Advertisement

ಚೌಟರ ಹೆಸರಿನಲ್ಲಿ ಶಾಶ್ವತ ಸ್ಮಾರಕ ನಿರ್ಮಾಣಕ್ಕೆ ಆಗ್ರಹ

07:09 PM Jun 28, 2019 | Sriram |

ಮಂಜೇಶ್ವರ: ಬಹುಮುಖೀ ಸಾಧಕ ಡಾ| ದರ್ಬೆ ಕೃಷ್ಣಾನಂದ ಚೌಟ (ಡಾ| ಡಿ.ಕೆ. ಚೌಟ) ಅವರಿಗೆ ನಾಡಿನ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಮತ್ತು ಕೇರಳ ತುಳು ಅಕಾಡೆಮಿ ವತಿಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ನಿವಾಸ “ಗಿಳಿವಿಂಡು’ನಲ್ಲಿ ಸಮಾರಂಭ ನಡೆಯಿತು.

Advertisement

ಬೇರೆ, ಬೇರೆ ವಲಯಗಳಲ್ಲಿ ಅವರು ನಡೆಸಿದ ಸಾಧನೆ ಕಿರಿಯ ತಲೆಮಾರಿಗೆ ಮಾರ್ಗದೀಪ. ಅವರ ಅಗಲುವಿಕೆ ತಂದದ್ದು ತುಂಬಲಾರದ ನಷ್ಟ ಎಂದು ಸಭೆ ಅಭಿಪ್ರಾಯಪಟ್ಟಿದ್ದು, ಅವರ ಹೆಸರಲ್ಲಿ ಶಾಶ್ವತ ಸ್ಮಾರಕ ನಿರ್ಮಾಣವಾಗಲಿ ಎಂದು ಸಭೆಆಗ್ರಹಿಸಿದೆ.

ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ. ಭಟ್‌ ಅವರು ಮಾತನಾಡಿ ನುಡಿದಂತೆ ನಡೆದ ಚೌಟರು ಕರ್ಮಯೋಗಿ, ಮಾನವತಾವಾದಿ ಯಾಗಿದ್ದರು. ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದವರು ಎಂದು ನುಡಿದರು.

ಸಿ.ಪಿ.ಐ. ನೇತಾರ ಬಿ.ವಿ. ರಾಜನ್‌ ಅವರು ಸಂತಾಪ ಸೂಚಿಸಿ ಯಾವ ಪಂಥಕ್ಕೂ ಸೇರದೇ ಇದ್ದ ಡಿ.ಕೆ.ಚೌಟ ಸ್ವತಂತ್ರ ಚಿಂತನೆಯೊಂದಿಗೆ ಸಾಧನೆಗೆ ತೊಡಗಿದವರು. ಅವರನ್ನು ಮಾದರಿಯಾಗಿಸಿ ಬದುಕುವುದು ಇಂದು ಅನಿವಾರ್ಯ ಎಂದರು.

ಬಿ.ಜೆ.ಪಿ. ನೇತಾರ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರು ಮಾತನಾಡಿ ವೃತ್ತಿ – ಪ್ರವೃತ್ತಿಗಳಲ್ಲಿ ಏಕರೂಪದಿಂದ ಸಮಾಜಸೇವೆ ನಡೆಸಬಹುದು ಎಂದು ತೋರಿಕೊಟ್ಟವರು ಡಿ.ಕೆ. ಚೌಟರು. ಒಬ್ಬ ವ್ಯಕ್ತಿ ಮಾಡಿರುವ ಸಾಧನೆ ಮತ್ತೂಬ್ಬರಿಗೆ ನಡೆಸಲು ಅಸಾಧ್ಯ ಎಂಬುದು ಅವರನ್ನು ನೋಡಿ ತಿಳಿಯಬೇಕು ಎಂದರು.

Advertisement

ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ.ಸಾಲ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಸಹಾಯಕ ಶಿಕ್ಷಣಾಧಿ ಕಾರಿ ದಿನೇಶ್‌, ಜಿಲ್ಲಾ ಗ್ರಂಥಾಲಯ ಮಂಡಳಿ ಪ್ರತಿನಿಧಿ  ಹುಸೇನ್‌ ಮಾಸ್ಟರ್‌, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಬಿ.ಜೆ.ಪಿ. ನೇತಾರ ಹರಿಶ್ಚಂದ್ರ ಮಂಜೇಶ್ವರ, ಬಶೀರ್‌ ಕನಿಲ ಮೊದಲಾದವರು ಉಪಸ್ಥಿತರಿದ್ದರು.

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್‌. ಜಯಾನಂದ ಸ್ವಾಗತಿಸಿದರು. ಗಿಳಿವಿಂಡು ಯೋಜನೆಯ ಆಡಳಿತಾ ಧಿಕಾರಿ ಡಾ| ಕೆ. ಕಮಲಾಕ್ಷ ವಂದಿಸಿದರು.

ಜನಪರ ಚೌಟರು
ಚೌಟರು ತುಳುನಾಡಿನ ಜನಪರ ಧೋರಣೆಯ ಸಂಕೇತ ವಾಗಿದ್ದರು. ನಾಡಿನ ಸಮಗ್ರ ಅಭಿವೃದ್ಧಿಗೆ ಅವರ ಯೋಗದಾನವಿತ್ತು. ಮಂಜೇಶ್ವರದಲ್ಲಿ ನಡೆದ ಬೃಹತ್‌ ಸಮಾರಂಭಗಳಲ್ಲಿ ಅವರ ಪಾಲುದಾರಿಕೆ ದೊಡ್ಡ ಪ್ರಮಾಣದಲ್ಲಿತ್ತು. ಮೀಯಪದವಿನಲ್ಲಿ ಅವರು ನಿರ್ಮಸಿರುವ ಅತಿಥಿಗೃಹ ಅನೇಕ ಉನ್ನತ ವ್ಯಕ್ತಿಗಳ ಬರೋಣಕ್ಕೆ ಕಾರಣವಾಗಿದೆ ಎಂದರು.
-ಎ.ಕೆ.ಎಂ. ಅಶ್ರಫ್‌
ಅಧ್ಯಕ್ಷ , ಮಂಜೇಶ್ವರ ಬ್ಲಾಕ್‌ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next