Advertisement

ದ್ವಿತೀಯ ಪಿಯು ಎಲ್ಲರೂ ಉತ್ತೀರ್ಣ; ಪದವಿ ಸೀಟುಗಳಿಗೆ ಬಹುಬೇಡಿಕೆ! 

07:26 AM Jul 23, 2021 | Team Udayavani |

ಮಂಗಳೂರು: ಈ ಬಾರಿ  ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ರಾಗಿರುವುದರಿಂದ ಪದವಿ ಹಾಗೂ ಇತರ ಶಿಕ್ಷಣ ಕ್ಷೇತ್ರದ ಸೀಟುಗಳಿಗೆ ಬಹುಬೇಡಿಕೆ ಆರಂಭವಾ ಗಿದೆ. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಹಲವು ಕಾಲೇಜುಗಳು ಮಾಡಿಕೊಳ್ಳುತ್ತಿವೆ.

Advertisement

ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ, ವೃತ್ತಿ ಆಧಾರಿತ ವಿವಿಧ ಕೋರ್ಸ್‌ಗೆ ದಾಖ ಲಾತಿ ಆನ್‌ಲೈನ್‌/ಆಫ್‌ಲೈನ್‌ ಮುಖೇನಆರಂಭವಾಗಿದೆ. ದ.ಕ., ಉಡುಪಿಯಲ್ಲಿ ಪ್ರತೀ ವರ್ಷ ದ್ವಿತೀಯ ಪಿಯುವಿನಲ್ಲಿ ಶೇ.90ರ ಆಸುಪಾಸಿನ ಫಲಿತಾಂಶ ಬರುವ ಕಾರಣ ಈ ಬಾರಿ ಕಾಲೇಜು ಸೇರ್ಪಡೆಗೆ ಹೆಚ್ಚಿನ ಒತ್ತಡ ಬರಲಾರದು. ಆದರೂ ಹೊರ ಜಿಲ್ಲೆ/ರಾಜ್ಯದ ವಿದ್ಯಾರ್ಥಿಗಳ ದಾಖಲಾತಿ ಏರಿಕೆಯಾ ದರೆ ಕಾಲೇಜುಗಳಿಗೆ ಸೀಟು ಹೊಂದಿಸುವ ಒತ್ತಡ ಎದುರಾಗಲೂಬಹುದು.

ಸಮಿತಿ ಭೇಟಿ ರದ್ದು:

ಪ್ರತೀ ಬಾರಿ ಕಾಲೇಜಿನ ಸೀಟು ಭರ್ತಿಯ “ರಿನೀವಲ್‌’ (ಮುಂದುವರಿಕೆ ಸಂಯೋಜನೆ) ಸಂಬಂಧಿಸಿ ವಿ.ವಿ.ಯ ಅನುಮತಿ ಪಡೆದು ವಿ.ವಿ.ಯಿಂದ ಪರಿಶೀಲನೆಗೆ ಸಮಿತಿ ತೆರಳಬೇಕಿತ್ತು. ಈ ಬಾರಿ ಸರಕಾರ ಸಮಿತಿಯ ಭೇಟಿಯನ್ನು ರದ್ದು ಮಾಡಿದೆ. ಬದಲಾಗಿ ಕಳೆದ ವರ್ಷ ಕಾಲೇಜಿಗೆ ಎಷ್ಟು ಸೀಟುಗಳ ಅನುಮತಿ ನೀಡಲಾಗಿದೆಯೋ ಅಷ್ಟೇ ಈ ಬಾರಿಯೂ ಅನುಮತಿ ದೊರೆಯಲಿದೆ.

ದೂರಶಿಕ್ಷಣ ಹತ್ತಿರವಾಗಲಿ! : ಈ ಹಿಂದೆ ಕಾಲೇಜುಗಳಲ್ಲಿ ಸೀಟು ಕೊರತೆ ಆದರೂ ಮಂಗಳೂರು ವಿ.ವಿ.ಯ ದೂರ ಶಿಕ್ಷಣದ ಮೂಲಕ ಶಿಕ್ಷಣ ಮುಂದುವರಿಸಲು ಅವಕಾಶವಿತ್ತು. ಆದರೆ ಕಳೆದ ವರ್ಷದಿಂದ ಕರ್ನಾ ಟಕ ರಾಜ್ಯ ಮುಕ್ತ ವಿ.ವಿ. ಗೆ ಮಾತ್ರ ದೂರಶಿಕ್ಷಣದ ಅವಕಾಶ ನೀಡಿರುವು ದರಿಂದ ಮಂಗಳೂರು ವಿ.ವಿ.ಯಲ್ಲಿ ಸ್ಥಗಿತವಾಗಿದೆ. ಈ ಬಾರಿ ಪದವಿಗೆ ಸೇರುವವರ ಸಂಖ್ಯೆ ಏರಿಕೆಯಾಗಬಹುದಾದ ಹಿನ್ನೆಲೆಯಲ್ಲಿ ಈ ವರ್ಷದ ಮಟ್ಟಿಗಾದರೂ ದೂರಶಿಕ್ಷಣಕ್ಕೆ ಅನುಮತಿಸಿದ್ದರೆ, ಅವಕಾಶ ವಂಚಿತರಿಗೆ ಪ್ರಯೋಜನವಾದೀತು ಎಂಬುದು ಪರಿಣತರ ಅಭಿಪ್ರಾಯ.

Advertisement

ಪಾಳಿಯಲ್ಲಿ ತರಗತಿ! :

ಕೆಲವು ಕಾಲೇಜುಗಳಲ್ಲಿ ಸ್ಥಳಾವಕಾಶದ ಕೊರತೆಯ ಕಾರಣ ಪಾಳಿಯಂತೆ (ಬೆಳಗ್ಗೆ 9ರಿಂದ ಮಧ್ಯಾಹ್ನ 1, 2ರಿಂದ ಸಂಜೆ 6) ತರಗತಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಬಿಕಾಂಗೆ ಹೆಚ್ಚಿದ ಬೇಡಿಕೆ :

ಈ ಬಾರಿ ಬಿಕಾಂ ಬಗ್ಗೆ ಹೆಚ್ಚು ಆಸಕ್ತಿ ಕಂಡು ಬಂದಿದೆ. ಹೊರ ಜಿಲ್ಲೆಗಳವರೂ ಕರಾವಳಿಯ ಕಾಲೇ ಜುಗಳಿಗೆ ಸೇರುತ್ತಿದ್ದಾರೆ. ಹೀಗಾಗಿ ಬಿಕಾಂ ಸೀಟು ಕೊರತೆಯಾಗಬಹುದು ಎನ್ನುತ್ತವೆ ವಿವಿ ಮೂಲಗಳು.

ದ್ವಿತೀಯ ಪಿಯು:  ಕಳೆದ  3 ವರ್ಷಗಳ ಫಲಿತಾಂಶ :

ದಕ್ಷಿಣ ಕನ್ನಡ ಜಿಲ್ಲೆ

ಇಸವಿ  ಹಾಜರಾತಿ      ಉತ್ತೀರ್ಣ

2020   34,287 29,494

2019   38,069 33,088

2018   38,578 33,545

ಉಡುಪಿ ಜಿಲ್ಲೆ

2020   15,073 12,961

2019   15,397 13,485

Advertisement

Udayavani is now on Telegram. Click here to join our channel and stay updated with the latest news.

Next