Advertisement

ವೇತನ ಪರಿಷ್ಕರಣೆಗೆ ಆಗ್ರಹ

12:57 PM Sep 02, 2017 | |

ವಿಜಯಪುರ: ಕೇಂದ್ರ ಸರ್ಕಾರ ಎನ್‌ಟಿಪಿಸಿ ಅಧಿಕಾರಿಗಳ ಮೂರನೇ ವೇತನ ಪರಿಷ್ಕರಣೆ ಸಮಿತಿ ಶಿಫಾರಸು ಅನುಷ್ಠಾನ ಮಾಡದ ಕ್ರಮ ವಿರೋಧಿಸಿ ಕೂಡಗಿ ಎನ್‌ಟಿಪಿಸಿ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.

Advertisement

ಕೂಡಗಿ ಎನ್‌ಟಿಪಿಸಿ ವ್ಯವಸ್ಥಾಪಕ ಸಂಸ್ಥೆ ನೇತೃತ್ವದಲ್ಲಿ ಕೂಡಗಿ ಘಟಕದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅಧಿಕಾರಿಗಳು, ವೇತನ ಪರಿಷ್ಕರಣೆಗಾಗಿ ಮೂರನೇ ವೇತನ ಪರಿಷ್ಕರಣೆ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಅನುಷ್ಠಾನ ಮಾಡದ ಕಾರಣ ಹಿಂಸೆ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ವೇತನ ಆಯೋಗ ಮಾಡಿರುವ ಶಿಫಾರಸುಗಳನ್ನು ತಿರಸ್ಕರಿಸಲಾಗಿದೆ ಎಂದು ಕಿಡಿ ಕಾರಿದರು.

ಎನ್‌ಟಿಪಿಸಿ ಅಧಿಕಾರಿಗಳ ವೇತನ ಪರಿಷ್ಕರಣೆ ಇತಿಹಾಸದಲ್ಲೇ ಮೂಲ ವೇತನ ಹಾಗೂ ದಿನಭತ್ಯೆ ಮೇಲೆ ಶೇ. 15ರಷ್ಟು ಏಕ ರೂಪದ ಫಿಟ್ಮೆಂಟ್ ಲಾಭ ನೀಡುವ ಬೇಡಿಕೆ ಕೈಗೆಟುಕುವ ನ್ಯಾಯ ಸಮ್ಮತ ಬೇಡಿಕೆ. ಮತ್ತೂಂದೆಡೆ ನಿಗಮದ ನಿವೃತ್ತ ಅಧಿಕಾರಿಗಳಿಗೆ ವೈದ್ಯಕೀಯ ಹಾಗೂ ಇತರೆ ಸೌಲಭ್ಯಗಳಿಗೂ ಕುಂದು ಉಂಟು ಮಡಲಾಗಿದೆ ಎಂದು ಪ್ರತಿಭಟನಾ ನಿರತ ಅಧಿಕಾರಿಗಳು ದೂರಿದರು.

ಸಂಘಟನೆ ಅಧ್ಯಕ್ಷ ಸುನಿಲಕುಮಾರ, ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ, ಶ್ರೀನಿವಾಸರಾವ್‌ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next