Advertisement
ಪಶು ಪಾಲನಾ ಇಲಾಖೆಯ ಮಾಹಿತಿ ಪ್ರಕಾರ ನಾಟಿ ಹಸು 14,400 ಇವೆ. ತಾಲೂಕುವಾರು ದನಮತ್ತು ನಾಟಿ ಹಸು ದೇವನಹಳ್ಳಿ 4,768,ದೊಡ್ಡಬಳ್ಳಾಪುರ 6,499, ನೆಲಮಂಗಲ 2,340ಹಾಗೂ ಹೊಸಕೋಟೆ 829 ಇವೆ ಎಂಬುವ ಅಂಕಿಅಂಶವಿದೆ ಎಂದು ಇಲಾಖೆಯಿಂದ ತಿಳಿದು ಬಂದಿದೆ. ಕೆಲವು ದಶಕಗಳ ಹಿಂದೆ ಪ್ರತಿ ಕುಟುಂಬದಲ್ಲಿ ಹತ್ತಾರು ಹಸುಗಳ ಇರುತ್ತಿತ್ತು. ಕೃಷಿ ಚಟುವಟಿಕೆಗೆಬಳಸುತ್ತಿದ್ದ ಹಸುಗಳ ಹೊರತು, ಉಳಿದ ಹಸುಗಳಿಗೆಮೂಗುದಾರ ಹಾಕುತ್ತಿರಲಿಲ್ಲ. ಒಂದು ಗ್ರಾಮದಲ್ಲಿಮೇಯಿಸಲು ಒಂದಿಬ್ಬರನ್ನು ನೇಮಕಮಾಡಿ ಸುಮಾರು ಮಾಸಿಕ ಇಂತಿಷ್ಟುಹಣ ಮತ್ತು ದವಸ, ಧಾನ್ಯನೀಡುತ್ತಿದ್ದರೆಂದು ನೆನಪಿಸಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ.
Related Articles
Advertisement
ಮನೆ ಮಕ್ಕಳಂತೆ ಎತ್ತುಗಳ ಪೋಷಿಸುವ ರೈತರು :
ತಮಗಿಂತಲೂ ಎತ್ತರಕ್ಕಿರುವ ಎತ್ತುಗಳನ್ನು ಮನೆ ಮಕ್ಕಳಂತೆ ಪೋಷಣೆ ಮಾಡುತ್ತಾರೆ. ಆದರೆ, ಯುವ ಜನರಿಗೆ ಎತ್ತುಗಳ ಬಗ್ಗೆ ಕಾಳಜಿಯಿಲ್ಲ. ಕೃಷಿ ಚಟುವಟಿಕೆ ಕಡೆಗೆ ಗಮನವೂ ಇಲ್ಲ. ಎಲ್ಲ ಕೃಷಿ ಕೆಲಸ ಟ್ರ್ಯಾಕ್ಟರ್‌ಗಳಲ್ಲಿಯೇ ಮಾಡುತ್ತಾರೆ. ಬಹಳಷ್ಟು ದನಗಳ ಜಾತ್ರೆಯಲ್ಲಿ ಎತ್ತುಗಳು ಖರೀದಿ ಮಾಡುವುದಕ್ಕಿಂತ ರೈತರ ಮನೆಗಳ ಬಳಿ ಹೋಗಿ ಎತ್ತುಗಳನ್ನು ಖರೀದಿ ಮಾಡುವುದು ಉತ್ತಮ ಎಂದು ಅನುಭವಿ ರೈತರು ಹೇಳುತ್ತಾರೆ.
ನಾಟಿ ಹಸುಗಳನ್ನು ಖರೀದಿಸಿ ಸಾಕಾಣಿಕೆ ಮಾಡಲಾಗುತ್ತಿದೆ. ನಾಟಿಹಸುವಿನ 1 ಲೀ. ಹಾಲಿಗೆ 100ರೂ , ½ ಲೀ ಗಂಜಲಕ್ಕೆ 50 ರೂ. ಇದೆ. ಇದಕ್ಕೆ ಹೆಚ್ಚಿನಬೇಡಿಕೆ ಇದೆ. ಗ್ರಾಮೀಣ ಪ್ರದೇಶದಲ್ಲಿಇಂದಿಗೂ ಕೂಡ ಹಳೇ ಕೃಷಿ ಪದ್ಧತಿಯನ್ನುಮಾಡಲಿಕ್ಕಾಗಿ ರೈತರು ಎತ್ತುಗಳನ್ನು ಮೇಯಿಸುವುದನ್ನು ರೂಢಿಸಿಕೊಂಡಿದ್ದಾರೆ. – ನಾರಾಯಣಸ್ವಾಮಿ, ರೈತ
ಸರ್ಕಾರ ಶೂನ್ಯ ಬಂಡವಾಳದ ಸುಭಾಷ್ ಪಾಲೇಕರ್ ಯೋಜನೆ ಯನ್ನು ಜಾರಿಗೆ ತಂದಿದ್ದಾರೆ. ಈ ಯೋಜ ನೆಯಲ್ಲಿ ರೈತರಿಗೆ ಎಷ್ಟು ಎಕರೆ ಬೇಕಾದರೂಪಂಚ ದ್ರವ್ಯ ತಯಾರಿಸಿ ಬೆಳೆಗಳಿಗೆನೀಡಲಾಗುತ್ತದೆ. ನಾಟಿ ಹಸುಗಳ ಗಂಜಲ,ಸಗಣಿ ಬೆಳೆಗೆ ನೀಡುವುದರಿಂದ ಬೆಳೆಗಳಿಗೆಯಾವುದೇ ರೋಗಬಾಧೆ ಬರದಂತೆನಿಯಂತ್ರಣ ಮಾಡುತ್ತದೆ. ಭೂಮಿಯಫಲವತ್ತತೆ ಸಾವಯವ ಗೊಬ್ಬರ ಬಳಸಿದರೆಗುಣಮಟ್ಟದ ಬೆಳೆ ಬೆಳೆಯಬಹುದು. – ವೀಣಾ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ
ನಾಟಿ ಹಸುಗಳ ಪ್ರೋತ್ಸಾಹಕ್ಕಾಗಿ ಪಶು ಪಾಲನಾ ಇಲಾಖೆಯಿಂದ 3 ತರಹದಪೌಷ್ಟಿಕಾಂಶ ಪಶು ಆಹಾರವನ್ನುನೀಡಲಾಗುತ್ತಿದೆ. ರೈತರು ಪಾರಂಪರಿಕತಳಿಗಳನ್ನು ಉಳಿಸಿಕೊಂಡು ಹೋಗುವಂತೆಉಚಿತವಾಗಿ ಅವರಿಗೆ ಆಹಾರ ಪದಾರ್ಥನೀಡಲಾಗುತ್ತಿದೆ. ದೇಶಿಯ ತಳಿಗಳನ್ನುಉಳಿಸಿಕೊಂಡು ಹೋಗಲಾಗುತ್ತಿದ್ದು, ನಾಟಿಹಸುಗಳು 50 ಸಾವಿರದಿಂದ 70ಸಾವಿರದವರೆಗೆ ಮಾರಾಟ ಆಗುತ್ತದೆ. – ಡಾ.ಜಿ.ಎಂ. ನಾಗರಾಜ್, ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ
-ಎಸ್. ಮಹೇಶ್