Advertisement

ಸ್ಲಂ ಜನರ ಬದುಕು ಕಟ್ಟಿಕೊಡಲು ಆಗ್ರಹ

10:24 AM Aug 19, 2019 | Team Udayavani |

ಧಾರವಾಡ: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಧಾರವಾಡ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಂಘ ವತಿಯಿಂದ ನಗರದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಮಳೆ ಹಾನಿಗೊಳಗಾದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹೊದಿಕೆ ವಿತರಣಾ ಕಾರ್ಯಕ್ರಮ ಜರುಗಿತು.

Advertisement

ಸ್ಲಂ ಜನಾಂದೋಲನ ರಾಜ್ಯಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಸರ್ಕಾರವೇ ನಿರ್ಮಿಸಿ ಕೊಡುವ ಮೂಲಕ ಸ್ಲಂ ಜನರ ಬದುಕು ಕಟ್ಟಿಕೊಳ್ಳಲು ಗಂಭೀರವಾದ ಪ್ರಯತ್ನ ಮಾಡಬೇಕು. ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಹೊಣೆಯನ್ನು ಐದು ವರ್ಷ ಸರ್ಕಾರವೇ ನಿಭಾಯಿಸಬೇಕು. ಪರಿಹಾರ ಸಾಮಗ್ರಿಗಳು ನೈಜ ಕುಟುಂಬಗಳಿಗೆ ತಲುಪುವ ವ್ಯವಸ್ಥೆಯನ್ನು ಜಿಲ್ಲಾಡಳಿತಗಳು ಮಾಡಬೇಕಿದೆ ಎಂದರು.

ರಸೂಲ ನದಾಫ, ವಿನೋದ ಪೈಲವಾನವಾಲೆ, ಷನ್ಮುಖಪ್ಪ ಬಡಿಗೇರ, ಧನ್ನೂ ಲಮಾಣಿ, ರೆಹಮತ್‌ಕಾಕರ, ಜಂಬಯ್ಯ ದುರ್ಗಮುರಗಿ, ಸೈನಾಜದಫೇದಾರ, ಮಾರುತಿ ಶಿರೋಳದವರ, ಅಫ್ಜಲ್ ಸಂಗೊಳ್ಳಿ, ದಾವಲ ಲಾಡಖಾನ, ಸುರೇಶಚಿಂಚಲಿ, ಜೇಮ್ಸ, ಸಾವಕ್ಕ ತಡಕೋಡ ಇದ್ದರು. ಪ್ರದೀಪ ಬಿಸಲನಾಯಿಕ ನಿರೂಪಿಸಿದರು. ಮುನ್ನೀರಾಬೇಗಂ ನದಾಫ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next