Advertisement

ಡಿಮಾರ್ಟ್‌ ಬಾಗಿಲು ಮುಚ್ಚಲು ಆಗ್ರಹ

06:17 PM Apr 13, 2020 | mahesh |

ನೆಲಮಂಗಲ: ಪಟ್ಟಣದ ಹೊರವಲಯದ ಡಿಮಾರ್ಟ್‌ ಮಾಲ್‌ ಸಮಯಮೀರಿ ವ್ಯವಹರಿಸುತ್ತಿರುವುದನ್ನು ತಾಲೂಕು ದಿನಸಿ ವರ್ತಕರ ಸಂಘದ ಪದಾಧಿಕಾರಿಗಳು ಖಂಡಿಸಿ ವಿರೋಧ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆದಿದೆ. ಹೆದ್ದಾರಿ 4ರ ಜಾಸ್‌ಟೋಲ್‌ ಬಳಿಯಿರುವ ಡಿಮಾರ್ಟ್‌ ತಾಲೂಕು ಆಡಳಿತದ ನಿಯಮ ಗಾಳಿಗೆ ತೂರಿ, ದಿನವಿಡೀ ವಹಿವಾಟು ನಡೆಸುತ್ತಿದೆ. ಸಾಮಾಜಿಕ ಅಂತರ, ಗ್ರಾಹಕರಿಗೆ ಸ್ಯಾನಿಟೈಸರ್‌ ಬಳಕೆ ಸೌಲಭ್ಯ ಕಲ್ಪಿಸದಿರುವದನ್ನು ಮನಗಂಡ ತಾಲೂಕು ದಿನಸಿ ವರ್ತಕರ ಸಂಘದ ಪದಾಧಿಕಾರಿಗಳು ಡಿಮಾರ್ಟ್‌ಗೆ ಮುತ್ತಿಗೆ ಹಾಕಿ ವಹಿವಾಟು ನಿಲ್ಲಿಸಬೇಕೆಂದು ಮಾಲ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಎಲ್ಲರಿಗೂ ಒಂದೇ ಕಾನೂನು: ತಾಲೂಕು ಆಡಳಿತ ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಪಟ್ಟಣದ ದಿನಸಿ ವರ್ತಕರ ಸಭೆ ನಡೆಸಿ, ಎಲ್ಲಾ ಅಂಗಡಿಗಳ ಮಾಲೀಕರು
ಈ ನಿಯಮ ಪಾಲಿಸುತ್ತಿದ್ದರೆ, ಡಿಮಾರ್ಟ್‌ ತಾಲೂಕು ಆಡಳಿತದ ಆದೇಶ ಗಾಳಿಗೆ ತೂರಿ ನಮಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ಅನುಮತಿ ನೀಡಿದ್ದಾರೆಂದು
ಸಬೂಬು ಹೇಳಿದೆ. ತಾಲೂಕಿನಲ್ಲಿ ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರಲಿ. ಸಂಘ ತಾರತಮ್ಯ ವಿರೋಧಿಸುತ್ತದೆ. ಕಾನೂನು ಒಂದೆ ಜಾರಿಯಾಗಬೇಕೆಂದು
ಒತ್ತಾಯಿಸಿದ್ದಾರೆ. ಗ್ರಾಮಾಂತರ ಠಾಣೆ ಎಸ್‌ಐ ಅಂಜನ್‌ಕುಮಾರ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಡಿಮಾರ್ಟ್‌ ತೆರೆಯಲು ಸ್ಪಷ್ಟ ಆದೇಶವಿದ್ದರೆ ಮಾತ್ರ
ವಹಿವಾಟಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲವಾದಲ್ಲಿ ಮಾಲ್‌ ಮುಚ್ಚುವಂತೆ ಖಡಕ್‌ ಎಚ್ಚರಿಕೆ ನೀಡಿ ಮುಚ್ಚಿ ಸಿದರು. ಪುರಸಭೆ ಸದಸ್ಯ ಅಂಜನಮೂರ್ತಿ, ತಾಲೂಕು ದಿನಸಿ ವರ್ತಕರ ಸಂಘದ ಕಾರ್ಯದರ್ಶಿ ಪಿಳ್ಳಳ್ಳಿ ನಾಗ ರಾಜ್‌, ಪದಾಧಿಕಾರಿ ಶ್ರೀಗಣೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next