Advertisement

ಖರೀದಿ ಹಾಲಿನ ದರ ಹೆಚ್ಚಿಸಲು ಆಗ್ರಹ

11:37 AM Aug 05, 2020 | Suhan S |

ಬಂಗಾರಪೇಟೆ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಪಶು ಆಹಾರದ ಬೆಲೆ ಇಳಿಕೆ ಮಾಡಿ, ರೈತರಿಂದ ಖರೀದಿ ಮಾಡುವ ಹಾಲಿನ ಬೆಲೆ 40 ರೂ.ಗೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘ ದಿಂದ ಜಾನುವಾರುಗಳ ಸಮೇತ ಆಸ್ಪತ್ರೆ ವೃತ್ತದಲ್ಲಿ ಪ್ರತಿಭಟಿಸಲಾಯಿತು.

Advertisement

ಪ್ರತಿಭಟನೆ ನೇತೃತ್ವವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಮಾತನಾಡಿ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಹಾಲು ಒಕ್ಕೂಟವು ಹಾಲಿನ ಬೆಲೆ ಏರಿಕೆ ಮಾಡುವುದನ್ನು ಬಿಟ್ಟು, ಉತ್ಪಾದನೆ ಹೆಚ್ಚಾ ಗಿದೆ ಎಂದು ಕಾರಣ ನೀಡಿ 4 ರೂ. ಇಳಿಕೆ ಮಾಡಿರು ವುದು ಲಕ್ಷಾಂತರ ಕುಟುಂಬಗಳ ಮರಣಶಾಸನ ಬರೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಹೈನೋದ್ಯಮವು ಗ್ರಾಮೀಣ ಪ್ರದೇಶದ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದ್ದು, ಅದಕ್ಕೆ ಪ್ರೋತ್ಸಾಹ ನೀಡಬೇಕಾದ ಸರ್ಕಾರ ಮತ್ತು ಒಕ್ಕೂಟಗಳು ದಿನೇದಿನೆ ಹಾಲಿನ ಬೆಲೆ ಕಡಿಮೆ ಮಾಡಿ, ಹೈನೋದ್ಯಮ ನಂಬಿರುವ ಕುಟುಂಬಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡು ತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಮಂಗಸಂದ್ರ ತಿಮ್ಮಣ್ಣ, ಐತಾಂಡಹಳ್ಳಿ ಮಂಜುನಾಥ್‌, ಅಂಬರೀಶ್‌, ಗೊಟ್ಟಹಳ್ಳಿ ಮಂಜುನಾಥ್‌, ಕ್ಯಾಸಂಬಳ್ಳಿ ಪ್ರತಾಪ್‌, ಕೃಷ್ಣಪ್ಪ, ಮೀಸೆ ವೆಂಕಟೇಶಪ್ಪ, ಹರೀಶ್‌, ಸುಪ್ರೀಂಚಲ, ವೆಂಕಟರಾಮಪ್ಪ, ನಾಗಪ್ಪ, ಗುಲಾಂಜಾನ್‌, ಶಿವು, ನಾರಾಯಣ್‌, ಜಗದೀಶ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next