Advertisement

ಕೊನೆಯ ಹಂತದಲ್ಲಿ  ವಿಗ್ರಹಗಳಿಗೆ ಬೇಡಿಕೆ

09:17 PM Sep 08, 2021 | Team Udayavani |

ಕುಂದಾಪುರ: ಮಣ್ಣಿಗೆ ಹೆಡಗಿಗೆ (ಬುಟ್ಟಿಗೆ) ಕಳೆದ ವರ್ಷ 100 ರೂ. ಇದ್ದುದು ಈ ವರ್ಷ 150 ರೂ. ಆಗಿದೆ. ಬಣ್ಣಗಳನ್ನು ಆನ್‌ಲೈನ್‌ ಮೂಲಕ ತರಿಸಿದ್ದು ಅದರ ದರವೂ ಮೂರುಪಟ್ಟು ಏರಿದೆ. ಆದರೆ ಗಣೇಶೋತ್ಸವ ಆಚರಣೆ ಮಾಡುವ ಸಮಿತಿಗಳಿಗೆ ನಾವು ಕೊಡುವ ವಿಗ್ರಹ ತಯಾರಿ ದರ ಮಾತ್ರ ಏರಿಸಿಲ್ಲ. ಸರಕಾರದ ಅನುಮತಿ ಗೊಂದಲದಿಂದಾಗಿ ಆರಂಭದಲ್ಲಿ ವಿಗ್ರಹಗಳಿಗೆ ಈ ಹಿಂದಿನಂತೆ ಬೇಡಿಕೆ ಇರಲಿಲ್ಲ. 5 ದಿನಗಳ ಆಚರಣೆಗೆ ಸೆ. 5ರಂದು ಸರಕಾರ ಅನುಮತಿ ನೀಡಿದ ಬಳಿಕ ವಿಗ್ರಹಗಳಿಗೆ ಬೇಡಿಕೆ ಕುದುರಿದೆ. ಈಗ ಎಲ್ಲೆಡೆ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ನಡೆಯುತ್ತಿದೆ. ಕೊನೆಯ ಕ್ಷಣದಲ್ಲಿ ಮೂರ್ತಿಗಳಿಗೆ ದರ ಏರಿಸಿದರೆ ಕಷ್ಟ ಎನ್ನುತ್ತಾರೆ ವಸಂತ ಗುಡಿಗಾರ್‌ ಅವರು.

Advertisement

ಆರಂಭ :

ಕಳೆದ ನಾಲ್ಕು ದಶಕಗಳಿಂದ ಕುಂದಾಪುರದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಹಾಗೂ ಮನೆ ಮನೆಗಳಲ್ಲಿ ನಡೆಯುವ ಗಣೇಶೋತ್ಸವಕ್ಕೆ ಚಂದದ ವಿಗ್ರಹ ತಯಾರಿಸಿ ಕೊಡುವ ಗುಡಿಗಾರರು ಗಣೇಶೋತ್ಸವ ನಡೆಯುವುದು ಗೊಂದಲ ಇದ್ದುದರಿಂದ ವಿಗ್ರಹ ತಯಾರಿ ಕಷ್ಟ ವಾಗುವು ದ ರಿಂದ ಪೂರ್ವನಿಗದಿಯಂತೆ ವಿಗ್ರಹ ರಚನೆ ಆರಂಭಿಸಿದ್ದರು.

ದೊಡ್ಡ ವಿಗ್ರಹಗಳು :  ಕುಂದಾಪುರದ ರಾಮಮಂದಿರದ ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಗ್ರಹ ದೊಡ್ಡ ವಿಗ್ರಹವಾಗಿದ್ದು ಎರಡನೆಯ  ದೊಡ್ಡ ವಿಗ್ರಹ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ್ದು. ಹೆಮ್ಮಾಡಿ, ತಲ್ಲೂರು, ನೇರಂಬಳ್ಳಿ, ಕುಂದೇಶ್ವರ ದೇವಸ್ಥಾನ, ಗಂಗೊಳ್ಳಿ ರಾಮಮಂದಿರ, ತ್ರಾಸಿ ಭಗತ್‌  ನಗರ, ಗಂಗೊಳ್ಳಿ ಮಹಾಕಾಳಿ ದೇವಸ್ಥಾನ, ಮರವಂತೆ ಮೊದಲಾದೆಡೆಯ ಸಾರ್ವ ಜನಿಕ ಗಣೇಶೋತ್ಸವದ ವಿಗ್ರಹ ಇಲ್ಲಿ ತಯಾರಾಗುತ್ತಿವೆ.

