Advertisement

ಸಾಕುಪ್ರಾಣಿಗಳ ಆಹಾರ, ಔಷಧಕ್ಕೆ ಬೇಡಿಕೆ

11:09 PM Apr 16, 2020 | Sriram |

ಉಡುಪಿ: ಕೋವಿಡ್‌ 19 ವೈರಾಣು ಹರಡುವುದನ್ನು ತಪ್ಪಿಸಲು ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿ ಮುಂಜಾಗ್ರತೆ ವಹಿಸಲಾಗುತ್ತಿದೆ. ಕೆಲ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರಅವಕಾಶ ನೀಡಲಾಗಿದೆ. ಸಾಕು ಪ್ರಾಣಿಗಳಿಗೆ ಅಗತ್ಯವಿರುವ ಆಹಾರ, ಔಷಧಗಳಿಗೆ ತೊಂದರೆ ಆಗದಿರುವ ನಿಟ್ಟಿನಲ್ಲಿಯೂ ಜಿಲ್ಲಾ ಪಶುಸಂಗೋಪನ ಇಲಾಖೆ ಮುತುವರ್ಜಿ ವಹಿಸಿದೆ. ಪೆಟ್‌ ಶಾಪ್‌ ಮೆಡಿಕಲ್‌ ಶಾಪ್‌ಗ್ಳಲ್ಲಿ ಅಗತ್ಯ ಪ್ರಾಣಿಗಳ ವಸ್ತುಗಳು ಇರುವಂತೆ ನೋಡಿಕೊಳ್ಳಲಾಗಿದೆ.

Advertisement

ನಗರಭಾಗದಲ್ಲಿ ಒಟ್ಟು 3 ಪೆಟ್‌ಶಾಪ್‌ಗ್ಳಿದ್ದು, ನಿಗದಿತ ಅವಧಿಯಲ್ಲಿ ಕಾರ್ಯಾಚರಿಸುತ್ತಿವೆ. ಇವುಗಳಿಗೆ ಬೆಂಗಳೂರು, ಹೈದರಾಬಾದ್‌ಗಳಿಂದ ಅಗತ್ಯವಸ್ತುಗಳು ಪೂರೈಕೆ ಆಗುತ್ತಿವೆ. ವ್ಯಾಪಾರ ಕಡಿಮೆ ಲಾಕ್‌ಡೌನ್‌ನಿಂದಾಗಿ ಪೇಟ್‌ ಶಾಪ್‌ಗ್ಳಲ್ಲಿ ಹಿಂದೆ ಆಗುತ್ತಿದ್ದ ವ್ಯಾಪಾರ ಆಗುತ್ತಿಲ್ಲ. ಜನ ಪ್ರಾಣಿಗಳಿಗೆ ಮನೆ ಊಟ ನೀಡುತ್ತಿದ್ದಾರೆ. ಆದಾಗಿಯೂ ಶ್ವಾನಗಳ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದ್ದು ಔಷಧಗಳ ಬೇಡಿಕೆ ಕಡಿಮೆಯಿದೆ. ಕೆಲ ಮಂದಿ ಆನ್‌ಲೈನ್‌ ಬುಕಿಂಗ್‌ ಬೇಡಿಕೆಯನ್ನು ಇಟ್ಟರೂ ಈ ವ್ಯವಸ್ಥೆಯಿಲ್ಲ. ಸದ್ಯ ಸಾಕು ಪ್ರಾಣಿಗಳ ಆಹಾರ ವಸ್ತುಗಳ ಪೂರೈಕೆ ಸಮರ್ಪಕವಾಗಿದೆ ಎಂದು ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಸ್ಪಷ್ಟಪಡಿಸಿದ್ದಾರೆ.

ವ್ಯಾಪಾರ ಕಡಿಮೆ
ಪೆಟ್‌ಶಾಪ್‌ಗ್ಳಲ್ಲಿ ಆಡಳಿತ ಇಲಾಖೆಯಿಂದ ಕಾರ್ಯನಿರ್ವಹಿಸಲು ಆವಕಾಶ ನೀಡಲಾಗಿದೆ. ಸದ್ಯಕ್ಕೆ ವ್ಯಾಪಾರ ಕಡಿಮೆಯಾಗಿದೆ. ಪ್ರಾಣಿಗಳ ಆಹಾರಗಳಿಗೆ ಬೇಡಿಕೆ ಇವೆ. ಔಷಧಗಳು ಕಡಿಮೆ ಖರೀದಿಯಾಗುತ್ತಿವೆ.
 ಕಿರಣ್‌ ಕುಮಾರ್‌
ಅಂಗಡಿ ಮಾಲಕರು

Advertisement

Udayavani is now on Telegram. Click here to join our channel and stay updated with the latest news.

Next