Advertisement

ಕಟ್ಟಡ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಆಗ್ರಹ

05:33 PM May 28, 2018 | Team Udayavani |

ಬೆಳಗಾವಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರ ಬಾಳು ಬೆನಕೆ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಬೆಳಗಾವಿ ನಗರದ ಉದ್ಯಮ ಭಾಗದಲ್ಲಿರುವ ಕಾರ್ಮಿಕರ ಕಚೇರಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಸ್ಥಳಾಂತರಿಸಬೇಕು. ಪ್ರತಿ ಮೂರು ತಿಂಗಳಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಬೇಕು. ಕಾರ್ಮಿಕರ ನೋಂದಣಿ ಪ್ರಕ್ರಿಯೆ ಸರಳೀಕರಣ ಗೊಳಿಸಬೇಕು. ಎಲ್ಲ ರೀತಿಯ ಅರ್ಜಿಗಳನ್ನು ಬೇಗನೆ ಇತ್ಯರ್ಥಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

ರುಕ್ಮಿಣಿ ನಗರದ ವಿವಿಧ ಸಮಸ್ಯೆಗಳ ಕುರಿತು ಯೋಗ ಭವನದ ನಿರ್ಮಾಣ ಹಾಗೂ ಮರಾಠಾ ಸಮುದಾಯದ ಬೇಡಿಕೆಗಳ ಕುರಿತು ಹಾಗೂ ಶ್ರೀನಗರ ಜೋಪಡಪಟ್ಟಿ ಪ್ರದೇಶದ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು. ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಎನ್‌.ಆರ್‌. ಲಾತೂರ ಅವರು ಕಾರ್ಮಿಕರ ಸಮಸ್ಯೆಗಳ ಕುರಿತು ವಿವರಿಸಿದರು. ಕಲಾವಿದ ಸಂತೋಷ ಝೆವರೆ, ಯೋಗ ಶಿಕ್ಷಕ
ಆರ್‌.ಎನ್‌. ಕುಲಕರ್ಣಿ, ಜ್ಯೋತಿ ಭಾವಿಕಟ್ಟಿ, ವಿಜಯಕುಮಾರ ಪಾಟೀಲ, ಎಸ್‌.ಎಂ. ಪಾಟೀಲ, ನಿವೃತ್ತ ಡಿಎಸ್‌ಪಿ ಬಸವರಾಜ ಬಾವಲತ್ತಿ, ಸಂಜು ಭೋಸಲೆ ಮಾತನಾಡಿದರು. ಈ ಸಂದರ್ಭದಲ್ಲಿ ವಿರೂಪಾಕ್ಷ ವಾಲಿ, ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ, ಮಹಾಲಿಂಗ ತಂಗಡಗಿ, ಸುಭಾಷ ಪೂಜೇರಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next