Advertisement

Uttara Kannada “ಪ್ರಕೃತಿ ವಿಕೋಪ” ಜಿಲ್ಲೆಯೆಂದು ಘೋಷಣೆಗೆ ಆಗ್ರಹ

05:03 PM Jul 18, 2024 | Team Udayavani |

ಶಿರಸಿ: ನೈಸರ್ಗಿಕ ಸೊಬಗಿನಿಂದ ಕುಡಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಸಮರ್ಪಕ ಆಧುನಿಕ, ಅವೈಜ್ಞಾನಿಕ ಯೋಜನೆ ಕಾಮಗಾರಿಯಿಂದ ಗುಡ್ಡಗಾಡು ಜಿಲ್ಲೆಯು ಪ್ರಕೃತಿ ವಿಕೋಪದಿಂದ ಜನಜೀವನ ಹದಗೆಟ್ಟಿದೆ. ಕೇಂದ್ರ ಸರಕಾರ ಪ್ರಕೃತಿ ವಿಕೋಪ ಜಿಲ್ಲೆಯೆಂದು ಘೋಷಿಸಿ, ತುರ್ತು ಸ್ಪಂದನೆ ನೀಡಬೇಕು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.

Advertisement

ಶಿರಸಿ-ಕುಮಟಾ ರಸ್ತೆಯಲ್ಲಿ ಜರುಗಿರುವ ಭೂಕುಸಿತ, ಅತಿವೃಷ್ಟಿಯಿಂದ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯು ಶೇ.೮೦ ರಷ್ಟು ಭೌಗೋಳಿಕ ಪ್ರದೇಶ ಗುಡ್ಡಗಾಡು, ಕಣಿವೆ, ನದಿ, ಕೊಳ್ಳಗಳು ದಟ್ಟ ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಹಿನ್ನಲೆಯಲ್ಲಿ ಅವೈಜ್ಞಾನಿಕ, ಅಸಮರ್ಪಕ ಕಾಮಗಾರಿಗಳು ಪ್ರಕೃತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಜರುಗಿರುವ ಹಿನ್ನಲೆಯಲ್ಲಿ ಅನೀರಿಕ್ಷಿತ ನೈಸರ್ಗಿಕ ದುರಂತಕ್ಕೆ ಜಿಲ್ಲೆಯು ಕಾರಣವಾಗಿದೆ.

ಹಿಂದಿನ 2-3 ವರುಷದಲ್ಲಿ ಯಲ್ಲಾಪುರ ಅರಬೈಲ್ ಘಟ್ಟ, ಕಳಚೆ, ಜೋಯಿಡಾದ ಅಣಶಿ ಘಾಟ್, ಮುಂಡಗೋಡ ಶಿಡಲಗುಂಡಿ, ಶಿರಸಿ ಮತ್ತಿಘಟ್ಟ, ಕಕ್ಕಳ್ಳಿ, ಕುಮಟಾ ತಂಡಾಕುಳಿ, ಸಿದ್ದಾಪುರ ದೊಡ್ಮನೆ ಘಾಟ್, ಹೊನ್ನಾವರ- ಸಾಗರ ರಾಷ್ಟೀಯ ಹೆದ್ದಾರಿ, ಕಾರವಾರದ ಚೆಂಡಿಯಾ, ಅರಗಾ ಮುಂತಾದ ಭೂಕುಸಿತ ಮತ್ತು ಜಲಾವೃತ್ತದಿಂದ ದುರಂತಗಳನ್ನ ಮರೆಯುವ ಪೂರ್ವದಲ್ಲಿ, ಇಂದು ಜಿಲ್ಲೆಯ 11 ತಾಲೂಕುಗಳಲ್ಲೂ ಪ್ರಕೃತಿ ವಿಕೋಪ ಘಟನೆ ಜರುಗಿರುವುದು ವಿಷಾದಕರ. ಇವೆಲ್ಲಕ್ಕೂ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

ಅಪಾರ ಸಂಖ್ಯೆಯ ಜೀವ ಸಂಪತ್ತು, ನಿಸರ್ಗ ನಷ್ಟ ಉಂಟಾಗುತ್ತಿರುವ ಸಂದರ್ಭದಲ್ಲಿ ಸರಕಾರ ಸಜಿರೋಪಾದಿಯಲ್ಲಿ ಸ್ಪಂದಿಸಿ ವಿಶೇಷ ಪ್ಯಾಕೆಜ್ ಘೋಷಿಸಬೇಕು. ಇಂತಹ ಘಟನೆ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next