Advertisement

ಕೊಡಗಿನಲ್ಲಿ ರಿಯಲ್‌ ಎಸ್ಟೇಟ್‌ ಸ್ಥಗಿತಗೊಳಿಸಲು ಆಗ್ರಹ

09:48 PM Mar 25, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಿರುವ ಜತೆಗೆ ಕೊಡಗಿನಲ್ಲಿ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ಕಾಮಗಾರಿಗಳಿಂದಾಗಿ ಪರಿಸರ ಸೇರಿ ಕಾವೇರಿ ನದಿಗೂ ತೊಂದರೆ ಎದುರಾಗಿದೆ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನ ಎಂಬ ಸಂಘಟನೆಯು ಬೇಸರ ವ್ಯಕ್ತಪಡಿಸಿತು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಯಾನದ ಸಂಯೋಜಕ ಸಿ.ಪಿ.ಮುತ್ತಣ್ಣ, ಮಳೆಯಿಲ್ಲದ ಕಾರಣ ಕಾವೇರಿ ನದಿಯ ಒಳಹರಿವು ಕ್ಷೀಣಿಸುತ್ತಿದೆ. ಈ ಸಂದರ್ಭದಲ್ಲಿ ರಿಯಲ್‌ ಎಸ್ಟೇಟ್‌ ಕಾಮಗಾರಿಗಳು ನಡೆದರೆ ಮುಂದಿನ ದಿನಗಳಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

ವಿರಾಜಪೇಟೆ, ಗೋಣಿಕೊಪ್ಪಲು, ಹಾತೂರು, ಸಿದ್ದಾಪುರ ಸಹಿತ ವಿವಿಧ ಪ್ರದೇಶಗಳಲ್ಲಿ ಕಾಫಿ ತೋಟಗಳನ್ನು ಐಷಾರಾಮಿ ಕಾಲನಿಗಳನ್ನಾಗಿ ಮಾರ್ಪಡಿಸಲಾಗುತ್ತಿದೆ. ಭತ್ತದ ಗದ್ದೆಗಳೂ ಬಡಾವಣೆಗಳಾಗಿ ಪರಿವರ್ತನೆಯಾಗುತ್ತಿವೆ. ಇದರಿಂದಾಗಿ ಅರಣ್ಯ ನಾಶದ ಜತೆಗೆ ಸ್ಥಳೀಯರು ಹಾಗೂ ಬೆಂಗಳೂರಿನ ನಗರವಾಸಿಗಳು ಕೂಡ ಕುಡಿಯುವ ನೀರಿಗೆ ಗಂಭಿರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೊಡಗು ಹಾಗೂ ಬೆಂಗಳೂರು ಜನರ ಹಿತದೃಷ್ಟಿಯಿಂದ ರಿಯಲ್‌ ಎಸ್ಟೇಟ್‌ ಯೋಜನೆ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದರು.

ಕಾವೇರಿ ಜಲಾನಯನ ಪ್ರದೇಶ ಉಳಿಸಲು ಹೋರಾಟ ಅನಿವಾರ್ಯ. ರಿಯಲ್‌ ಎಸ್ಟೇಟ್‌ ಯೋಜನೆಗಳ ವಿರುದ್ಧ ಸರಕಾರಕ್ಕೆ ಪತ್ರ ಬರೆಯುತ್ತೇವೆ. ಅಗತ್ಯಬಿದ್ದರೆ ಹೋರಾಟ ನಡೆಸುತ್ತೇವೆ ಎಂದು ಪರಿಸರವಾದಿ ಜೋಸೆಫ್‌ ಹೂವರ್‌ ಎಚ್ಚರಿಕೆ ನೀಡಿದರು. ಕಾಫಿ ಬೆಳೆಗಾರ ದೇವಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next