Advertisement

ಜಿಲ್ಲೆಯಲ್ಲಿ ಯೂರಿಯಾಗೆ ಹೆಚ್ಚಿದ ಬೇಡಿಕೆ

03:30 PM Sep 21, 2020 | Suhan S |

ಮಂಡ್ಯ: ಕಬ್ಬು, ಭತ್ತ ಹಾಗೂ ರಾಗಿ ಬೆಳೆಗಳ ನಾಟಿ ಮುಗಿದಿದೆ. ಪ್ರಸ್ತುತ ಬೆಳೆಯುತ್ತಿರುವ ಪೈರಿಗೆ ಯೂರಿಯಾ ಹಾಕುವ ಸಂದರ್ಭ ಬಂದಿದೆ. ಇದರಿಂದಜಿಲ್ಲೆಯಲ್ಲಿ ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ.

Advertisement

ರೈತರ ಬೇಡಿಕೆ ತಕ್ಕಂತೆ ಯೂರಿಯಾ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಈಗಾಗಲೇ ಕೃಷಿ ಇಲಾಖೆಯು ಬೇಡಿಕೆ ಇರುವಕಡೆ ಯೂರಿಯಾ ಪೂರೈಸುತ್ತಿದ್ದರೂ, ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ.

ಗೂಡ್ಸ್‌ ರೈಲು ವಿಳಂಬ: ಯೂರಿಯಾ ಸರಬರಾಜು ಮಾಡುವ ಗೂಡ್ಸ್‌ ರೈಲು ವಿಳಂಬದಿಂದ ಜಿಲ್ಲೆಯಲ್ಲಿ ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ. ಮಂಗಳೂರು, ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಯೂರಿಯಾ ಪೂರೈಕೆಗೆ ತೊಂದರೆಯಾಗಿದೆ.  ಲಾರಿ,ಗೂಡ್ಸ್‌ ವಾಹನಗಳಲ್ಲಿ ಯೂರಿಯಾವನ್ನು ಪೂರೈಸಲುಸಾಧ್ಯವಿಲ್ಲ. ರಸಗೊಬ್ಬರ ಕಂಪನಿಗಳು ಗೂಡ್ಸ್‌ ರೈಲಿನÇàೆÉ ಸರಬರಾಜು ಮಾಡುತ್ತವೆ. ಆದರೆ, ಮಳೆಯಿಂದ ನಿಗದಿತ ಸಮಯಕ್ಕೆಪೂರೈಕೆ ಸಾಧ್ಯವಾಗುತ್ತಿಲ್ಲಎನ್ನುತ್ತಾರೆಕೃಷಿ ಇಲಾಖೆಯ ಅಧಿಕಾರಿಗಳು.

ಮಂಡ್ಯದಲ್ಲೇ ಅನ್‌ಲೋಡ್‌: ಮಂಡ್ಯ ರೈಲು ನಿಲ್ದಾ ಣವೇ ರಸಗೊಬ್ಬರ ಅನ್‌ಲೋಡ್‌ ಕೇಂದ್ರವಾಗಿದೆ. ರಸಗೊಬ್ಬರ ಪೂರೈಸುವ ಗೂಡ್ಸ್‌ ರೈಲುಗಳು ಮಂಡ್ಯದಲ್ಲಿಯೇ ಅನ್‌ಲೋಡ್‌ ಮಾಡುತ್ತವೆ. ಇಲ್ಲಿ ಅನ್‌ ಲೋಡ್‌ ಆಗುವ ಗೊಬ್ಬರಕಂಪನಿಗಳು ನಿಗದಿ ಮಾಡಿರುವ ಮೆಟ್ರಿಕ್‌ ಟನ್‌ಗಳಲ್ಲಿ ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ಸರಬ ರಾಜು ಮಾಡಲಾಗುತ್ತದೆ.

ಸೊಸೈಟಿಗಳಿಂದ ಸರಬರಾಜು: ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರಗಳನ್ನು ರೈತರ ವ್ಯವಸಾಯೋತ್ಪನ್ನ ಸೊಸೈಟಿ ಕೇಂದ್ರಗಳಿಂದಲೇ ಎಂ ಆರ್‌ಪಿ ಬೆಲೆಗೆ ವಿತರಣೆಗೆ ಕೃಷಿ ಇಲಾಖೆ ಕ್ರಮ ಕೈ ಗೊಂಡಿದೆ. ಸೊಸೈಟಿಗಳಲ್ಲಿ ರೈತರ ಹೆಬ್ಬೆಟ್ಟು ಹಾಗೂ ಆಧಾರ್‌ ನಂಬರ್‌ ಮೂಲಕ ಓಟಿಪಿ ಪಡೆದು ವಿತರಣೆ ಮಾಡಬೇಕು. ಇದರಿಂದ ಕೇಂದ್ರ ಸರ್ಕಾರಕ್ಕೆ ಆನ್‌ಲೈನ್‌ ಮುಖಾಂತರ ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ಇರುವ ಹಾಗೂ ಬೇಡಿಕೆ ಎಷ್ಟು ಎಂಬ ಮಾಹಿತಿ ಸಿಗಲಿದೆ. ಆದರೆ, ಈ ರೀತಿಯ ಆನ್‌ಲೈನ್‌ ಕೆಲ ವೊಂದು ಸೊಸೈಟಿಗಳಲ್ಲಿ ನಡೆಯುತ್ತಿಲ್ಲ, ಇದರಿಂದ ಮಾಹಿತಿಯ ಕೊರತೆ ಉಂಟಾಗಿದೆ. ಇದರಿಂದ ಗೊಬ್ಬರ ಪೂರೈಕೆಯಲ್ಲಿಯೂ ವಿಳಂಬವಾಗಿದೆ.

