Advertisement
5 ವರ್ಷಗಳಿಂದ ಇದೇ ಪರಿಸ್ಥಿತಿಪುರಸಭೆಯ ಮೂರನೇ ವಾರ್ಡ್ ನಲ್ಲಿರುವ ಕಲ್ಲೊಟ್ಟೆ ಪರಿಸರದಲ್ಲಿನ ಸ್ವಿಚ್ ಬೋರ್ಡ್ ಕಳೆದ 5 ವರ್ಷಗಳಿಂದ ಹೀಗೆಯೇ ಇದೆ. ತುಕ್ಕುಹಿಡಿದು ಬೀಳುವ ಸ್ಥಿತಿಯಲ್ಲಿದ್ದರೂ ಸಂಬಂಧ ಪಟ್ಟವರು ನಿಶ್ಚಿಂತೆಯಿಂದಿದ್ದಾರೆ. ಮಳೆ ಗಾಲ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಯಾರಾದರೂ ಸ್ವಿಚ್ ಬೋರ್ಡ್ ಸ್ಪರ್ಶಿಸಿ ದಲ್ಲಿ ಅನಾಹುತ ಸಂಭವಿಸ ಬಹುದು.
ಸ್ವಿಚ್‌ಬೋರ್ಡ್ ತೀರಾ ತಗ್ಗಿನಲ್ಲಿ ರುವುದು ಅಪಾಯಕಾರಿ. ಮಳೆಗಾಲ ಪ್ರಾರಂಭಗೊಂಡಿರುವುದರಿಂದ ಮೆಸ್ಕಾಂ ಇಲಾಖೆಯವರು ತಕ್ಷಣವೇ ಹೊಸ ಸ್ವಿಚ್ ಬೋರ್ಡ್ ಅಳವಡಿಸಿ, ಸಂಭಾವ್ಯ ಅಪಾಯ ತಪ್ಪಿಸಬೇಕು ಎಂದು ಪುರಸಭಾ ಸದಸ್ಯೆ ನೀತಾ ಪ್ರಶಾಂತ್ ಆಚಾರ್ಯ ಆಗ್ರಹಿಸಿದ್ದಾರೆ.
***