Advertisement

ತೇರದಾಳದಲ್ಲಿ ತಾಲೂಕು ಕಚೇರಿ ಆರಂಭಿಸಲು ಆಗ್ರಹ

10:33 AM Sep 29, 2019 | Suhan S |

ತೇರದಾಳ: ನೂತನ ತಾಲೂಕು ಕೇಂದ್ರ ತೇರದಾಳದಲ್ಲಿ ಎಲ್ಲ ಕಚೇರಿ ಆರಂಭಿಸಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡಬೇಕಾಗಿದೆ. ಸೆ. 30ರಂದು ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವಸ್ಥಾನ ಆವರಣದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಬೇಕು ಎಂದು ತೇರದಾಳ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ ಹೇಳಿದರು.

Advertisement

ನಗರದಲ್ಲಿ ನಡೆದ ತಾಲೂಕು ಹೋರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 50 ವರ್ಷಗಳ ಅವಿರತ ಹೋರಾಟದಿಂದ ತಾಲೂಕು ಕೇಂದ್ರ ದೊರಕಿದೆ. ಆ ಬಗ್ಗೆ ಯಾರಿಗೂ ಆತಂಕ ಬೇಡ. ಕಚೇರಿಗಳು ಶೀಘ್ರದಲ್ಲಿ ಆರಂಭವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸರಕಾರವನ್ನು ಆಗ್ರಹಿಸಲಾಗುವುದು. ಈ ಸಂಬಂಧ ಸೋಮವಾರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಇಲ್ಲಿನ ವಿಶೇಷ ತಹಶೀಲ್ದಾರ್‌ಗೆ ಸಲ್ಲಿಸಲಾಗುವುದು ಎಂದರು. ಪುರಸಭೆ ಮಾಜಿ ಅಧ್ಯಕ್ಷ ಮಹಾವೀರ ಕೊಕಟನೂರ ಮಾತನಾಡಿ, ಶಾಸಕರಿಂದ ಒತ್ತಡ ಹೇರಿಸಿ ಕೂಡಲೆ ಕಚೇರಿಗಳ ಆರಂಭಕ್ಕೆ ಯತ್ನಿಸೋಣ ಎಂದರು.

ಮನೋಜ ಯಾದವಾಡ, ರವಿ ಸಲಬನ್ನವರ, ಸಾತಬಚ್ಚೆ ಮಾತನಾಡಿ, ಪಕ್ಷಬೇಧ ಮರೆತು ಈ ಭಾಗದ ಎಲ್ಲ ಮುಖಂಡರು ತೇರದಾಳಕ್ಕೆ ಎಲ್ಲ ಕಚೇರಿಗಳು ತಕ್ಷಣ ಆರಂಭವಾಗುವಂತೆ ಹೋರಾಟ ಮಾಡಬೇಕು ಎಂದರು.

ಸೋಮವಾರ ರ್ಯಾಲಿ ಮುಖಾಂತರ ನಾಡಕಚೇರಿಗೆ ತೆರಳಿ, ವಿಶೇಷ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ರ್ಯಾಲಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು. ಕಲ್ಲಪ್ಪ ಕಬಾಡಗಿ, ಪ್ರಫುಲ್‌ದಾದಾ ದೇಶಪಾಂಡೆ, ಸತ್ಯಪ್ಪ ಮಹಿಷವಾಡಗಿ, ಮುರಿಗೆಪ್ಪ ಹನಗಂಡಿ, ಶಿವಪ್ಪ ಖವಾಸಿ, ಪೂನಾ ಮೇಸ್ತರಿ, ಸಿದ್ಧಪ್ಪ ಗಾಡಿವಡ್ಡರ, ಚಿಕ್ಕಪ್ಪ ಲೋಹಾರ, ತಿಮ್ಮಣ್ಣ ಗಾಡಿವಡ್ಡರ, ಸಿದ್ಧಪ್ಪ ತೆಗ್ಗಿನಮನಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next