ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಾಮ್ರೇಡ್ ದಿ| ಯಳಚಿತ್ತಾಯ ನಗರದ ಕಾಲನಿ ನಿವಾಸಿ
ಗಳು ಕಳೆದ 15 ವರ್ಷಗಳಿಂದ ರಸ್ತೆಗಾಗಿ ಹೋರಾಟ ನಡೆಸಿದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೇ ಇರುವು ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ದತ್ತ ಮುಖ ಮಾಡಿದ್ದಾರೆ.
ಬೆಳ್ತಂಗಡಿ-ಕೊಯ್ಯೂರು ರಸ್ತೆಯ ಕೆಲೆಂಜಿರೋಡಿ ಎಂಬಲ್ಲಿಂದ ಎಡಕ್ಕೆ 1.5 ಕಿ. ಮೀ. ಮಣ್ಣಿನ ರಸ್ತೆ ಹೊಂಡಗಳಿಂದ
ಆವೃತ್ತವಾಗಿದೆ. ಕಾಲನಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 15 ಕುಟುಂಬಗಳನ್ನೊಳಗೊಂಡು ಒಟ್ಟು 35-40 ಕಡು ಬಡಕುಟುಂಬಗಳಿವೆ.
500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ ಮೂಲ ಸೌಕರ್ಯವೇ ಇಲ್ಲ. ನಗರದಿಂದ ಕೇವಲ 2.5 ದೂರದಲ್ಲಿರುವ
ಕಾಲನಿ ಶಾಲೆಗೆ ತೆರಳುವ ಮಕ್ಕಳಿಗೆ, ವಯಸ್ಕರಿಗೆ ಕಾಲ್ನಡಿಗೆಯಲ್ಲಿ ಹೋಗಲು ಅಸಾಧ್ಯವಾಗಿದೆ. ವಾಹನ ಬಾಡಿಗೆಗೆ ಬರಲು ನಿರಾಕರಿಸುತ್ತಾರೆ. ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿದು ಹೊಂಡಗಳು ಸೃಷ್ಟಿಯಾಗುತ್ತವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ನಿರ್ಲಕ್ಷ್ಯ
ಕಾಲನಿ ಉಜಿರೆ- ಕೊಯ್ಯೂರು- ಲಾೖಲ ಗ್ರಾಮಗಳಿಗೆ ಸೇರಿದೆ. ಆಯಾ ಗ್ರಾಮಗಳಿಗೆ ಪ್ರತ್ಯೇಕ ಮನವಿ ನೀಡಿದರೂ ಎಲ್ಲ ಗ್ರಾಮಗಳು ನಿರ್ಲಕ್ಷ್ಯ ವಹಿವೆ ಎಂಬುದು ಗ್ರಾಮಸ್ಥರ ಅಳಲು.
ಕಾಲನಿ ಉಜಿರೆ- ಕೊಯ್ಯೂರು- ಲಾೖಲ ಗ್ರಾಮಗಳಿಗೆ ಸೇರಿದೆ. ಆಯಾ ಗ್ರಾಮಗಳಿಗೆ ಪ್ರತ್ಯೇಕ ಮನವಿ ನೀಡಿದರೂ ಎಲ್ಲ ಗ್ರಾಮಗಳು ನಿರ್ಲಕ್ಷ್ಯ ವಹಿವೆ ಎಂಬುದು ಗ್ರಾಮಸ್ಥರ ಅಳಲು.
ಅಪಘಾತದಲ್ಲಿ ಗಾಯಗೊಂಡು ನಡೆದಾಡಲಾಗದವರು, ವಯಸ್ಕರು, ಅನಾರೋಗ್ಯ ಪೀಡಿತರನ್ನು ತುರ್ತು ಸಂದರ್ಭಗಳಲ್ಲಿ ಹೊತ್ತು ಸಾಗಬೇಕಾದ ಪರಿಸ್ಥಿತಿ ಇದೆ ಹಾಗಾಗಿ ಹಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ ಎಂದು ಸ್ಥಳೀಯರಾದ ಲಕ್ಷ್ಮಣ ಜೆ.ಎಸ್., ರವಿ ಜೋಗಿ, ರವಿಚಂದ್ರ, ಲಕ್ಷ್ಮೀ ರವಿಕುಮಾರ್, ರೇವತಿ ರಮೇಶ್, ಯಮುನಾ ರವಿಶಂಕರ್, ಲಕ್ಷ್ಮೀ, ಸರೋಜಿನಿ, ಮೋಹಿನಿ, ಶಶಿಕಲಾ, ಶಾರದಾ ಮತ್ತಿತರ 350ಕ್ಕೂ ಹೆಚ್ಚು ಮತದಾರರು ತಿಳಿಸಿದ್ದಾರೆ.
ಪರಿಹಾರಕ್ಕೆ ಕ್ರಮ ಈ ವರೆಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಮೂರು ಗ್ರಾಮಗಳಿಗೆ ಸಂಬಂಧ ಪಡುವುದರಿಂದ ಉಜಿರೆ ಗ್ರಾಮಕ್ಕೆ ಒಳಪಡುವ ರಸ್ತೆಯಾದಲ್ಲಿ ಮುಂದಿನ ಆಡಳಿತ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
- ಪ್ರಕಾಶ್ ಶೆಟ್ಟಿ ಪಿಡಿಒ, ಉಜಿರೆ