ರಾಜ್ಯಾದ್ಯಂತ ಎಲ್ಲ ಶಾಲೆ, ಕಾಲೇಜು ಗಳ ವಿದ್ಯಾರ್ಥಿಗಳ ಹೆತ್ತವರ, ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಆಡಳಿತ ಮಂಡಳಿಯವರಿಂದ 1 ಕೋಟಿ ಸಹಿ ಸಂಗ್ರಹ ಮಾಡುವ ಅಭಿಯಾನ ನ. 15ರಿಂದ 30ರ ವರಗೆ ನಡೆಸಲು ವಿದ್ಯಾಭಾರತಿ ಕರ್ನಾಟಕದ ರಾಜ್ಯ ಕಾರ್ಯಕಾರಿಣಿಯು ನಿರ್ಣಯ ತೆಗೆದುಕೊಂಡಿದೆ.
Advertisement
ರಾಷ್ಟ್ರೀಯ ಶಿಕ್ಷಣ ನೀತಿ -2020 ಸ್ವತಂತ್ರ ಭಾರತದ 3ನೇ ರಾಷ್ಟ್ರೀಯ ಶಿಕ್ಷಣ ನೀತಿಯಾಗಿ ರೂಪುಗೊಂಡು ಇದೀಗ ದೇಶಾದ್ಯಂತ ಜಾರಿಯಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ಇತಿಹಾಸ ದಲ್ಲಿಯೇ ಇಷ್ಟೊಂದು ವ್ಯಾಪಕವಾಗಿ ಹಾಗೂ ಎಲ್ಲ ಸ್ತರಗಳಲ್ಲಿ ಚರ್ಚಿತವಾಗಿ ರೂಪು ತಳೆದ “ಸಾರ್ವಜನಿಕ ನೀತಿ’ ಬೇರಾವುದಿಲ್ಲ. ಈ ನೀತಿ ಸಿದ್ಧಗೊಳಿಸುವಲ್ಲಿ ದೇಶದ 2.5ಲಕ್ಷ ಗ್ರಾಮಗಳಲ್ಲಿ, 676 ಜಿಲ್ಲೆಗಳಲ್ಲಿ, 36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಭೆ ನಡೆದು 2 ಲಕ್ಷಕ್ಕೂ ಅಧಿಕ ಸಲಹೆಗಳ ಸ್ವೀಕೃತಿಯೊಂದಿಗೆ ಅಂತಿಮ ರೂಪ ಪಡೆದಿದೆ.