Advertisement

ನೇಕಾರರಿಗೆ ಪರಿಹಾರ ಒದಗಿಸಲು ಆಗ್ರಹ

05:05 PM Apr 29, 2020 | Suhan S |

ಮುನವಳ್ಳಿ: ಕೋವಿಡ್ 19 ಹಿನ್ನೆಲೆಯಲ್ಲಿ ತಿಂಗಳಿನಿಂದ ಲಾಕಡೌನ್‌ ಇದ್ದು, ನಷ್ಟ ಅನುಭವಿಸುತ್ತಿರುವ ಪಟ್ಟಣದ 150ಕ್ಕೂ ಹೆಚ್ಚು ನೇಕಾರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ನೇಕಾರ ಸಮಾಜದ ವತಿಯಿಂದ ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಇವರಿಗೆ ಮನವಿ ಸಲ್ಲಿಸಲಾಯಿತು.

Advertisement

ನೇಕಾರಿಕೆಯನ್ನೇ ಮೂಲಕಸಬನ್ನಾಗಿಸಿ ಕೊಂಡು ಜೀವನ ಮಾಡುತ್ತಿರುವ ಬಡ ನೇಕಾರ ಕುಟುಂಬಗಳು ಲಾಕ್‌ಡೌನ್‌ ದಿಂದ ಬಹಳ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ದೈನಂದಿನ ಜೀವನ ಮಾಡುವುದು ಕಠಿಣವಾಗಿದೆ. ಇತ್ತೀಚಿಗಷ್ಟೇ ಪ್ರವಾಹದಿಂದ ಮನೆ, ಉದ್ಯೋಗವನ್ನು ಕಳೆದುಕೊಂಡು ಅಪಾರ ನಷ್ಟ ಅನುಭವಿಸಿ ಇನ್ನೇನು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೆ ಗಾಯಕ್ಕೆ ಬರೆ ಹಚ್ಚಿದಂತಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ನೇಕಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುಭಾಸ ಸಣಕಲ್ಲ, ಮಲ್ಲೇಶ ಸೂಳೇಭಾಂವಿ, ವಿಲಾಸ ಸಣಕಲ್ಲ, ವೆಂಕಟೇಶ ದಿನ್ನಿಮನಿ, ಚನ್ನಪ್ಪ ಕಳಸನ್ನವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next