Advertisement

ಭಾರತದ ಲಸಿಕೆಗೆ ವಿದೇಶದಿಂದ ಬೇಡಿಕೆ

10:50 PM Jan 16, 2021 | Team Udayavani |

ಬಂಟ್ವಾಳ: ಕೋವಿಡ್‌- 19 ವಿರುದ್ಧದ ಹೋರಾಟದಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಪ್ರಧಾನಿ ಮೋದಿ ವರ್ಷದೊಳಗೆ ವಿಜ್ಞಾನಿಗಳ ಮೂಲಕ ಲಸಿಕೆ ತಯಾರಿಗೆ ಪ್ರೇರಣೆ ನೀಡಿದ್ದು, ದೇಶದಲ್ಲೇ ತಯಾರಾಗಿರುವ ಈ ಲಸಿಕೆಗೆ ವಿದೇಶಗಳಿಂದಲೂ ಬೇಡಿಕೆ ಬರುತ್ತಿ ರುವುದು ನಾವು ಹೆಮ್ಮೆ ಪಡಬೇಕಾದ ವಿಚಾರ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಅವರು ಶನಿವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಹಯೋಗದಲ್ಲಿ ಕೋವಿಡ್‌-19 ಚುಚ್ಚುಮದ್ದು ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಬಂಟ್ವಾಳ ತಾ.ಪಂ.ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಪುರಸಭಾ ಅಧ್ಯಕ್ಷ ಮಹಮ್ಮದ್‌ ಶರೀಫ್‌, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಬುಡಾ ಅಧ್ಯಕ್ಷ ಬಿ. ದೇವದಾಸ್‌ ಶೆಟ್ಟಿ, ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌ ಎಂ.ಪಿ., ಆಡಳಿತ ವೈದ್ಯಾಧಿಕಾರಿ ಡಾ| ಪುಷ್ಪಲತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಕಂಬಳಿ, ಸುಧಾ ಜೋಶಿ, ಶಿಕ್ಷಣ ಸಂಯೋಜಕಿ ಸುಜಾತಾ, ಡಾ| ತುಫೇಲ್‌, ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಸ್ವಾಗತಿಸಿದರು. ಆರೋಗ್ಯ ಇಲಾಖೆ ಸಿಬಂದಿ ಸುರೇಶ್‌ ಪರ್ಕಳ ವಂದಿಸಿದರು.

1,030 ಡೋಸ್‌ ಲಸಿಕೆ :

Advertisement

ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಹಂತದಲ್ಲಿ ಒಟ್ಟು 2,503 ಆರೋಗ್ಯ ಇಲಾಖೆ ಸಿಬಂದಿ ಕೋವಿಡ್‌-19 ಲಸಿಕೆ ನೀಡುವುದಕ್ಕೆ ನೋಂದಣಿ ಮಾಡಿಕೊಂಡಿದ್ದು, ಪ್ರಥಮ ದಿನ 100 ಮಂದಿಗೆ ಲಸಿಕೆ ನೀಡಲಾಯಿತು. ತಾಲೂಕಿಗೆ 1,030 ಡೋಸ್‌ ಲಸಿಕೆ ಬಂದಿದ್ದು, ಮುಂದೆ 22 ಬೂತ್‌ಗಳ ಮೂಲಕ ನೀಡಲಾಗುತ್ತದೆ. 39 ಇಂಜೆಕ್ಷನ್‌ ಸೆಷನ್‌ ಮಾಡಲಾಗಿದೆ. 2ನೇ ಹಂತದಲ್ಲಿ ಪೊಲೀಸ್‌, ಕಂದಾಯ, ಸೇನೆ, ಪೌರ ಕಾರ್ಮಿಕರಿಗೆ ನೀಡಲಾಗುತ್ತದೆ ಎಂದು ಡಾ| ದೀಪಾ ಪ್ರಭು ತಿಳಿಸಿದರು.

ದೀಪ ಬೆಳಗಿದ ನೌಕರ :

ಕಾರ್ಯಕ್ರಮದ ಉದ್ಘಾಟನೆಗೆ ನಿರ್ವಾಹಕರು ಶಾಸಕರ ಬಳಿ ವಿನಂತಿಸಿದಾಗ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ದೀಪ ಬೆಳಗಿಸುವುದಕ್ಕೆ ಪ್ರಥಮ ಲಸಿಕೆ ತೆಗೆದುಕೊಳ್ಳಲಿರುವ ಆಸ್ಪತ್ರೆಯ ಡಿ ಗ್ರೂಪ್‌ ನೌಕರ ಗಣೇಶ್‌ ಅವರನ್ನು ಕರೆದು ದೀಪ ಬೆಳಗಿಸುವಂತೆ ತಿಳಿಸಿದರು.

ಬಂಟ್ವಾಳದಲ್ಲಿ ಮೊದಲ ವ್ಯಕ್ತಿಯಾಗಿ ಲಸಿಕೆ ಪಡೆಯುತ್ತಿರುವುದರಿಂದ ಆತಂಕ ಇತ್ತು. ಆದರೆ ಲಸಿಕೆ ಪಡೆದ ಬಳಿಕ ಏನೂ ಆಗಿಲ್ಲ. ಪ್ರಸ್ತುತ ತಾನು ಎಲ್ಲರಲ್ಲೂ ಲಸಿಕೆ ಪಡೆಯುವಂತೆ ಮನವಿ ಮಾಡುತ್ತಿದ್ದು, ಯಾವುದೇ ಆತಂಕ ಪಡಬೇಕಿಲ್ಲ. -ಗಣೇಶ್‌, ಪ್ರಥಮ ಲಸಿಕೆ ಪಡೆದ ನೌಕರ.

Advertisement

Udayavani is now on Telegram. Click here to join our channel and stay updated with the latest news.

Next