Advertisement

ಅಕ್ರಮ ಮದ್ಯಮಾರಾಟ ತಡೆಗೆ ಆಗ್ರಹ

11:48 AM Feb 07, 2018 | Team Udayavani |

ಜೇವರ್ಗಿ: ಪಟ್ಟಣದ ಚಿಕ್ಕಜೇವರ್ಗಿ ಬಡಾವಣೆಯಲ್ಲಿ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಬಂದ್‌ ಮಾಡುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ತಾಲೂಕು ಘಟಕದ ವತಿಯಿಂದ ಗ್ರೇಡ್‌-2 ತಹಶೀಲ್ದಾರ್‌ ನಾಗಿಂದ್ರಪ್ಪ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಪುರಸಭೆ ವ್ಯಾಪ್ತಿಯ ವಾರ್ಡ್‌ ನಂ.13ರ ಚಿಕ್ಕಜೇವರ್ಗಿ ಬಡಾವಣೆಯಲ್ಲಿ ಪರವಾನಗಿ ಇಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅಲ್ಲಿನ ಬಡ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಕೂಲಿ ಮಾಡಿ ಬದುಕುವ ಕೂಲಿ ಕಾರ್ಮಿಕರು ದುಡಿಮೆ ಮಾಡಿ ತಂದ ಹಣವನ್ನು ಹಾಳು ಮಾಡುತ್ತಿರುವುದರಿಂದ ಮಕ್ಕಳು ಹೊಟ್ಟೆಗೆ ಅನ್ನವಿಲ್ಲದೇ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿ ಈ ಮದ್ಯದ ಅಂಗಡಿ ಇದ್ದುದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಬಡಾವಣೆಯಲ್ಲಿ ಪರವಾನಗಿ ಇಲ್ಲದ 4 ಅಂಗಡಿಗಳನ್ನು ಕೂಡಲೇ ಮುಚ್ಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಸಂಚಾಲಕ ಸಿದ್ದು ಮುದಬಾಳ, ಮಹೇಶ ಕೋಕಿಲೆ, ಸುಭಾಸ ಆಲೂರ, ಸಂಗು ಹರನೂರ, ಭೀಮಾಶಂಕರ ಹಂಗರಗಾ, ಭಾಗಣ್ಣ ಗೋಪಾಲಕರ್‌, ವಿಶ್ವರಾಧ್ಯ ಗೋಪಾಲಕರ್‌, ಸೋಮಶೇಖರ, ಯಲ್ಲಮ್ಮ ಚಂದ್ರಕಾಂತ, ಜಗಮ್ಮ ದೇವಪ್ಪ, ಭೀಮವ್ವ ಮುಡಬೂಳ, ಮಹಾದೇವಿ ದೇವಪ್ಪ, ಗೌರಮ್ಮ ಲಕ್ಷ್ಮಣ, ಹುಲಗಮ್ಮ ಹಣಮಯ್ಯ, ಫಾತೀಮಾ ಖಾಲೆಸಾಬ, ಲಕ್ಷ್ಮೀಬಾಯಿ ಹಣಮಂತ, ಶಿವಲಿಂಗಪ್ಪ ನಾಟಿಕಾರ, ಕಲ್ಲಣ್ಣ ಹಳ್ಳಿ, ನಾಗು ಮುಡಬೂಳ, ಜೈಭೀಮ ಅಯ್ಯಪ್ಪ, ಶಂಕರ ಗೋಪಾಲಕರ್‌, ಭೀಮು ಹರವಬಾಳ, ಗುಂಡಪ್ಪ ಚೌದ್ರಿ, ಆಡಿವೆಮ್ಮ ಮಡಿವಾಳಪ್ಪ ಇದ್ದರು.

ಅಕ್ರಮ ಸಾರಾಯಿ ಮಾರಾಟ ನಿಲ್ಲಿಸಿ
ಜೇವರ್ಗಿ: ತಾಲೂಕಿನ ಕೆಲ್ಲೂರ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಮಂಗಳವಾರ ಶ್ರೀರಾಮಸೇನೆ ತಾಲೂಕು ಘಟಕದ ವತಿಯಿಂದ ಅಬಕಾರಿ ಉಪನಿರೀಕ್ಷಕ ಎನ್‌.ಟಿ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಅನೇಕ ದಿನಗಳಿಂದ
ಕೆಲ್ಲೂರ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು,

ಇದರಿಂದ ಹಲವಾರು ಕುಟುಂಬಗಳು ಬೀದಿಪಾಲಾಗಿವೆ. ನಿತ್ಯ ಗ್ರಾಮದಲ್ಲಿ ಜಗಳ, ಗಲಭೆ ಹೆಚ್ಚಾಗಿದ್ದು, ಕುಡುಕರ ಹಾವಳಿ
ಹೆಚ್ಚಳವಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಬಕಾರಿ ಕಚೇರಿ ಎದುರು ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಶರಣು ಕೋಳಕೂರ, ಈಶ್ವರ ಹಿಪ್ಪರಗಿ, ಸಚಿನ್‌ ಶರಣಪ್ಪ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next