Advertisement
ನಗರದ ಕನ್ನಡ ಜಾಗೃತ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ಸರ್ವ ಪಕ್ಷಗಳ, ನೇಕಾರರ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್ ಅವರು, ಸರ್ಕಾರ ವಿದ್ಯುತ್ ದರ ಸೇರಿದಂತೆ ವಿದ್ಯುತ್ ಬಿಲ್‌ಗಳಲ್ಲಿ ವಿವಿಧ ಶುಲ್ಕಗಳನ್ನು ಹೇರಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ. ಸಂಕಷ್ಟದಲ್ಲಿರುವ ನೇಕಾರರಿಗೆ ವಿದ್ಯುತ್ ಬಿಲ್‌ಗಳು ದುಬಾರಿಯಾಗಿ ಗಾಯದ ಮೇಲೆ ಬರೆ ಎಳೆದಿದೆ ಎಂದರು.
Related Articles
Advertisement
ವಿದ್ಯುತ್ ಮಗ್ಗಗಳ ಸಂಖ್ಯೆ ಹೆಚ್ಚಳ: ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ, ತಾಲೂಕಾದ್ಯಂತ ವಿದ್ಯುತ್ ಮಗ್ಗಗಳ ಸಂಖ್ಯೆ ಹೆಚ್ಚಾಗಿದೆ. ಜವಳಿ ಇಲಾಖೆಯಿಂದ ನಡೆಯುತ್ತಿರುವ ಕಾರ್ಯದಲ್ಲಿ ದಾಖಲಾಗಿರುವ ನೇಕಾರರ ಸಂಖ್ಯೆಗೂ ವಾಸ್ತವವಾಗಿ ನೇಕಾರಿಕೆಯಲ್ಲಿ ತೊಡಗಿರುವ ವ್ಯತ್ಯಾಸವಿದೆ. ಹೀಗಾಗಿ, ಪ್ರತಿಯೊಬ್ಬ ನೇಕಾರರನೂ ಗಣತಿ ಕಾರ್ಯದಲ್ಲಿ ನೋಂದಾಯಿಸಿಕೊಳ್ಳಬೇಕು. ಪಕ್ಷದ ನಮ್ಮ ಅಕ್ಕಪಕ್ಕದ ರಾಜ್ಯದಲ್ಲಿ ನೇಕಾರರಿಗೆ ನೀಡುತ್ತಿರುವ ಸೌಲಭ್ಯವನ್ನು ರಾಜ್ಯ ಸರ್ಕಾರ ರಾಜ್ಯದ ನೇಕಾರರಿಗೂ ನೀಡುವ ಮೂಲಕ ನೇಕಾರರ ಪರವಾಗಿ ನಿಲ್ಲಬೇಕಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟರ್ಕಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರ ತೇಜಸ್ವಿ, ಮುಖಂಡ ಸಂಜೀವ್ ನಾಯಕ್,ಆರ್.ಎಸ್. ಶ್ರೀನಿವಾಸ್, ಸಿ.ಸುರೇಶ್, ಕೆ. ಮಲ್ಲೇಶ್, ಎಂ.ಮುನಿರಾಜು, ಎಂ. ಚೌಡಯ್ಯ, ಕೆ. ರಕುಮಾರ್, ಸದಾಶಿವಪ್ಪ, ಎನ್. ರಾಜಶೇಖರ್, ಸಿ.ಅಶ್ವತ್, ಡಿ.ಎನ್.ಪ್ರಭಾಕರ್ ಹಾಗೂ ಮತ್ತಿತರರು ಇದ್ದರು.
ಧರ್ಮಾವರಂ ಶೈಲಿಯಲ್ಲಿ ಮಾರುಕಟ್ಟೆ ವ್ಯವಸ್ಥೆ: ಭರವೆಸೆ: ಸಹಕಾರ ಇಲಾಖೆಯಲ್ಲಿ ರೈತರಿಗಾಗಿ ವ್ಯವಸ್ಥಿತ-ವಿಭಾಗಗಳು, ಘಟಕಗಳಿವೆ. ಆದರೆ, ನೇಕಾರರಿಗಾಗಿ ಯಾವುದೇ ವ್ಯವಸ್ಥಿತ ಘಟಕಗಳು ಇಲ್ಲ. ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕಾ ಅವಲಂಬಿತರಿಗೆ ಕೇಂದ್ರ ಸರ್ಕಾರ ಡಬ್ಲ್ಯೂಪಿಒ ಯೋಜನೆಯಡಿ ಶೇ.4 ಬಡ್ಡಿದರದಲ್ಲಿ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುತ್ತಿದೆ. ನಗರದ ಡಿ.ಕ್ರಾಸ್ ರಸ್ತೆಯಲ್ಲಿ ನೇಕಾರರ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ 10 ಗುಂಟೆ ಜಮೀನು ಮೀಸಲಿಟ್ಟಿದೆ. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ದಾಖಲೆಗಳಲ್ಲಿ ಜವಳಿ ಇಲಾಖೆ ಎಂದು ಬದಲಾಗಿದ್ದು, ವಾಣಿಜ್ಯ ಸಂಕೀರ್ಣ ಜಾಗ ರೇಷ್ಮೆ ಇಲಾಖೆ ಎಂದು ಬರುತ್ತಿದೆ. ಇದನ್ನು ಸರಿಪಡಿಸಿ, ಧರ್ಮಾವರಂ ಶೈಲಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ವಿದ್ಯುತ್ ಜಾಲಿತ ಮಗ್ಗಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕ್ರಮ ವಹಿಸಲಾ ಗುವುದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.