Advertisement

ಅಕ್ರಮ ತಡೆಗೆ ಪಿಡಿಒ ವರ್ಗಾವಣೆಗೆ ಆಗ್ರಹ

04:44 PM Dec 31, 2022 | Team Udayavani |

ಮಧುಗಿರಿ: ಕೋಡ್ಲಾಪುರ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷರ ಪತಿಯ ಕೈವಾಡದಿಂದ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಹಾಗೂ ಅದಕ್ಕೆ ಸಹಕರಿಸು ತ್ತಿರುವ ಪಿಡಿಒ ಅವರನ್ನು ವರ್ಗಾವಣೆ ಮಾಡುವಂತೆ ಸದಸ್ಯರೊಂದಿಗೆ ಉಪಾಧ್ಯಕ್ಷೆ ಲಲಿತಮ್ಮ ನಾರಾಯಣ ಗೌಡ ಆಗ್ರಹಿಸಿದ್ದಾರೆ.

Advertisement

ಪಟ್ಟಣದ ತಾಪಂ ಕಚೇರಿಯಲ್ಲಿ ಇಒ ಅವರನ್ನು ಭೇಟಿ ಮಾಡಿ ಮಾತನಾಡಿದ ಉಪಾಧ್ಯಕ್ಷೆ ಲಲಿತಾ ನಾರಾಯಣ ಗೌಡ, ಗ್ರಾ.ಪಂ.ನಲ್ಲಿ ಅಧ್ಯಕ್ಷೆ ಸವಿತ ಪತಿ ನರಸಿಂಹಮೂರ್ತಿಯ ಸಂಪೂರ್ಣ ಹಸ್ತಕ್ಷೇಪವಿದ್ದು ಇದನ್ನು ತಡೆಯಲು ಪಿಡಿಒ ನಾಗವೇಣಿ ವಿಫ‌ಲರಾಗಿ ದ್ದಾರೆ ಎಂದು ಆರೋಪಿಸಿದರು.

ಕಳೆದ ತಿಂಗಳು ಜಿಪಂನಿಂದ ಅನುಮತಿ ಪಡೆ ಯದೇ ಅನಧಿಕೃತವಾಗಿ ಕಂಪ್ಯೂಟರ್‌ ಸಿಬ್ಬಂದಿ ನೇಮಕ ಮಾಡಿ ಕೊಂಡಿದ್ದು, ಮಾಡದ ಕೆಲಸಕ್ಕೆ ಬಿಲ್‌ ನೀಡುತ್ತಿದ್ದು ಪಿಡಿಒ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ ದರು.

ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಪತಿಯನ್ನು ಕೂರಿಸಿಕೊಂಡು ಸಭೆ ಮಾಡುತ್ತಿರುವುದು ಕಾನೂನು ಬಾಹಿರ ಎಂದರು. ಪಂಚಾಯ್ತಿಯಲ್ಲಿನ ಅವ್ಯವಹಾರ ಖಂಡಿಸಿ ಜಿ. ಪಂ. ಸಿಇಒಗೆ ಮನವಿ ನೀಡಿದ್ದು ಪಿಡಿಒ ಅವರನ್ನು ಅಮಾನತುಗೊಳಿಸಲು ಸೂಚಿಸಿದ್ದರು. ಆದರೆ ಇಲ್ಲಿಯವ‌ರೆಗೂ ತಾ.ಪಂ.ಇಓರವರು ಕ್ರಮ ವಹಿಸಿಲ್ಲ ಎಂದರು.

ಸದಸ್ಯರಾದ ಶಿಲ್ಪ, ರಾಜು, ಯಶೋದಮ್ಮ, ಲೋಕೇಶ್‌, ವಿಜಯ್‌ ಕುಮಾರ್‌, ಭಾಗ್ಯಮ್ಮ, ಕೃಷ್ಣಾ ನಾಯ್ಕ, ಮಂಜುಳಾ, ಗಾಯಿತ್ರಮ್ಮ, ಇತರೆ ಮುಖಂಡರು ಇದ್ದರು. ಪಿಡಿಒ ಕಾರ್ಯವೈಖರಿ ಹಾಗೂ ಅಧ್ಯಕ್ಷರ ಪತಿಯ ದುರ್ನಡತೆ ಬಗ್ಗೆ ಹಲವು ಬಾರಿ ದೂರು ಬಂದಿರುತ್ತೆ. ವಿಚಾರಣೆ ಹಾಗೂ ಪಶೀಲನೆ ನಡೆಸಿದ್ದು, ಸೋಮವಾರ ಪಿಡಿಒ ಬದಲಾವಣೆ ಮಾಡಲಾಗುವುದು. ಲಕ್ಷ್ಮಣ್‌, ಇಒ, ತಾಪಂ ಮಧುಗಿರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next