Advertisement

ಹೆಚ್ಚು ಖರೀದಿಯೂ ಕಾರಣ: ಜಿಲ್ಲೆಯಲ್ಲಿ ಇದುವರೆಗೂ 3 ಸಾವಿರ ಮೆಟ್ರಿಕ್‌ ಟನ್‌ ಯೂರಿಯಾ ಪೂರೈಕೆ ಮಾಡಲಾಗಿದೆ. ಗೂಡ್ಸ್‌ ರೈಲುಗಳಿಂದ ಅನ್‌ ಲೋಡ್‌ ಆಗುತ್ತಿದ್ದಂತೆ ಸೊಸೈಟಿಗಳಿಗೆ ಸರಬರಾಜುಮಾಡಲಾಗುತ್ತಿದೆ. ರೈತರು ಜಮೀನಿನ ಬೆಳೆಗೆ ಅಗತ್ಯಕ್ಕೆ ತಕ್ಕಂತೆ ಖರೀದಿಸದೆ ಮುಂದೆ ಯೂರಿಯಾ ಸಿಗುವುದಿಲ್ಲ ಎಂಬ ಆತಂಕದಿಂದ ಹೆಚ್ಚು ಖರೀದಿಸಿ, ಸಂಗ್ರಹ ಮಾಡಿಕೊಳ್ಳುತ್ತಿರುವುದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.

ಯೂರಿಯಾ ಬಳಕೆಯಿಂದ ಫ‌ಲವತ್ತತೆ ನಾಶ:ಆತಂಕ :  ಬೆಳೆಗೆ ಅಗತ್ಯದಷ್ಟು ಮಾತ್ರ ಯೂರಿಯಾ ಬಳಸಬೇಕು. ಹೆಚ್ಚು ಬಳಸುವುದರಿಂದ ಭೂಮಿ ಫ‌ಲವತ್ತತೆನಾಶವಾಗಲಿದೆ. ಯೂರಿಯಾ ಬೆಳೆ ಬೇಗ ಬೆಳೆಯಲು ಸಹಕರಿಸುತ್ತದೆ. ಅದರಂತೆ ಭೂಮಿಯ ಫ‌ಲವತ್ತತೆಯನ್ನು ಹಾಳು ಮಾಡುವುದಲ್ಲದೆ, ಭತ್ತದಕಾಳುಗಳು ಜೋಳ್ಳಾಗುವ ಸಾಧ್ಯತೆ ಇದೆ. ಜೊತೆಗೆ ಕೀಟ,ರೋಗರುಜಿನಗಳ ಬಾಧೆಯೂ ಹೆಚ್ಚಾಗುತ್ತದೆ. ಆದ್ದರಿಂದ ಯೂರಿಯಾ ಬದಲುಕಾಂಪ್ಲೆಕ್ಸ್‌ ಗೊಬ್ಬರ ಬಳಸಬಹುದು. ಕಾಂಪ್ಲೆಕ್ಸ್‌ ಗೊಬ್ಬರ ಹಾಕುವುದರಿಂದ ಬೆಳೆ ನಿಧಾನವಾಗಿ ಬಂದರೂ ಉತ್ತಮ ಫ‌ಸಲು ಸಿಗಲಿದ್ದು, ರೋಗರುಜಿನಗಳಿಂದ ಪಾರಾಗಬಹುದು ಎಂದು ರೈತ ಮುಖಂಡ ಹನಿಯಂಬಾಡಿ ನಾಗರಾಜು ತಿಳಿಸಿದ್ದಾರೆ.

ರಸಗೊಬ್ಬರ ಸಂಗ್ರಹ :  ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇಕೊರತೆ ಇಲ್ಲ. ಪ್ರಸ್ತುತಕಾಂಪ್ಲೆಕ್ಸ್‌ ಗೊಬ್ಬರ25 ಸಾವಿರ ಮೆಟ್ರಿಕ್‌ ಟನ್‌, ಡಿಎಸ್‌ಸಿ 1450 ಮೆಟ್ರಿಕ್‌ ಟನ್‌,ಎಂಒಪಿ 2845 ಮೆಟ್ರಿಕ್‌ ಟನ್‌, ಸೂಪರ್‌ ಕಾಂಪ್ಲೆಕ್ಸ್‌1975 ಮೆಟ್ರಿಕ್‌ ಟನ್‌ ಸಂಗ್ರಹವಿದೆ.

ಜಿಲ್ಲೆಯಲ್ಲಿ ಯಾವುದೇ ಕೃತಕ ಅಭಾವ :  ಸೃಷ್ಟಿಯಾಗಿಲ್ಲ. ನಿಯಮಾವಳಿಗಳಂತೆ ಪೂರೈಕೆ ಮಾಡ ಲಾಗುತ್ತಿದೆ.ಕೃತಕ ಅಭಾವ ಸೃಷ್ಟಿಯಾಗ ದಂತೆ ಎಚ್ಚರ ವಹಿಸಲಾಗಿದೆ. ಕಳೆದ ವಾರ ಪ್ರತಿದಿನ 900, 480, 280 ಟನ್‌ಗಳಂತೆಯೂರಿಯಾ ಪೂರೈಕೆಯಗುತ್ತಿದೆ. ಭಾನುವಾರ 900 ಟನ್‌ಯೂರಿಯಾ ಬರಲಿದೆ. ಸೋಮವಾರ, ಬುಧವಾರವೂಸರಬರಾಜಾಗಲಿದೆ. ಬೇಡಿಕೆ ಇರುವಕಡೆ ಪೂರೈಸಲಾಗುತ್ತಿದೆ. ಚಂದ್ರಶೇಖರ್‌, ಜಂಟಿ ಕೃಷಿ ನಿರ್ದೇಶಕ, ಮಂಡ್ಯ

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next