Advertisement
ಕೆಬಿಜೆಎನ್ನೆಲ್ ವ್ಯಾಪ್ತಿಯಲ್ಲಿ ಬರುವ ಆಲಮಟ್ಟಿ, ನಾರಾಯಣಪುರ ಆಣೆಕಟ್ಟು ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಆಲಮಟ್ಟಿಯಿಂದ ನಿಡಗುಂದಿ, ಮುದ್ದೇಬಿಹಾಳ, ನಾಲತವಾಡ ಮಾರ್ಗವಾಗಿ ನಾರಾಯಣಪುರ ಚೆಕ್‌ಪೋಸ್ಟ್‌ವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ತುಂಬಾ ಹಾಳಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ರಸ್ತೆಯು ಕೆಬಿಜೆಎನ್ನೆಲ್ ವ್ಯಾಪ್ತಿಯಲ್ಲಿದ್ದು ಇದುವರೆಗೂ ಇದನ್ನು ಸುಧಾರಣೆ ಮಾಡದಿರಲು ಕಾರಣಗಳೇನು?, ಈ ರಸ್ತೆ ಪುನರ್ ನಿರ್ಮಾಣಕ್ಕೆ ಪ್ರಸ್ತಾವನೆಯು ವಿಭಾಗದಿಂದ ನಿಗಮದ ಕೇಂದ್ರ ಕಚೇರಿಗೆ ಬಂದಿದೆಯೇ? ಬಂದಿದ್ದಲ್ಲಿ ಮಂಜೂರಾತಿಗಾಗಿ ಕೈಗೊಂಡ ಕ್ರಮವೇನು?, ಸಾರ್ವಜನಿಕರು ಹಾಗೂ ರೈತರ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ಈ ರಸ್ತೆಯ ಪುನರ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದೇ? ಇಲ್ಲವಾದಲ್ಲಿ ಇದಕ್ಕೆ ಕಾರಣಗಳೇನು ಅನ್ನೋದರ ಕುರಿತು ವಿವರಣೆ ನೀಡಬೇಕು ಎಂದು ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ್ದರು.
Related Articles
Advertisement
ಇದಕ್ಕೆ ಸ್ಪಂದಿಸಿದ ಸಚಿವರು ಪಿಡಬ್ಲ್ಯೂಡಿ ಎಸಿಎಸ್ ಮತ್ತು ನೀರಾವರಿ ಇಲಾಖೆ ಎಸಿಎಸ್ ಜಂಟಿ ಸಭೆ ನಡೆಸಿ ರಸ್ತೆಯನ್ನು ಬಿಟ್ಟು ಕೊಡಲು ಒಪ್ಪಿದರೆ ಶಾಶ್ವತವಾಗಿ ಪಿಡಬ್ಲ್ಯೂಡಿಯಿಂದ ನಿರ್ವಹಣೆ ಮಾಡುತ್ತೇವೆ ಎಂದು ಅಧಿವೇಶನದಲ್ಲಿ ಭರವಸೆ ನೀಡಿ ಚರ್ಚೆ ಮುಕ್ತಾಯಗೊಳಿಸಿದರು. ಆದರೆ ಈ ವೇಳೆ ಜಲ ಸಂಪನ್ಮೂಲ ಸಚಿವರಾಗಿರುವ ಕಾರಜೋಳ ಅವರು ಪಿಡಬ್ಲ್ಯೂಡಿಯಿಂದ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದ್ದು ಗೊಂದಲ ಉಂಟು ಮಾಡಿದಂತಾಗಿತ್ತು.
ಸಚಿವರು ಅಧಿವೇಶನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸುವಾಗ ಪಿಡಬ್ಲ್ಯೂಡಿಯಿಂದ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದು ಬಾಯಿ ತಪ್ಪಿನಿಂದ ಆಗಿರಬಹುದು. ಅದು ನೀರಾವರಿ ಇಲಾಖೆಯಿಂದ ಎಂದಾಗಬೇಕಿತ್ತು. ಆದರೆ ಅಧಿವೇಶನದಲ್ಲಿ ಇದು ರೆಕಾರ್ಡ್ ಆಗಿದೆ. ಏನೂ ಮಾಡೋಕಾಗೊಲ್ಲ. ಇದೇ ಪ್ರಶ್ನೆಯನ್ನು ಪಿಡಬ್ಲ್ಯೂಡಿ ಸಚಿವರಿಗೂ ಕೇಳಿದ್ದೇನೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. -ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರು, ಮುದ್ದೇಬಿಹಾಳ