ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ ಅವರ 56 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಾಂಗ್ರೆಸನ ಜೋಡೆತ್ತುಗಳಾದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿನಯ ಕುಲಕರ್ಣಿ ಅವರೊಂದಿಗೆ ಪಕ್ಷ ಇರುತ್ತೆ. ಅವರನ್ನು ಶಾಸಕರನ್ನಾಗಿ ಮಾಡಿದರೆ ಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅದೇ ಭರವಸೆ ನಿರೀಕ್ಷೆಯಲ್ಲಿ ಕ್ಷೇತ್ರದ ಜನತೆ ಹಾಗೂ ಧಾರವಾಡ ಜಿಲ್ಲೆಯ ಜನತೆ ಇದ್ದು, ಜನರ ಪ್ರಶ್ನೆಗಳಿಗೆ ಉತ್ತರವನ್ನು ಮಂತ್ರಿ ಮಾಡುವ ಮೂಲಕ ಇಬ್ಬರು ನಾಯಕರು ಕೊಡಬೇಕೆಂದು ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಹಾಗೂ ವಿನಯ ಕುಲಕರ್ಣಿ ಅಭಿಮಾನಿಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಧಾರವಾಡ ವಿವೇಕಾನಂದ ವೃತ್ತ ದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ವಿನಯ ಕುಲಕರ್ಣಿಯವರು ಕ್ಷೇತ್ರದಿಂದ ಹೊರಗಿದ್ದುಕೊಂಡು ಐತಿಹಾಸಿಕ ಗೆಲವು ಸಾಧಿಸಿದ್ದಾರೆ.ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ವಹಿಸಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ವಿನಯ ಕುಲಕರ್ಣಿಯವರ ಶ್ರಮ ಅಪಾರವಾಗಿದೆ,ಹೀಗಾಗಿ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನಮಾನ ಕೊಡಬೇಕು, ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅರವಿಂದ ಏಗನಗೌಡರ,ಈಶ್ವರ ಶಿವಳ್ಳಿ,ಪ್ರಶಾಂತ ಕೆಕರೆ,ಸಂಜು ಲಕಮನಹಳ್ಳಿ,ಆತ್ಮಾನಂದ ಅಂಗಡಿ,ಶಂಬು ಸಾಲಮನಿ,ಮುಕ್ತಿಯಾರ ಪಠಾಣ, ಭೀಮಪ್ಪ ಕಾಸಾಯಿ,ರೇಣುಕಾ ಕಳ್ಳಮನಿ,ಅಜ್ಜಪ ಗುಲಾಲದವರ,ಆನಂದ ಸಿಂಗನಾಥ, ಮಂಜುನಾಥ ಬಿಮಕ್ಕನ್ನವರ,ಪ್ರಕಾಶ ಬಾವಿಕಟ್ಟಿ,,ಮೈಲಾರಿಗೌಡ ಪಾಟಿಲ,ಸಿದ್ದಪ್ಪ ಸಪ್ಪೂರಿ,ಬಸವರಾಜ ಹೆಬ್ಬಳ್ಳಿ,ಯಲ್ಲಪ್ಪ ಸುಣಗಾರ,ಸುನಿಲ ಗೌಡ್ರ,ಸಂಜು ಚುರಮರಿ, ಮಹಬೂಬ ಮುಲ್ಲಾನ್ನವರ, ಬಸವರಾಜ ಜಾದವ,ರಮೇಶ ತಳಗೇರಿ,ಈರಣ್ಣ ಕದಂ,ಈರಣ್ಣ ಬಾರಕೇರ,ಶಿವಾನಂದ ಎಣಗಿ,ಶಿವಾನಂದ ಗಿರಿಯೆಪ್ಪನ್ನವರ, ಪ್ರತಿಭಟನೆಯೆಲ್ಲಿ ಉಪಸ್ಥಿತರಿದ್ದರು.