್ದ ಬಳಕೆ ಮಾಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next