Advertisement

ಆರೋಗ್ಯ ಸಚಿವ ಸುಧಾಕರ ಕ್ಷಮೆಯಾಚನೆಗೆ ಆಗ್ರಹ

05:37 PM Mar 03, 2022 | Shwetha M |

ವಿಜಯಪುರ: ಆರೋಗ್ಯ ಸಚಿವ ಕೆ.ಸುಧಾಕರ ಬೌದ್ಧ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದನ್ನು ವಿಜಯಪುರ ಜಿಲ್ಲೆಯ ಬೌದ್ಧ ಧರ್ಮಿಯರೂ ಸೇರಿದಂತೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿವೆ.

Advertisement

ಬುಧವಾರ ಈ ಕುರಿತು ನಗರದ ಸಾರಿಪುತ್ರ ಬೌದ್ಧ ವಿಹಾರದಲ್ಲಿ ಸಭೆ ಸೇರಿದ ಮುಖಂಡರು, ಚಿಕ್ಕಬಳ್ಳಾಪುರದ ಬ್ರಾಹ್ಮಣರ ಸಮಾವೇಶದಲ್ಲಿ ಬ್ರಾಹ್ಮಣರು ಭಾರತ ದೇಶವನ್ನು ಬೌದ್ಧ ಧರ್ಮದ ಪಾಷದಿಂದ ಕಾಪಾಡಿದರು ಎಂದು ಸಚಿವ ಸುಧಾಕರ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದು ಖಂಡನಾರ್ಹ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸರ್ಕಾರದಲ್ಲಿ ಸಚಿವ ಸ್ಥಾನದಂಥ ಜವಾಬ್ದಾರಿ ಸ್ಥಾನದಲ್ಲಿರುವ ಸುಧಾಕರ, ಜನಪ್ರತಿನಿ ಧಿಯಾಗಿ ಬ್ರಾಹ್ಮಣರನ್ನು ವೈಭವೀಕರಿಸಿ ಹೊಗಳಿಕೆ ಮಾತು ಅಜ್ಞಾನದ ಸಂಕೇತ. ಸುಮಾರು 500 ವರ್ಷಗಳ ಹಿಂದೆ ಗೌತಮ ಬುದ್ಧ ಅವರು ಸ್ಥಾಪಿಸಿದ ಬೌದ್ಧ ಧರ್ಮದ ಸತ್ಯ, ಶಾಂತಿ, ಕರುಣೆ, ಸ್ವತ್ಛ ಚರಿತ್ರೆಯನ್ನು, ತತ್ವಗಳನ್ನು ಜನಸಾಮಾನ್ಯರಿಗೆ ಉಣಬಡಿಸಿದೆ ಎಂಬುದನ್ನು ಸಚಿವ ಸುಧಾಕರ ಅರಿವಿಗಿಲ್ಲ ಎಂದು ಟೀಕಿಸಿದ್ದಾರೆ.

ಭಾರತದಲ್ಲಿ ಜನ್ಮ ತಳೆದ ಬೌದ್ಧ ಧರ್ಮ ಇದೀಗ 53 ದೇಶಗಳಲ್ಲಿ ಪ್ರಮುಖ ಧರ್ಮವಾಗಿ ಹೊರ ಹೊಮ್ಮಿದೆ. ಬ್ರಾಹ್ಮಣರು ಬೌದ್ಧ ಧರ್ಮದ ಯಾವ ನೀತಿಯನ್ನು ಖಂಡಿಸಿ ಭಾರತವನ್ನು ಸಂರಕ್ಷಿಸಿದರು ಎಂಬುವುದಕ್ಕೆ ಸುಧಾಕರ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಧಾಕರ ಅವರನ್ನು ಕೂಡಲೇ ತಮ್ಮ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿವಿಧ ಸಂಘಟನೆಗಳು ಸೇರಿ ಸುಧಾಕರರ ವಿರುದ್ಧ ಉಗ್ರ ಹೋರಾಟ ಮಾಡಲು ವಿವಿಧ ಸಂಘಟನೆಗಳ ಮುಖಂಡರು ಖಂಡನಾ ನಿರ್ಣಯ ತೆಗೆದುಕೊಂಡರು.

Advertisement

ಸಭೆಯಲ್ಲಿ ಚಂದ್ರಶೇಖರ ಕೊಡಬಾಗಿ, ಬಸವರಾಜ ಚಲವಾದಿ, ಗೋಪಾಲ ಅಥರ್ಗಾ, ಇರ್ಫಾನ್‌ ಶೇಖ್‌, ಪ್ರಭುಗೌಡ ಪಾಟೀಲ, ವೆಂಕಟೇಶ ವಗ್ಯಾನವರ, ಲಾಲಾಸಾಹೇಬ ಕೊರಬು, ಮತ್ತಿನಕುಮಾರ ದೇವದರ, ಯಾಸೀನ್‌ ಪಟೇಲ್‌, ಕೆ.ಎಂ. ಶಿವಶರಣ, ಬಿ.ಆರ್‌.ಹಿಪ್ಪರಗಿ, ಬಿ.ಎಸ್‌.ಬ್ಯಾಳಿ, ಪುನೀತ್‌ ಕಾಂಬಳೆ, ಲಕ್ಷ್ಮಣ ಚಲವಾದಿ, ಶಿವು ಹೊಸಮನಿ, ಬಿ.ಎಸ್‌. ಚನ್ನವೀರ, ಸಂತೋಷ ಶಹಾಪುರ, ಎಂ.ಬಿ.ಹಳ್ಳದಮನಿ, ಮಹೇಶ ಕ್ಯಾತನ್‌, ಗೋವರ್ಧನ ಚಲವಾದಿ, ಸಾಬು ಚಲವಾದಿ, ಅಕ್ಷಯಕುಮಾರ ಅಜಮನಿ, ಆನಂದ ಮುದೂರ, ಯಮನೂರಿ ಸಿಂದಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next