Advertisement
ನಿಡಶೇಸಿ ಗ್ರಾಮದ ಹೊರವಲಯದಲ್ಲಿರುವ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ (ಕೆಎಸ್ ಎಚ್‌ಡಿಎ)ಯ ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರದ 15 ಎಕರೆ ಪ್ರದೇಶದಲ್ಲಿ ಭೀಮ್, ಸುಫರಿತ್ ತಳಿಯ ಕಲ್ಲಂಗಡಿ ಬೆಳೆಯಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಪ್ಲಾಸ್ಟಿಕ್ ಮಲ್ಡಿಂಗ್ ತಂತ್ರಜ್ಞಾನದಲ್ಲಿ ಬೆಳೆಯಲಾಗಿದೆ. ಸದ್ಯ ಕಟಾವಿನ ಹಂತದಲ್ಲಿದ್ದು, ಪ್ರತಿ ಕಲ್ಲಂಗಡಿ ಬಳ್ಳಿಗೆ ಮೂರು ಟಿಸಿಲಿಗೆ ತಲಾ ಒಂದರಂತೆ ಕಾಯಿ ಇವೆ. ಪ್ರತಿ ಕಲ್ಲಂಗಡಿ ಹಣ್ಣು 10ರಿಂದ 11 ಕೆಜಿ ತೂಕವಿದೆ. ಈ ಕಲ್ಲಂಗಡಿ ಹಣ್ಣು ವೈಜ್ಞಾನಿಕವಾಗಿ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆದ ಕಾರಣ ಉತ್ತಮ ಗುಣಮಟ್ಟದ ಮಾನ್ಯತೆ ಹಿನ್ನೆಲೆಯಲ್ಲಿ ದುಬೈ ದೇಶದಿಂದ ಇದೇ ಮೊದಲ ಬಾರಿಗೆ 100 ಟನ್ ಬೇಡಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಕಟಾವು ನಂತರ ಮುಂಬೈ ಮೂಲಕ ದುಬೈ ಜಾಗತಿಕ ಮಾರುಕಟ್ಟೆ ಪ್ರವೇಶಿಸಲಿದೆ. ದುಬೈಗೆ ಪ್ರತಿ ಕೆಜಿಗೆ 14 ರೂ. ದರ ಒಪ್ಪಂದದನ್ವಯ 1.40 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
Related Articles
Advertisement
ಕೀಟಬಾಧೆ ನಿಯಂತ್ರಕ ಟ್ರ್ಯಾಪ್ : ಕಲ್ಲಂಗಡಿ ಬಳ್ಳಿಗೆ ಕಾಡುವ ವಿವಿಧ ಕೀಟಬಾಧೆ ನಿಯಂತ್ರಿಸಲು ಅಂಟು ದ್ರಾವಣವಿರುವ ಕೀಟ ಆಕರ್ಷಕ ಹಳದಿ, ನೀಲಿ ಬಣ್ಣದ ಟ್ರ್ಯಾಪ್ ಅಳವಡಿಸಲಾಗಿದೆ. ಕಲ್ಲಂಗಡಿ ಬಳ್ಳಿಗೆ ದಾಳಿ ಇಡುವ ಕೀಟಗಳು ಬಣ್ಣದ ಟ್ರ್ಯಾಪ್ ಸೆಳೆತಕ್ಕೆ ಅಂಟಿಕೊಂಡು ಸಾಯುತ್ತವೆ. ಇದರಿಂದ ಸಾವಿರಾರು ವ್ಯಯಿಸುವ ಕ್ರಿಮಿನಾಶಕದ ಖರ್ಚು ತಗ್ಗಿಸಿದೆ. 2 ಕೆಜಿ ಟ್ರ್ಯಾಪ್ ಗೆ 1 ಸಾವಿರ ರೂ. ಖರ್ಚು ಬರುತ್ತಿದ್ದು, 10 ಸಾವಿರ ರೂ. ಕ್ರಿಮಿನಾಶಕದ ಖರ್ಚು ಉಳಿಯುತ್ತದೆ. ಬೇಸಿಗೆಯಲ್ಲಿ ವಿಪರೀತ ಬಿಸಿಲಿಗೆ ಕಲ್ಲಂಗಡಿಗೆ ಸೀಳು ಬರದಂತೆ ಸಾವಯವ ಆಧಾರಿತ ಸಿಂಪರಣೆ ಕ್ರಮ ಕೈಗೊಂಡಿರುವುದಾಗಿ ದಾಸರ ವಿವರಿಸಿದರು.
ಬೇಸಿಗೆಯಲ್ಲಿ ಮಾವು ಹೊರತುಪಡಿಸಿದರೆ ಕಲ್ಲಂಗಡಿ ಹೆಚ್ಚು ಮಾರಾಟವಾಗುತ್ತದೆ. ಬೇಸಿಗೆಯ ತಾಪಮಾನ ಹಿನ್ನೆಲೆಯಲ್ಲಿ ಹೆಚ್ಚು ನೀರಿನಾಂಶವಿರುವ, ದೇಹವನ್ನು ತಂಪಾಗಿಸುವ ಈ ಹಣ್ಣನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಈ ಹಣ್ಣಿಗೆ ಕ್ರಮೇಣ ಬೇಡಿಕೆ ಹೆಚ್ಚಿದ್ದು, ಕಳೆದ ವರ್ಷ ಕುಷ್ಟಗಿ ತಾಲೂಕಿನಲ್ಲಿ 140ರಿಂದ 150 ಹೆಕ್ಟೇರ್ ಬೆಳೆಯಲಾಗಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ 200 ಹೆಕ್ಟೇರ್‌ಗೆ ವಿಸ್ತರಿಸಲಾಗಿದೆ. –ಕೆ.ಎಂ. ರಮೇಶ,ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ
-ಮಂಜುನಾಥ ಮಹಾಲಿಂಗಪುರ