ಪರಿಸರ ಸ್ನೇಹಿ :

Advertisement

ಆನೆಗುಡ್ಡೆ ಶ್ರೀ ಹರಿಹರ ದೇವಸ್ಥಾನ ಸೇರಿದಂತೆ ಕೆಲವೆಡೆ ಬಣ್ಣ ರಹಿತ ಪರಿಸರಸ್ನೇಹಿ ವಿನಾಯಕನನ್ನು ಪ್ರತಿಷ್ಠಾಪಿಸಲಾಗುತ್ತದೆ. ಮನೆಗಳಲ್ಲಿ ಪೂಜಿಸಲ್ಪಡುವ ವಿನಾಯಕನಿಗೆ ಇಲ್ಲಿ ಬಣ್ಣ ಹಾಕಲಾಗುತ್ತಿದೆ.  ಇದಕ್ಕೆ ಆಯಿಲ್‌  ಬೇಸ್ಡ್ ಬಣ್ಣದ ಬದಲು ವಾಟರ್‌ ಬೇಸ್ಡ್  ಬಣ್ಣ ಬಳಸಲಾಗುತ್ತದೆ. ಇದು ಪರಿಸರಕ್ಕೆ  ಹಾನಿಕರವಲ್ಲ. ಪ್ರತೀ ವರ್ಷ 90ಕ್ಕೂ ಅಧಿಕಪರಿಸರಸ್ನೇಹಿ ಗಣಪತಿ ವಿಗ್ರಹ ತಯಾರಿಸುತ್ತಿದ್ದರು. ಕಳೆದ ವರ್ಷ 70 ವಿಗ್ರಹಗಳ ತಯಾರಿ ಆಗಿದ್ದರೆ ಈ ವರ್ಷ 73 ವಿಗ್ರಹ ತಯಾರಿಸಲಾಗುತ್ತಿದೆ.

ಗೊಂದಲ :  ಭಕ್ತರ ಆಶಯದಂತೆ ವಿಗ್ರಹ ಪ್ರತೀ ವರ್ಷ ನಾಗರ ಪಂಚಮಿಯಂದು ಗಣಪತಿಯ ಪೀಠ, ಮಣೆಯನ್ನು ವಿಗ್ರಹ ರಚನೆಕಾರರಿಗೆ ನೀಡಿ  ವಿಗ್ರಹಗಳ ರಚನೆ ನಡೆಯುತ್ತದೆ. ಆದರೆ ಈ ವರ್ಷ ಚೌತಿಗೆ ನಾಲ್ಕು ದಿನ ಇರುವಾಗ ಸರಕಾರ ಮಾರ್ಗಸೂಚಿ ಪ್ರಕಟ ಮಾಡಿದೆ. ಆದ್ದರಿಂದ ತರಾತುರಿಯಲ್ಲಿ ವಿಗ್ರಹ ತಯಾರಿ ನಡೆಯುತ್ತಿದೆ. ಹಿಂದೆ 20ಕ್ಕೂ ಹೆಚ್ಚು  ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಬೇಡಿಕೆ ಬರುತ್ತಿತ್ತು. ಈ ಬಾರಿ  ಅದೂ ಕಡಿಮೆಯಾಗಿದೆ. ಗುಡಿಗಾರರ ಜತೆ ಅವರ ಪುತ್ರ, ಇತರ ನಾಲ್ವರು ಕಲಾಕಾರರಿದ್ದಾರೆ.

ವರ್ಷದಿಂದ ವರ್ಷಕ್ಕೆ ಪರಿಸರಸ್ನೇಹಿ ಗಣಪತಿ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆನೆಗುಡ್ಡೆ ಸೇರಿದಂತೆ ಕೆಲವೆಡೆ ಪರಿಸರಸ್ನೇಹಿ ಗಣಪತಿ ಯನ್ನೇ ಕೂರಿಸಲಾಗುತ್ತಿದೆ. ಜನರ ಶ್ರದ್ಧೆ ಭಕ್ತಿಯನ್ನು ಗೌರವಿಸಿ ಸೇವೆ ಎಂಬ ದೃಷ್ಟಿಯಿಂದ 40 ವರ್ಷಗಳಿಂದ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ವಸಂತ ಗುಡಿಗಾರ್‌, ವಿಗ್ರಹ ರಚನಕಾರರು

Advertisement

Udayavani is now on Telegram. Click here to join our channel and stay updated with the latest news.

Next