Advertisement

ಮಹಾಲಿಂಗಪುರ ತಾಲೂಕಿಗೆ ಒತ್ತಾಯಿಸಿ ಎ.14 ರಿಂದ ಧರಣಿ ಸತ್ಯಾಗ್ರಹ 

11:34 PM Apr 09, 2022 | Team Udayavani |

ಮಹಾಲಿಂಗಪುರ : ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರಕ್ಕಾಗಿ ಒತ್ತಾಯಿಸಿ ಏ.14 ರಿಂದ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ತಾಲೂಕು ಹೋರಾಟ ಸಮಿತಿಯ ಮಹಾಲಿಂಗಪ್ಪ ಕೋಳಿಗುಡ್ಡ, ಧರೆಪ್ಪ ಸಾಂಗ್ಲಿಕರ್ ಹೇಳಿದರು.

Advertisement

ಶನಿವಾರ ಪಟ್ಟಣದ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಯ ವಿಶೇಷ ಸಭೆಯಲ್ಲಿ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳ ಹಿರಿಯರ ಸಭೆಯಲ್ಲಿ ಯಾವುದೇ ಕಾರಣಕ್ಕೂ ಮಹಾಲಿಂಗಪುರ ಪಟ್ಟಣ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳನ್ನು ನೂತನ ತೇರದಾಳ ತಾಲೂಕಿಗೆ ಸೇರಿಸಬಾರದು.ಮುಖ್ಯವಾಗಿ ಮಹಾಲಿಂಗಪುರ ಪಟ್ಟಣ ಮತ್ತು ಸುತ್ತಲಿನ 9 ಗ್ರಾಮಗಳು ಹಾಗೂ ಮುಧೋಳ ರನ್ನಬೆಳಗಲಿ, ಅಕ್ಕಿಮರಡಿ, ನಾಗರಾಳ ಸೇರಿದಂತೆ ಹಲವು ಗ್ರಾಮಗಳನ್ನು ಸೇರಿಸಿ ಮಹಾಲಿಂಗಪುರ ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ, ನಮ್ಮ ಬೇಡಿಕೆ ಈಡೆರುವರೆಗೂ ಯಾವುದೇ ರಾಜಕೀಯ ತಂತ್ರ, ಪ್ರಭಾವಕ್ಕೆ ಒಳಗಾಗದೇ ಪಕ್ಷಾತೀತವಾಗಿ ಧರಣಿ ಸತ್ಯಾಗ್ರಹ ನಡೆಸಲು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು.

ಏ.14 ರಂದು ಮುಂಜಾನೆ 10 ಗಂಟೆಗೆ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಡಚೌಕಿ, ಜವಳಿ ಬಜಾರ, ಗಾಂಧಿ ವೃತ್ತದ ಮಾರ್ಗವಾಗಿ ಚನ್ನಮ್ಮ ವೃತ್ತದಲ್ಲಿ ನಿರ್ಮಿಸುವ ಮಹಾಲಿಂಗಪುರ ತಾಲೂಕು ಹೋರಾಟ ವೇದಿಕೆವರೆ ಬೃಹತ್ ಮೆರವಣಿಗೆ ಮೂಲಕ ಪಾದಯಾತ್ರೆ ನಡೆಸಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ರನ್ನಬೆಳಗಲಿ ಹಿರಿಯರಾದ ಸಿದ್ದುಗೌಡ ಪಾಟೀಲ್, ಪಂಡಿತ್ ಪೂಜಾರಿ, ಅಶೋಕ ಸಿದ್ದಾಪೂರ, ಚಿಕ್ಕಪ್ಪ ನಾಯಕ, ಅಕ್ಕಿಮರಡಿಯ ಮಡಿವಾಳಯ್ಯ ಕಂಬಿ, ಕಿರಣ ಜಗದಾಳ, ಕುಮಾರ ಮಂಟೂರ, ಸಂತೋಷ ಜಗದಾಳ,ಕಲ್ಲಪ್ಪ ತಳವಾರ, ಹೊಳೆಬಸು ಮಠದ, ಢವಳೇಶ್ವರದ ಸಿದ್ದನಗೌಡ ಪಾಟೀಲ್, ಮಾರುತಿ ಹವಾಲ್ದಾರ್, ಕೆಸರಗೊಪ್ಪದ ಭೀಮಸಿ ಸಸಾಲಟ್ಟಿ, ಚನ್ನು ದೇಸಾಯಿ, ದುಂಡಪ್ಪ ಜಾಧವ,ಬಸವರಾಜ ಮರನೂರ, ಮಾರಾಪೂರದ ಮಹಾದೇವ ಮೇಟಿ(ಮಾರಾಪೂರ), ಮಹಾಲಿಂಗಪುರದ ಯಲ್ಲನಗೌಡ ಪಾಟೀಲ್ , ನಿಂಗಪ್ಪ ಬಾಳಿಕಾಯಿ, ಮಲ್ಲಪ್ಪ ಭಾಂವಿಕಟ್ಟಿ, ಮನೋಹರ ಶಿರೋಳ, ಜಾವೇದ ಬಾಗವಾನ, ಬಂದು ಪಕಾಲಿ, ಸಂಗಪ್ಪ ಹಲ್ಲಿ, ಶ್ರೀಶೈಲ ಪ್ಪ ಉಳ್ಳಾಗಡ್ಡಿ, ಜಯವಂತ ಕಾಗಿ, ಶ್ರೀಶೈಲಪ್ಪ ಹಿಪ್ಪರಗಿ, ಹಣಮಂತ ಜಮಾದಾರ, ಸಿದ್ದು ಶಿರೋಳ,ಮಹಾಲಿಂಗ ಹಿಕಡಿ, ಸೇರಿದಂತೆ ಹಲವರು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next