Advertisement

ನೌಕರಿ ಖಾಯಂಗಾಗಿ ಆಗ್ರಹ : ಗ್ರಾಮ ಪಂಚಾಯತ್‌ ನೌಕರರ ಪ್ರತಿಭಟನೆ

10:08 PM Jun 04, 2019 | sudhir |

ಮಡಿಕೇರಿ : ಗ್ರಾಮ ಪಂಚಾಯತ್‌ ನೌಕರರನ್ನು ಏಕಕಾಲದಲ್ಲಿ ಖಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡಗು ಜಿಲ್ಲೆಯ ಗ್ರಾ.ಪಂ ನೌಕರರು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್‌. ಭರತ್‌ ಮಾತನಾಡಿ, ಗ್ರಾ.ಪಂ.ಗಳು ಸ್ವತಂತ್ರವಾಗಿ ಸ್ವಯಂ ಆಡಳಿತ ನಡೆಸಬೇಕೆಂಬ ಆದೇಶ ವಿದ್ದರೂ, ಪಂಚಾಯತ್‌ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿ ಸಲಾಗುತ್ತಿದೆ.

ರಾಜ್ಯದಲ್ಲಿ 61 ಸಾವಿರ ನೌಕರರಿಗೆ ಈಗಿನ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಸೇರಿ ಸುಮಾರು 830 ಕೋಟಿ ರೂ. ಬೇಕಿದೆ. ಆದರೆ ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣವನ್ನು ರೈತರ ಸಾಲ ಮನ್ನಾ ನೆಪದಲ್ಲಿ 312 ಕೋಟಿ ರೂಪಾಯಿಯನ್ನು ಸರಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಪಂಚಾಯತ್‌ ನೌಕರರಿಗೆ ಸರಕಾರ ನಿಗದಿಪಡಿಸಿದ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡಬೇಕೆಂದು ಸರ ಕಾರದ ಸ್ಪಷ್ಟ ನಿರ್ದೇಶನವಿದ್ದರೂ, ಬಹುತೇಕ ಪಂಚಾಯತ್‌ಗಳಲ್ಲಿ ನೌಕರರಿಗೆ ವೇತನ ನೀಡದೆ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಟೀಕಿಸಿದರು.

ಬೇಡಿಕೆಗಳು
ಅಪರ ಕಾರ್ಯದರ್ಶಿ ಸ್ವಾಮಿ ಅವರ ವರದಿಯಂತೆ ಎಲ್ಲ ನೌಕರರನ್ನು ಏಕಕಾಲದಲ್ಲಿ ಅನುಮೋದನೆ ಮಾಡ ಬೇಕು. ಎಲ್ಲ ನೌಕರರಿಗೆ ಸೇವಾ ಪುಸ್ತಕ ತೆರೆಯಬೇಕು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರಚಿಸಬೇಕು. ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ. ವೈದ್ಯಕೀಯ ವೆಚ್ಚ, ಸರಕಾರಿ ನೌಕರರಿಗೆ ನೀಡುವಂತೆ ಎಲ್ಲ ಗ್ರಾಮ ಪಂಚಾಯತ್‌ ನೌಕರರಿಗೂ ನೀಡಬೇಕು, ಪಂಚಾಯತ್‌ ನೌಕರರಿಂದ ಹೊಸ ಬಿಲ್‌ ಕಲೆಕ್ಟರ್‌ ಹುದ್ದೆಗೆ ಬಡ್ಡಿ ನೀಡಬೇಕು.

Advertisement

ಹೊಸ ಬಿಲ್‌ ಕಲೆಕ್ಟರ್‌ ಹುದ್ದೆಗೆ ನೇರ ನೇಮಕಾತಿ ಮಾಡಬಾರದು. ಬಿಲ್‌ ಕಲೆಕ್ಟರ್‌ ಹುದ್ದೆಯಿಂದ ಗ್ರೇಡ್‌2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ಡಿ ನೀಡಲು 2019ರ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು.

ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಪಿಡಿಒ ಭಡ್ತಿ, ಗ್ರೇಡ್‌1 ಭಡ್ತಿ ನೀಡಿ ಖಾಲಿಯಾದ ಗ್ರೇಡ್‌2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡು ವಂತಾಗಬೇಕು. ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಬಡ್ತಿಗೆ ಪರಿಗಣಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿ.ಪಂ ಅಧಿಕಾರಿಗಳಿಗೆ ನೀಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ, ಉಪಾಧ್ಯಕ್ಷ ಟಿ.ಕೆ.ಮೂರ್ತಿ, ತಾ. ಖಜಾಂಚಿ ವಂಸತ್‌, ಕಾರ್ಯದರ್ಶಿ ಪವಿತ್ರಾ, ಸದಸ್ಯ ವಿಜಯ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next