Advertisement
ಇಲಾಖೆ ನಿಯಮಾನುಸಾರ ಆಯ್ಕೆಗೊಂಡು ಕನಿಷ್ಠದಲ್ಲಿ ಕನಿಷ್ಠ ಗೌರವಧನ ವೇತನ ಪಡೆದು, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಅಲ್ಲದೇ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5-6 ತಿಂಗಳಾದರೂ ಕೆಲವು ಕಾಲೇಜುಗಳಲ್ಲಿ ವೇತನವಾಗಿಲ್ಲ. ವೇತನ ಬಂದರೂ ಅದು ಕೇವಲ ಒಂದು ತಿಂಗಳದ್ದು ಮಾತ್ರ. ಅನೇಕ ವರ್ಷಗಳಿಂದ ಇಎಸ್‌ಐ, ಇಪಿಎಫ್ ಸೌಲಭ್ಯವಿಲ್ಲ. ಸರಕಾರ ಕೂಡಲೇ ಇದಕ್ಕೆ ಸಂಬಂಧಿಸಿದ ಕಡತವನ್ನು ಸಂಪುಟ ಸಮಿತಿಯ ಮುಂದೆ ತಂದು ಜೇಒಸಿ ಮಾದರಿಯಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸಿ ಖಾಯಂ ಮಾಡುವುದರ ಮೂಲಕ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು. 2019-20ನೇ ಸಾಲಿನ ಗೌರವಧನ ಹೆಚ್ಚಳವನ್ನು ಈ ಸಾಲಿನ ಶೈಕ್ಷಣಿಕ ಅವಧಿ ಪೂರ್ವದಿಂದಲೇ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಸಮಿತಿ ಆಗ್ರಹಿಸಿದೆ.
Advertisement
ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಲು ಆಗ್ರಹ
10:31 PM Nov 06, 2019 | sudhir |
Advertisement
Udayavani is now on Telegram. Click here to join our channel and stay updated with the latest news.