Advertisement

ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಆಗ್ರಹ

10:09 AM Sep 15, 2017 | Team Udayavani |

ಚಿತ್ತಾಪುರ: ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ವಕೀಲರು ಗುರುವಾರ ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ ಹಾಕಿದರು.

Advertisement

ವಕೀಲರ ಸಂಘದ ಉಪಾಧ್ಯಕ್ಷ ಎಸ್‌ಎನ್‌ ನಂದೂರಕರ್‌, ಸಹಕಾರ್ಯದರ್ಶಿ ಎಲ್‌ಎ ಪಾಟೀಲ್‌, ಖಜಾಂಚಿ ಮಲ್ಲು ಸೂಲಹಳ್ಳಿ, ಹಿರಿಯ ವಕೀಲ ಎಸ್‌.ಟಿ. ಪಾಟೀಲ ನೇತೃತ್ವದಲ್ಲಿ ಬಹಿಷ್ಕಾರ ಹಾಕಲಾಯಿತು.

ಚಿಂಚೋಳಿ, ಸೇಡಂ ಹಾಗೂ ನೂತನ ತಾಲೂಕುಗಳಾದ ಕಾಳಗಿ, ಶಹಾಬಾದ ಜನತೆಗೆ ಅನೂಕೂಲ ಆಗುವಂತೆ ಚಿತ್ತಾಪುರ ಪಟ್ಟಣ ಎಲ್ಲರಿಗೂ ಮಧ್ಯದ ಕೇಂದ್ರ ಸ್ಥಾನವಾಗುತ್ತದೆ. ಚಿಂಚೋಳಿ, ಸೇಡಂ ನ್ಯಾಯಾಲಯಗಳಿಗಿಂತ ಚಿತ್ತಾಪುರ ನ್ಯಾಯಾಲಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇರುವುದರಿಂದ ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಲಯದ ಅಗತ್ಯವಿದೆ ಎಂದು ವಕೀಲರು ತಿಳಿಸಿದರು.

ಚಿಂಚೋಳಿ ಹಾಗೂ ಸೇಡಂ ಜನತೆ ಸಿವಿಲ್‌ ಪ್ರಕರಣಗಳಿಗಾಗಿ ಚಿತ್ತಾಪುರ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ಕಳದೆ ವರ್ಷ ಇಲ್ಲಿನ ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ ಕಾನೂನು ಸಚಿವ ಟಿ.ಬಿ ಜಯಚಂದ್ರ ಚಿತ್ತಾಪುರದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸುವ ಭರವಸೆ
ನೀಡಿದ್ದರು. ಇಲ್ಲಿನ ನೂತನ ನ್ಯಾಯಾಲಯ ಕಟ್ಟಡದಲ್ಲಿ ಜಿಲ್ಲಾ ನ್ಯಾಯಾಲಯ ಕಾರ್ಯನಿರ್ವಹಿಸಲು ಯೋಗ್ಯವಾಗಿದೆ.

ಇಲ್ಲಿ ಎಲ್ಲ ಮೂಲಸೌಲಭ್ಯಗಳು ಲಭ್ಯವಿರುವುದರಿಂದ ಜಿಲ್ಲಾ ನ್ಯಾಯಾಲಯ ಕಾರ್ಯನಿರ್ವಹಣೆಗೆ ಸಜ್ಜಾಗಲಿದೆ ಎಂದು ಹೇಳಿದ್ದರು ಎಂದು ವಕೀಲರು ತಿಳಿಸಿದರು.

Advertisement

ವಕೀಲರಾದ ಅಂಬರೀಶ ಜಾನೀಬ, ಸೋಮಶೇಖರ ದಿಗ್ಗಾಂವ, ಎಂ.ಎಸ್‌. ಮ್ಯಾಕೇರಿ, ಅಯ್ಯಣ್ಣ ಅವಂಟಿ, ಎಲ್‌.ಎಂ. ಪಟೇಲ್‌, ಪಿ.ಎಂ. ಗಾಯಕವಾಡ, ಸುಜಾತಾ ಮೊಸಳಗಿ, ಬಸವರಾಜ ಬೆಣ್ಣೂರ, ಎಂಎಸ್‌ ಹೋಳಿ, ಶೇಖ ಹುಸೇನ್‌, ಟೋಪಸಿಂಗ್‌, ಎಂಟಿ ಅರುಣಕರ್‌, ಗೌರಿಶಂಕರ ಸಾಲಿಮಠ, ಗಂಗಾಧರ ಸಾಲಿಮಠ, ಎಸ್‌.ಎನ್‌. ಜೋಷಿ, ಬಿ.ಎಸ್‌. ಹಿರೇಮಠ ಇದ್ದರು.

ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ನೇತೃತ್ವದಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಅವಂಟಿ, ಎಸ್‌.ಎನ್‌ ಪಾಟೀಲ, ಮಮತಾ ವಿ. ಲಡ್ಡಾ, ಲತಾ ಬಮ್ಮನಳ್ಳಿ, ವಿಜಯ ಲಕ್ಷ್ಮೀಕಾಂತಾ, ನಾಗರಾಜ ಕಡಬೂರ, ಈಶ್ವರ ಅಳ್ಳೋಳ್ಳಿ, ಬಸವರಾಜ ಸಿಂಪಿ, ಚಂದ್ರಶೇಖರ ಅಂಗಡಿ, ಸಂಗಣ್ಣಗೌಡ ಅಳ್ಳೋಳ್ಳಿ, ಬಿ.ಬಿ ದೊಡ್ಮನಿ, ಭೀಮಶಪ್ಪ ನಿಯೋಗ ಬೆಂಗಳೂರಿಗೆ ತೆರಳಿದೆ. ಅಲ್ಲಿ ಚೀಫ್‌ ಜಸ್ಟೀಸ್‌ ಹಾಗೂ ಆಡಳಿತ ನ್ಯಾಯಾಧೀಶರು, ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿ ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ನಿರ್ಣಯ ಕೈಗೊಂಡು ಆದೇಶಿಸುವಂತೆ ಮನವಿ ಸಲ್ಲಿಸಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next